ಪೊನ್ನಂಪೇಟೆ, ಸೆ. ೫: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ನಡೆದ ತಾಲೂಕುಮಟ್ಟದ ಕ್ರೀಡಾಕೂಟದ ಬಾಲಕರ ಕಬಡ್ಡಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿರುದ್ಧ ೪೩-೧೦ ಅಂಕಗಳ ಅಂತರದಿAದ ಗೆಲುವು ಸಾಧಿಸುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಂಡದ ನಾಯಕ ತಿನಿತ್ ನೇತೃತ್ವದಲ್ಲಿ ಅಯ್ಯಪ್ಪ, ಗಣೇಶ್, ಯಧುಕುಮಾರ್, ವರುಣ್, ಘನಶಾಮ್, ಲತೀಶ್, ದಿಗಂತ್ ಗೌಡ ಉತ್ತಮ ಪ್ರದರ್ಶನ ತೋರುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಜೇತ ತಂಡದೊAದಿಗೆ ದೈಹಿಕ ಶಿಕ್ಷಕರಾದ ಮಹೇಶ್, ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಗ್ರಾ.ಪಂ. ಸದಸ್ಯ ರಾಮಕೃಷ್ಣ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್, ಶಿಕ್ಷಕರಾದ ಜಾನ್ಸಿ, ರೋಸಿ, ಶಕೀಲಾ ಬಾನು, ವಿನಿತ, ಚಂದ್ರಮತಿ ಇದ್ದಾರೆ.