ಪೊನ್ನಂಪೇಟೆ, ಸೆ.೪: ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ರೂರಲ್ ಡಿಸ್ಟಿçಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ನಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಜೂನಿಯರ್ ವಿಭಾಗದ ೬೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕೊಡಗಿನ ಮಾಚಂಗಡ ಧವಲ್ ದೇವಯ್ಯ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇವರು ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಗ್ರಾಮದ ಮಾಚಂಗಡ ನಿರನ್ ಮೊಣ್ಣಪ್ಪ ಮತ್ತು ಆಶಿತ್ ಚೋಂದಮ್ಮ ದಂಪತಿಯ ಪುತ್ರ.