ಕಣಿವೆ, ಸೆ. ೫: ಕೇಂದ್ರ ಸರ್ಕಾರದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಆಪ್ತ ಕಾರ್ಯದರ್ಶಿಯಾಗಿರುವ ಕುಶಾಲನಗರದ ಐಎಎಸ್ ಅಧಿಕಾರಿ ಎಸ್.ಎಸ್. ನಕುಲ್ ಕುಶಾಲನಗರದ ರಥಬೀದಿಯಲ್ಲಿರುವ ತಮ್ಮ ಮನೆಗೆ ಧಾವಿಸಿದಾಗ ಮನೆಯೊಳಗೆ ಪೋಷಕರೊಂದಿಗೆ ಮಗುವಾದರು.
ಯಾವಾಗಲೂ ಕರ್ತವ್ಯದ ಒತ್ತಡದಲ್ಲಿ ಮಗ್ನರಾಗುತ್ತಿದ್ದ ನಕುಲ್ ಅವರಿಗೆ ಅವರ ತಂದೆ ರೋಟರಿ ಸಂಸ್ಥೆ ಉಪರಾಜ್ಯಪಾಲರು ಆದಂತಹ ಎಸ್.ಕೆ.ಸತೀಶ್ ಹರಳೆಣ್ಣೆಯನ್ನು ಹಚ್ಚುವ ಮೂಲಕ ಮಗುವಿನಂತೆಯೇ ಮುದ್ದಾಡಿದರು.
ಈ ಸಂದರ್ಭ ನಕುಲ್ ತಮ್ಮ ಪುತ್ರನ ತಲೆಗೆ ಎಣ್ಣೆ ಹಚ್ಚುತ್ತಿದ್ದರೆ, ನಕುಲ್ ಸುಪುತ್ರ ಸಾಕು ನಾಯಿ ತಲೆ ನೇವರಿಸುತ್ತಿದ್ದನು.
ತಾನು ಭಾರತ ಸರ್ಕಾರದ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿ ಎಂಬ ಹಮ್ಮು ಬಿಮ್ಮು ಏನೂ ಕೂಡ ತೋರ್ಪಡಿಸದ ಈ ಅಧಿಕಾರಿ ನಕುಲ್ ಸರಳತೆ ಇತರ ಅಧಿಕಾರಿಗಳಿಗೆ ಮಾದರಿ.
ಬಳಿಕ ತಂದೆಯ ಅಣತಿಯಂತೆ ಕುಶಾಲನಗರದ ವಿವಿಧ ಕಾಲೇಜುಗಳಿಗೆ ತೆರಳಿ ಕಾಲೇಜು ಮಕ್ಕಳ ಜೊತೆ ವ್ಯಕ್ತಿತ್ವ ವಿಕಸನದ ಕುರಿತು ಸಂವಾದ ನಡೆಸಿದರು. (ವರದಿ - ಕೆ.ಎಸ್.ಮೂರ್ತಿ)