ನಾಪೋಕ್ಲು, ಸೆ. ೪: ನಾಪೋಕ್ಲು ವ್ಯಾಪ್ತಿಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ವಿವಿಧ ಕ್ರೀಡಾಕೂಟಗಳೊಂದಿಗೆ ಸಂಭ್ರಮದಿAದ ಆಚರಿಸಲಾಯಿತು. ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಹಗ್ಗ ಜಗ್ಗಾಟ , ಮಡಿಕೆ ಒಡೆಯುವುದು, ಭಾರದ ಕಲ್ಲು ಎಸೆತ ಸೇರಿದಂತೆ ಹಲವು ಸ್ಪರ್ಧೆಗಳು ಜರುಗಿದವು. ಬಲ್ಲಮಾವಟಿ ಗ್ರಾಮದ ಅಪೋಲೋ ಯುವಕ ಸಂಘದ ವತಿಯಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ನಾಪೋಕ್ಲು ಭಗವತಿ ಯುವಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕೈಲ್ ಮುಹೂರ್ತ ಕ್ರೀಡಾಕೂಟ ಸ್ಥಳೀಯ ಸ. ಮಾದರಿ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಗ್ರಾಮಸ್ಥರು ಸೇರುವುದರೊಂದಿಗೆ ವಿಜೃಂಭಣೆಯಿAದ ಜರುಗಿತು.
ವಿಜೇತರ ವಿವರ: ಬಾಲಕಿಯರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಶಿವಚಾಳಿಯಂಡ ಜಶಿತ ಪ್ರಥಮ ಸ್ಥಾನವನ್ನು, ಗ್ರೀಷ್ಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಬಾಲಕರ ವಿಭಾಗದ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಶಿವಚಾಳಿಯಂಡ ಸುಬ್ಬಯ್ಯ ಸುಹಾಸ್ ಪ್ರಥಮ ಸ್ಥಾನವನ್ನು ಡಾನ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಪುಟಾಣಿ ಮಕ್ಕಳ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಶಿವಚಾಳಿಯಂಡ ಸುಬಿನ್ ಸುಬ್ಬಯ್ಯ ಪ್ರಥಮ ಸ್ಥಾನವನ್ನು, ಶಿವಚಾಳಿಯಂಡ ಡಾನ್ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಸ್ವರತಂಗಮ್ಮ ಪ್ರಥಮ ಸ್ಥಾನವನ್ನು, ಇಂಚರ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಪ್ರೌಢಶಾಲಾ ವಿಭಾಗದ ಬಾಲಕಿಯರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಶಿವಚಾಳಿಯಂಡ ಮಾನ್ಯ ಕಾವೇರಮ್ಮ ಪ್ರಥಮ ಸ್ಥಾನವನ್ನು, ಕೇಲೇಟ್ಟಿರ ದೇಚಮ್ಮ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಪುಟಾಣಿ ಮಕ್ಕಳ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಚೀಯಕಪೂವಂಡ ಸ್ವರ ತಂಗಮ ಪ್ರಥಮ ಸ್ಥಾನ ಪಡೆದರೆ, ಶಿವಚಾಳಿಯಂಡ ಲಿಖಿತ ಪೊನ್ನಮ್ಮ ಮತ್ತು ಶಿವಚಾಳಿಯಂಡ ನೀಲ್ ಕಾವೇರಮ್ಮ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ಪೊಟೇಟೊ ರೇಸ್ ಸ್ಪರ್ಧೆಯಲ್ಲಿ ನಾಟೋಳಂಡ ಬಿಂದು ಪ್ರಥಮ ಸ್ಥಾನವನ್ನು, ಕೇಲೇಟ್ಟಿರ ಸಂಧ್ಯಾ ದೀಪು ದ್ವಿತೀಯ ಸ್ಥಾನವನ್ನು ಪಡೆದರು. ಬಾಲಕಿಯರ ಆಲೂಗಡ್ಡೆ ಓಟದ ಸ್ಪರ್ಧೆಯಲ್ಲಿ ಶಿವಚಾಳಿಯಂಡ ಮಾನ್ಯ ಕಾವೇರಮ್ಮ ಪ್ರಥಮ ಸ್ಥಾನವನ್ನು, ಕೇಟೋಳಿರ ದೇಚಮ್ಮ ದ್ವಿತೀಯ ಸ್ಥಾನವನ್ನು ಗಳಿಸಿದರು. ಸೂಜಿ ನೂಲು ಓಟದ ಸ್ಪರ್ಧೆಯಲ್ಲಿ ಶಿವಚಾಳಿಯಂಡ ಮೌನ ಕಾವೇರಮ್ಮ ಪ್ರಥಮ ಸ್ಥಾನವನ್ನು, ಕೇಟೋಳಿರ ದೇಚಮ್ಮ ದ್ವಿತೀಯ ಸ್ಥಾನವನ್ನು ಪಡೆದರು.
ವಾಲಗ ನೃತ್ಯ ಸ್ಪರ್ಧೆಯ ಮಕ್ಕಳ ವಿಭಾಗದಲ್ಲಿ ಕೇಲೇಟ್ಟಿರ ಗೇಲ್ ನಾಚಪ್ಪ ಪ್ರಥಮ ಸ್ಥಾನವನ್ನು, ಡೆನ್ ಪೊನ್ನಣ್ಣ ದ್ವಿತೀಯ ಸ್ಥಾನವನ್ನು ಗಳಿಸಿದರು. ಪುರುಷರ ವಿಭಾಗದಲ್ಲಿ ಪುನೀತ್ ಪ್ರಥಮ ಸ್ಥಾನವನ್ನು, ಶಿವಚಾಳಿಯಂಡ ವಿಜು ದ್ವಿತೀಯ ಸ್ಥಾನವನ್ನು ಗಳಿಸಿದರು. ಮಹಿಳಾ ವಿಭಾಗದಲ್ಲಿ ಅಜ್ಜೇಟ್ಟಿರ ವಿಲ್ಮಾ ಪ್ರಥಮ ಸ್ಥಾನಕ್ಕೆ ಭಾಜನರಾದರೆ, ಶಿವಚಾಳಿಯಂಡ ವಿಲ್ಮಾ ದ್ವಿತೀಯ ಸ್ಥಾನ ಗಳಿಸಿದರು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಅಜ್ಜೇಟ್ಟಿರ ಸೋಮಯ್ಯ ಪ್ರಥಮ ಬಹುಮಾನ ಪಡೆದುಕೊಂಡರು. ಅಜ್ಜೇಟ್ಟಿರ ಪೊನ್ನಣ್ಣ ದ್ವಿತೀಯ ಸ್ಥಾನ ಗಳಿಸಿದರು. ಹಗ್ಗ ಜಗ್ಗಾಟ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಪ್ರಥಮ ಕೇಲೇಟ್ಟಿರ ಕುಟುಂಬ, ದ್ವಿತೀಯ ಭಗವತಿ ತಂಡ. ಪುರುಷರ ವಿಭಾಗದಲ್ಲಿ ಶಿವಾಜಿ ಯುವಕ ಸಂಘ ಪ್ರಥಮ, ಭಗವತಿ ಯುವಕ ಸಂಘ ದ್ವಿತೀಯ ಸ್ಥಾನ ಗಳಿಸಿದವು.
ಬಹುಮಾನ ವಿತರಣಾ ಸಮಾರಂಭದಲ್ಲಿ ಭಗವತಿ ಯುವಕಸಂಘದ ಅಧ್ಯಕ್ಷ ಕುಲ್ಲೇಟಿರ ದೇವಯ್ಯ ಅಧ್ಯಕ್ಷತೆ ವಹಿಸಿದ್ದ ವೇದಿಕೆಯಲ್ಲಿ ಕೆ.ಡಿ.ಪಿ. ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ನಾಪೋಕ್ಲು, ಕೇಲೇಟ್ಟಿರ ಮಾಲಾ ಬೋಪಯ್ಯ, ಜಗದೀಶ್, ಅರೆಯಡ ಅಶೋಕ್, ಶಿವಚಾಳಿಯಂಡ ವಿಜು ಪೂಣಚ್ಜ, ಕೇಲೇಟ್ಟಿರ ಸಾಬು ನಾಣಯ್ಯ, ದೇವಿ ದೇವಯ್ಯ, ಸಹದೇವ, ನಾಟೋಳಂಡ ಕಸ್ತೂರಿ, ಭಗವತಿ ಯುವಕ ಸಂಘದ ಕಾರ್ಯದರ್ಶಿ ಕಿಶೋರ್ ಬೋಪಣ್ಣ, ಶಿವಚಾಳಿಯಂಡ ಜಗದೀಶ್, ಕಂಗAಡ ಜಾಲಿ ಪೂವಪ್ಪ, ಅಜ್ಜೇಟ್ಟಿರ ವಿಕ್ರಂ, ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.