ಮಡಿಕೇರಿ, ಸೆ. ೫; ಜಿಲ್ಲೆಯ ವಿವಿಧೆಡೆ ಗಣೇಶ ವಿಸÀರ್ಜನೆ ಹಿನ್ನೆಲೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಆದೇಶ ಹೊರಡಿಸಿದ್ದಾರೆ.

ವೀರಾಜಪೇಟೆ ನಗರದಲ್ಲಿ ತಾ. ೯ ರಂದು ೨೨ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವ ಹಿನ್ನೆಲೆ ತಾ. ೮ ರ ಮಧ್ಯರಾತ್ರಿ ೧೨ ಗಂಟೆಯಿAದ ತಾ. ೯ ರ ಮಧ್ಯರಾತ್ರಿ ೧೨ ಗಂಟೆಯ ತನಕ ವೀರಾಜಪೇಟೆ ಸುತ್ತಮುತ್ತಲಿನ ೨೦ ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದಾರೆ.

ವಿವಿಧೆಡೆ ಮದ್ಯ ಮಾರಾಟ ನಿಷೇಧ

(ಮೊದಲ ಪುಟದಿಂದ) ಕಾಂತೂರು ಮೂರ್ನಾಡಿನಲ್ಲಿ ೪ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆ ತಾ. ೬ ರಂದು ನಡೆಯುವುದರಿಂದ ತಾ. ೫ ರ ಮಧ್ಯರಾತ್ರಿ ೧೨ ಗಂಟೆಯಿAದ ತಾ. ೬ ರ ಮಧ್ಯರಾತ್ರಿ ೧೨ ಗಂಟೆಯ ತನಕ ಹಾಕತ್ತೂರು ಮತ್ತು ಮೂರ್ನಾಡು ನಗರದ ಸುತ್ತಮುತ್ತಲಿನ ೫ ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧಿಸಲಾಗಿದೆ.

ತಾ. ೭ ರಂದು ಪೊನ್ನಂಪೇಟೆಯಲ್ಲಿ ೬ ಗಣೇಶ ಮೂರ್ತಿಗಳ ವಿಸರ್ಜನೆ ಇರುವ ಕಾರಣದಿಂದ ತಾ. ೬ ರ ಮಧ್ಯರಾತ್ರಿ ೧೨ ಗಂಟೆಯಿAದ ತಾ. ೭ ರ ಮಧ್ಯರಾತ್ರಿ ೧೨ ಗಂಟೆಯ ತನಕ ಪೊನ್ನಂಪೇಟೆ ನಗರ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.