ಗುರುದೇವೋಭವ ಗುರು, ಸರ್ವಕಾಲಿಕ ಸರ್ವ ಧಾರ್ಮಿಕ ದೇವರು.'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ದಾರ್ಶನಿಕರ ಮಾತು ಅಕ್ಷರಶಃ ಸತ್ಯವಾದದ್ದು, ಪ್ರತಿಯೊಬ್ಬರಿಗೂ ತನ್ನ ತಾಯಿಯೇ ಮೊದಲ ಗುರುವಾಗಿರುತ್ತಾಳೆ. ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಶಿಕ್ಷಕರ ಪಾತ್ರ ಅಪಾರವಾದದ್ದು.‘ಶಿಕ್ಷಕ’ ಎಂಬುದು ಎಲ್ಲದಕ್ಕೂ ಮಿಗಿಲಾದ ಶ್ರೇಷ್ಠ ಹಾಗೂ ಪವಿತ್ರವಾದ ಪದ.'ಶಿ' ಎಂದರೆ ಶಿಸ್ತಿನಿಂದ, 'ಕ್ಷ' ಎಂದರೆ ಕ್ಷಮಿಸುತ್ತಾ 'ಕ'ಎಂದರೆ ಕಲಿಸುವುದು ಎಂದರ್ಥ. ವಿದ್ಯಾರ್ಥಿಗಳನ್ನು ಅಂಧಕಾರದಿAದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ಸಾಮಾನ್ಯತೆಯಿಂದ ಅಸಮಾನ್ಯತೆಯ ಕಡೆಗೆ ಕೊಂಡೊಯ್ಯುವ ಕಾಯಕ ಶಿಕ್ಷಕರದ್ದಾಗಿರುತ್ತದೆ, ಹಾಗಾಗಿ ಗುರು - ಗೋವಿಂದ ಇವರಿಬ್ಬರಲ್ಲಿ ಗುರುವೇ ಶ್ರೇಷ್ಠ ಎಂಬ ಕಬೀರರ ಮಾತು ಗುರುವಿನ ವೈಶಿಷ್ಟ್ಯತೆಯನ್ನು ಸಾರುತ್ತದೆ. ಏಕೆಂದರೆ ಗೋವಿಂದ (ಭಗವಂತ)ನ ಇರುವಿಕೆಯ ಕುರುಹನ್ನು ತೋರಿಸಿದವನೇ ಗುರುವಾಗಿರುತ್ತಾನೆ. ಪ್ರತಿಯೊಬ್ಬರಿಗೂ ಹುಟ್ಟು -ಸಾವು ಎಂಬುದು ನಿಶ್ಚಿತ. ಆದರೆ ಇವೆರಡರ ನಡುವಿನ ಬದುಕಿನ ಸಮಯವು ಸಾಧಕನದ್ದಾಗಿರಬೇಕು. ಅಂತಹ ಸಾಧಕನ ಸಾಧನೆಗೆ ದಾರಿ ತೋರಿಸಿ ನೀರುಣಿಸುವವನೇ ಗುರು. ಒಬ್ಬ ನಿಜವಾದ ಶಿಕ್ಷಕ ಒಂದು ಆಲದ ಮರವಿದ್ದಂತೆ, ಉಪಯೋಗಿಸಿದಷ್ಟೂ ಅದರ ಆಳಗಲ ಪ್ರಬುದ್ಧವಾಗುತ್ತಾ ಹೋಗುತ್ತದೆ. ಶಿಕ್ಷಣ ಕ್ಷೇತ್ರವು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅನಾದಿ ಕಾಲದಿಂದಲೂ ಗುರು - ಶಿಷ್ಯರ ನಡುವೆ ಅವಿನಾಭಾವ ಸಂಬAಧವಿದೆ. ಶಿಕ್ಷಕ ವೃತ್ತಿ ಇತರ ವೃತ್ತಿಗಳಿಗಿಂತ ಭಿನ್ನವಾದದ್ದು. ಸಾವಿರಾರು ವಿದ್ಯಾರ್ಥಿಗಳು ಅವರನ್ನು ಗಮನಿಸುತ್ತಾರೆ, ಅನುಸರಿಸುತ್ತಾರೆ. ನಿವೃತ್ತಿ ಬದುಕಿನ ನಂತರವೂ ಗೌರವ, ಸಮ್ಮಾನ, ಪೂಜ್ಯನೀಯ ಸ್ಥಾನ ಸಿಗುತ್ತದೆ ಎಂಬುದು ಹೌದಾದರೆ ಅದು ಸಾಮಾನ್ಯವಾಗಿ ಶಿಕ್ಷಕರಿಗೆ ಮಾತ್ರ. ಹಾಗಾಗಿ ಶಿಕ್ಷಕನ ಬದುಕು ಇತರರಿಗೆ ಮಾರ್ಗದರ್ಶಿಯಾಗಿರಬೇಕು.
-ಕವಿತಾ ಪುಟ್ಟೇಗೌಡ, ಹೆಬ್ಬಾಲೆ ಪ್ರೌಢಶಾಲೆ
ಒಂದು ದೇಶದ ಭವಿಷ್ಯವನ್ನು ಅಲ್ಲಿರುವ ವಿದ್ಯಾರ್ಥಿಗಳ ಗುಣಮಟ್ಟವು ನಿರ್ಧರಿಸುತ್ತದೆ ಎನ್ನಲಾಗಿದೆ. ಇಂದು ಮಕ್ಕಳಾಗಿದ್ದರೂ ಮುಂದೆ ಅವರು ದೇಶದ ಪ್ರಜೆಗಳಾಗುವುದರಿಂದ ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಉತ್ತಮವಾದ ಶಿಕ್ಷಣವನ್ನು ನೀಡುವುದು ಬಹಳ ಪ್ರಮುಖವಾದ ಅಂಶವಾಗಿದೆ. ದೇಶದ ಭವಿಷ್ಯವನ್ನು ನಿರ್ಧರಿಸುವ ಈ ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿಗೊಳಿಸುವುದರಲ್ಲಿ ಶಿಕ್ಷಕರ ಪಾತ್ರವು ಮಹತ್ತರವಾದುದು.
ತಾಯಿಯು ಮಗುವಿಗೆ ಜೀವವನ್ನು ನೀಡುವುದಾದರೆ, ಶಿಕ್ಷಕರು ಮಗುವಿಗೆ ಜೀವನವನ್ನು ನೀಡುವವರಾಗಿದ್ದಾರೆ.ಹಾಗಾಗಿ ಕೇವಲ ಓದುಬರಹಗಳಲ್ಲದೆ ಮುಂದೆ ಬದುಕುವ ಮಾರ್ಗವನ್ನು ಅವರು ತೋರಿಸಿಕೊಡಬೇಕಾಗುತ್ತದೆ. ಮೊದಲನೆಯದಾಗಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸಬೇಕಾಗುತ್ತದೆ. ಎಳವೆಯಲ್ಲಿ ಬಗ್ಗದ ಚಿಗುರನ್ನು ಮರವಾದ ಮೇಲೆ ಎಂದಿಗೂ ಬಗ್ಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಎಳವೆಯಲ್ಲಿಯೇ ಮಕ್ಕಳಿಗೆ ಶಿಸ್ತಿನ ಮಹತ್ವವನ್ನು ಉದಾಹರಣೆಗಳ ಮೂಲಕ ತಿಳಿಸಿ ಆ ಶಿಸ್ತನ್ನು ಕಲಿಯುವಂತೆ ಮಾಡಬೇಕು.
ಮಕ್ಕಳಿಗೆ ಸಮಯದ ಬಗ್ಗೆ ಶಿಸ್ತನ್ನು ಕಲಿಸುವುದು ಎಲ್ಲ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಶಿಕ್ಷಕರು ಶಾಲೆಗೆ ಸರಿಯಾದ ಸಮಯದಲ್ಲಿ ಬರುವುದು, ನಿಗದಿತ ಸಮಯದಲ್ಲಿ ಮಾಡಬೇಕಾದ ಪಠ್ಯಗಳನ್ನು ಮುಗಿಸುವುದು, ಇವು ಶಿಕ್ಷಕರ ಮುಖ್ಯಗುಣಗಳು. ತಾವೇ ತಡವಾಗಿ ಶಾಲೆಗೆ ಬಂದು ಮಕ್ಕಳು ತಡವಾಗಿ ಬಂದುದಕ್ಕೆ ಶಿಕ್ಷಿಸುವುದು ಸರಿಯಾದ ಕ್ರಮ ಆಗಲಾರದು. ಮಕ್ಕಳಲ್ಲಿ ಕೀಳರಿಮೆಯನ್ನು ತೊಲಗಿಸುವುದು ಶಿಕ್ಷಕರ ಮತ್ತೊಂದು ಜವಾಬ್ದಾರಿಯಾಗಿದೆ.ವಿದ್ಯಾರ್ಥಿಗಳು ಎಡವಿದಾಗ ಅವರಲ್ಲಿ ಆತ್ಮಸ್ಥೆöÊರ್ಯ ತುಂಬಿ ಕೈಹಿಡಿದು ನಡೆಸುವ ಗುಣವು ಶಿಕ್ಷಕರಿಗೆ ಸಿದ್ಧಿಸಿರಬೇಕು. ಮಕ್ಕಳಿಗೆ ಪಾಠದ ಜೊತೆಯಲ್ಲಿ ನಮ್ಮ ಹಿರಿಯರ, ಮಹಾ ಸಾಧಕರ ಜೀವನಚರಿತ್ರೆಯನ್ನು ವಿವರಿಸಿ ವಿದ್ಯಾರ್ಥಿಗಳಲ್ಲೂ ಸಾಧಕರಾಗುವ, ಗುರಿಯನ್ನು ಮುಟ್ಟುವ ಬಗ್ಗೆ ಪ್ರೇರಣೆಯನ್ನು ನೀಡಬೇಕಾಗುತ್ತದೆ.
ಕೇವಲ ಅಕ್ಷರಗಳ ಕಲಿಕೆ ಮಾತ್ರವಲ್ಲ, ಅದರೊಂದಿಗೆ ಬದುಕನ್ನು ನಡೆಸುವ ಅರಿವನ್ನೂ ಶಿಕ್ಷಕರು ಮಕ್ಕಳಿಗೆ ತಿಳಿಸಬೇಕಾಗುತ್ತದೆ. ಹೇಗೋ ಬದುಕು ಸಾಗಿಸಬಹುದು ಎನ್ನುವ ಮಕ್ಕಳಿಗೆ ಹೇಗೋ ಅಲ್ಲ, ಹೀಗೆಯೇ ಮೌಲ್ಯಯುತ ಬದುಕನ್ನು ಸಾಗಿಸಬೇಕು ಎನ್ನುವುದನ್ನು ಕಲಿಸಬೇಕಾಗುತ್ತದೆ. ಎಲ್ಲ ಧರ್ಮದವರೂ ಒಂದಾಗಿ ಕಲಿಕೆಗೆ ಇಳಿದಿರುವಾಗ ಸ್ವಾರ್ಥಕ್ಕೋಸ್ಕರ ಧರ್ಮಸಂಘರ್ಷಗಳನ್ನು ಮಾಡುವ ರಾಜಕಾರಣಿಗಳನ್ನು ಕಲಿಕಾ ಸಮಯದಲ್ಲಿ ದೂರವಿರುವಂತೆ ನೋಡಿಕೊಳ್ಳಬೇಕು.
ಎಲ್ಲದಕ್ಕಿಂತ ಮುಖ್ಯವೆಂದರೆ ಮಕ್ಕಳಲ್ಲಿ ದೇಶಾಭಿಮಾನವನ್ನು ಬೆಳೆಸುವುದು. ನಮ್ಮ ಈ ನಾಡು ನಮ್ಮ ತಾಯಿಯಷ್ಟೇ ಶ್ರೇಷ್ಠ ಎನ್ನುವ ಭಾವನೆಯನ್ನು ಎಳವೆಯಲ್ಲಿಯೇ ಮಕ್ಕಳ ಮನದಲ್ಲಿ ಬಿತ್ತಬೇಕು. ಪರಿಸರಪ್ರಜ್ಞೆ, ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಅಗತ್ಯ, ಪ್ರಾಣಿಗಳಲ್ಲಿ ದಯೆಯನ್ನು ತೋರುವಿಕೆ,ಯೋಗದಿಂದಾಗುವ ಪ್ರಯೋಜನಗಳು, ಶುಚಿತ್ವ, ಪ್ಲಾಸ್ಟಿಕ್‌ಗಳನ್ನು ಅಲ್ಲಲ್ಲಿ ಹಾಕದಿರುವಿಕೆ, ದೇಹದ ಆರೋಗ್ಯವನ್ನು ಕಾಪಾಡಲು ಆಟಗಳಿಗಿರುವ ಪ್ರಾಮುಖ್ಯತೆ, ಹಿರಿಯರಿಗೆ ತೋರಿಸಬೇಕಾದ ಗೌರವ, ಮಾನಸಿಕ ಸ್ಥಿಮಿತವನ್ನು ಬಲಪಡಿಸಿಕೊಳ್ಳಲು ಪ್ರಾರ್ಥನೆಯ ಅಗತ್ಯ, ಮಾನಸಿಕ ಬೆಳವಣಿಗೆಗಾಗಿ ಕಥೆ ಕಾದಂಬರಿಗಳ ಓದುವಿಕೆ, ಯಾವುದೇ ಅಪರಾಧಗಳನ್ನು ಮಾಡಿದರೆ ಸಮಾಜದಲ್ಲಿ ಆಗಬಹುದಾದ ಅವಮಾನ ಹೀಗೆ ಹಲವಾರು ಗಂಭೀರ ವಿಷಯಗಳ ಬಗ್ಗೆ ಆದರ್ಶಗುರುವು ಮಕ್ಕಳಿಗೆ ಕಲಿಸಿಕೊಡುತ್ತಾರೆ.
ಹೀಗೆ ದೇಶದ ಮುಂದಿನ ಪ್ರಜೆಗಳನ್ನು ಎಳವೆಯಿಂದಲೇ ತಿದ್ದಿ ತಮ್ಮ ವೃತ್ತಿಯ ಗೌರವವನ್ನು ಶಿಕ್ಷಕರು ಮೆರೆಸಿಕೊಳ್ಳಬೇಕು. ಮಕ್ಕಳು ಮುಂದೆ ಉತ್ತಮ ಪ್ರಜೆಗಳಾಗಬೇಕು ಎಂಬ ಚಿಂತನೆಯನ್ನು ತಮ್ಮ ಮನದಲ್ಲಿ ಬಲವಾಗಿ ಹುದುಗಿಸಿಕೊಳ್ಳಬೇಕು ಆಗ ಅಂತಹ ಶಿಕ್ಷಕರು ಮಕ್ಕಳ ಮನದಲ್ಲಿ ಕೊನೆಯುವರೆಗೂ ಆಳವಾಗಿ ಉಳಿದುಬಿಡುತ್ತಾರೆ, ಮಕ್ಕಳ ಪೋಷಕರಲ್ಲದೆ ಇತರ ಹಿರಿಯ ನಾಗರಿಕರಿಂದಲೂ ಶ್ಲಾಘನೆಗೆ ಒಳಗಾಗುತ್ತಾರೆ.
-ಕಿಗ್ಗಾಲು ಎಸ್ ಗಿರೀಶ್, ಮೂರ್ನಾಡು ಶಿಕ್ಷಕರ ಕೊಡುಗೆ ಅಪಾರ
ಪ್ರತಿ ವರ್ಷ ಸೆಪ್ಟಂಬರ್ ೫ ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಸೆಪ್ಟಂಬರ್ ೫ ರಂದು ಮಹಾನ್ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಇವರು ಭಾರತದ ಪ್ರಪ್ರಥಮ ಉಪರಾಷ್ಟçಪತಿಗಳಾಗಿ ಹತ್ತು ವರ್ಷ ಹಾಗೂ ದೇಶದ ರಾಷ್ಟçಪತಿಗಳಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ೧೯೫೪ರಲ್ಲಿ ಇವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದು ಎಂಬ ಉದ್ದೇಶಕ್ಕಾಗಿ ನಮ್ಮ ತಪ್ಪುಗಳನ್ನು ತಿದ್ದಿ ನಮ್ಮ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವ ಶಿಕ್ಷಕರ ದಿನವನ್ನಾಗಿ ಸೆಪ್ಟಂಬರ್ ೫ ನ್ನು ಆಚರಿಸಲು ಅವರು ಘೋಷಣೆ ಮಾಡಿದರು.
ವಿದ್ಯೆ ಎನ್ನುವುದು ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸರ್ವಶ್ರೇಷ್ಠರನ್ನಾಗಿಸುವ ಸಂಪತ್ತಾಗಿದೆ. ವಿದ್ಯೆಯಿಲ್ಲದ ಯಾವ ವ್ಯಕ್ತಿಯು ಪರಿಪೂರ್ಣನಾಗಲಾರ. ಅತ್ಯುತ್ತಮ ಶಿಕ್ಷಣ ಪದ್ಧತಿಯು ದೇಶವನ್ನು ಬಲಿಷ್ಠಗೊಳಿಸುತ್ತದೆ. ದೇಶದಲ್ಲಿ ಶೀಕ್ಷಕರು ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆಗಳು ಇಲ್ಲದೆ ಹೋದಲ್ಲಿ ದೇಶ ಮುನ್ನಡೆಯುವುದು ಸಾಧ್ಯವೇ ಇಲ್ಲ. ಸಂಸ್ಕಾರಯುತ ಸಮಾಜ ನಿರ್ಮಾಣದ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ತಮ್ಮ ಜೀವನಪೂರ್ತಿ ನಿಸ್ವಾರ್ಥ ಭಾವದಿಂದ ಸೇವೆಗೈದು ಸಾವಿರಾರು ಮಕ್ಕಳ ಜೀವನವನ್ನು ರೂಪಿಸುತ್ತಿರುವ ನಮ್ಮ ಗುರುಗಳು ನಮಗೆ ಪೂಜನೀಯರಾಗಿದ್ದಾರೆ. ನಮ್ಮೊಳಗಿನ ಅಹಂಕಾರ, ಅಂದಕಾರಗಳನ್ನು ತೊಡೆದು ನಮ್ಮಲ್ಲಿ ಏಕಾಗ್ರತೆ, ಜ್ಞಾನ, ಆದರ್ಶಗಳನ್ನು ತುಂಬಿ ನಮ್ಮನ್ನು ಸತ್ಪೆçಜೆಗಳನ್ನಾಗಿ ಮಾಡುವ ಮೂಲಕ ಇಂದು ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನೆಲೆಗೆ ಬರುವಂತಾಗಲು ಗುರುವೃಂದದ ಕೊಡುಗೆ ಅಪಾರವಾಗಿದೆ.
ವಕೀಲರು ಇಲ್ಲದಿದ್ದರೆ - ನ್ಯಾಯವಿಲ್ಲ, ವೈದ್ಯರು ಇಲ್ಲದಿದ್ದರೆ - ಆರೋಗ್ಯವಿಲ್ಲ, ಪೊಲೀಸರು ಇಲ್ಲದಿದ್ದರೆ - ಭದ್ರತೆ ಇಲ್ಲೆ. ಆದರೆ ಶಿಕ್ಷಕ ಇಲ್ಲದಿದ್ದರೆ ಈ ಮೇಲಿನ ಯಾರೂ ಇಲ್ಲ. ನಾವೆಲ್ಲರೂ ಗುರುಗಳನ್ನು ಪೂಜ್ಯಭಾವನೆಯೊಂದಿಗೆ ಗೌರವಿಸೋಣ, ನಮಿಸೋಣ.
|| ಗುರಭ್ಯೋ ನಮಃ||
- ಯುಕ್ತ ಟಿ.ಕೆ., ೧೦ನೇ ತರಗತಿ, ಸಂತ ಜೋಸೆಫರ ಪ್ರೌಢಶಾಲೆ, ಮಡಿಕೇರಿ.
ಗುರುವಿನಲ್ಲಿಯೇ ತ್ರಿಮೂರ್ತಿಗಳನ್ನು ಕಾಣುತ್ತಿರುವ ಹೆಸರಾಂತ ಪರಂಪರೆ ನಮ್ಮದು. ಸಮಾಜಕ್ಕೆ ಶಿಕ್ಷಕರು ನೀಡುವ ಕೊಡುಗೆ ಅಪಾರ-ಅತ್ಯದ್ಭುತ. ಈ ಮಹತ್ಕಾರ್ಯವನ್ನು ಗುರುತಿಸಲು, ಶಿಕ್ಷಕ ವೃಂದಕ್ಕೆ ಧನ್ಯವಾದ ಅರ್ಪಿಸುವ ಸುದಿನ. ಆ ದಿನವೇ ಶಿಕ್ಷಕರ ದಿನಾಚರಣೆ. ಅವರ ಸಮಾಜಮುಖಿ ಸೇವೆಯನ್ನು ಮುಕ್ತಕಂಠದಿAದ ಶ್ಲಾಘಿಸಲು ಮತ್ತು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಇದು ಸಮಾಜದ ಅಗತ್ಯಗಳಿಗೆ ಸ್ಪಂದಿಸುವುದರೊAದಿಗೆ ಬೋಧನಾ ಭ್ರಾತೃತ್ವವನ್ನು ನಿರಂತರವಾಗಿ ಪ್ರೋತ್ಸಾಹಿಸಲು ಅನುವಾಗಲಿದೆ.
ಸೆಪ್ಟೆಂಬರ್ ೫. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಅವರು ವಿದ್ವಾಂಸರು, ದಾರ್ಶನಿಕ ಹಾಗೂ ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದರು. ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭ ಶಿಕ್ಷಣ ಕ್ಷೇತ್ರಕ್ಕೆ ರಾಧಾಕೃಷ್ಣನ್ ಅವರ ಕೊಡುಗೆಯನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅದು ಅವರಿಗೆ ನೀಡಬಹುದಾದ “ಅಕ್ಷರಾಂಜಲಿ”.
ಸಮಾಜದ ನಿರ್ಮಾತೃಗಳು : ಸಮಾಜದ ಅಭೂತಪೂರ್ವ ಬದಲಾವಣೆಗೆ ಶಿಕ್ಷಕರು ಕಾರಣಕರ್ತರು. ಅವರೇ ಭವ್ಯ ಭಾರತದ ನಿರ್ಮಾತೃಗಳು. ಪುಟ್ಟ ಮಗುವನ್ನು ಸಮಾಜದ ಗಣ್ಯವ್ಯಕ್ತಿಗಳಾಗಿಸಲು ಶಿಕ್ಷಕರು ಅಹೋರಾತ್ರಿ ಶ್ರಮವಹಿಸುತ್ತಾರೆ. ನಮ್ಮ ಸುತ್ತಮುತ್ತಲು ಕಾಣುವ ಪ್ರತೀ ಯಶಸ್ವಿ ವ್ಯಕ್ತಿಯ ಹಿಂದೆ ಗುರುವಿನ ಅಪಾರ ಪರಿಶ್ರಮವಿದೆ. ಸಮಾಜದ ಯಾವ ವ್ಯಕ್ತಿಯೂ ಶಿಕ್ಷಣ-ಶಿಕ್ಷಕನಿಲ್ಲದೆ ಶ್ರೇಯೋಭಿವೃದ್ಧಿ ಹೊಂದುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ “ಮುಂದೆ ಗುರಿ ಇರಲಿ. ಹಿಂದೆ ಗುರು ಇರಲಿ” ಎಂಬ ನಾಣ್ನುಡಿ ಪ್ರಚಲಿತದಲ್ಲಿದೆ. ಮಗುವಿಗೆ ಉತ್ತಮ ಗುರು ಲಭ್ಯವಾದಲ್ಲಿ ಅದು ಸಮಾಜದಲ್ಲಿ “ಅನರ್ಘ್ಯರತ್ನ”ವಾಗಿ ಬೆಳಗಲಿದೆ. ಗುರುವಿನ ಸೇವೆಗೆ ಬೆಲೆ ಕಟ್ಟುವುದು ಅಸಾಧ್ಯ . ಶಾಲಾ-ಕಾಲೇಜುಗಳಲ್ಲಿ ಬೋಧಿಸುವವರು ಮಾತ್ರ ಗುರುಗಳಲ್ಲ. ವ್ಯಕ್ತಿಯ ವಿವಿಧ ರೀತಿಯ ಒಳಿತಿಗೆ ಪ್ರೋತ್ಸಾಹ-ಪ್ರೇರೇಪಣೆ, ಮಾರ್ಗದರ್ಶನ ನೀಡುವ ಪ್ರತಿಯೊಬ್ಬರೂ ಶಿಕ್ಷಕರೇ ಆಗಿದ್ದಾರೆ. ಇಂತಹವರು ವಿವಿಧ ರಂಗಗಳಲ್ಲಿದ್ದಾರೆ. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗಾಗಿ ನೆರವಾಗುವ ಎಲ್ಲರೂ ಗುರುವೇ ಸರಿ. “ಜನನಿ ತಾನೇ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು.”
ವಿವಿಧ ರಂಗಗಳಲ್ಲಿ ನೈಪುಣ್ಯತೆ: ಶಿಕ್ಷಕರಿಲ್ಲದೆ, ಯಾರೊಬ್ಬರೂ ಯಾವುದೇ ವೃತ್ತಿಗಳಲ್ಲಿ ನೈಪುಣ್ಯತೆ ಹೊಂದುವುದು ಅಸಾಧ್ಯ. ಇದರಿಂದಾಗಿ ಶಿಕ್ಷಕರ ದಿನವು ಉಳಿದ ದಿನಾಚರಣೆಗಿಂತ ಮಹತ್ವದ್ದು ಹಾಗೂ ಅರ್ಥಪೂರ್ಣ. ಈ ದಿನವು ಸಮಾಜದಲ್ಲಿ ಶಿಕ್ಷಕರ ನಿರ್ಣಾಯಕ ಪಾತ್ರವನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಈ ತಿಳುವಳಿಕೆಯ ಮೂಲಕ ಶಿಕ್ಷಕ ವೃಂದದ ಗೌರವ ಏರುಗತಿಯಲ್ಲಿ ಸಾಗಲು ನೆರವಾಗಲಿದೆ. ಇದರೊಂದಿಗೆ ಶಿಕ್ಷಣದ ಮಹತ್ವವನ್ನು ಸಮಾಜಕ್ಕೆ ಸಾಂಕೇತಿಕವಾಗಿ ಸ್ಮರಿಸುವ ದಿನವಿದು. ಗುರುವಿನ ಕುರಿತಾದ ಈ ಸದ್ವಿಚಾರಗಳನ್ನು ಮುಂದಿನ ಪೀಳಿಗೆಗೂ ಹಸ್ತಾಂತರಿಸುವ ಮಹತ್ವದ ದಿನ.
ವಿಭಿನ್ನ ಪಾತ್ರಧಾರಿ: ಶಿಕ್ಷಕರು ನಮ್ಮ ಜೀವನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಜ್ಞಾನ ದೀವಟಿಗೆಯಾಗಿ, ಕೈದೀವಿಗೆಯಾಗಿ ವ್ಯಕ್ತಿಯ ಮೇಲೆ ಗಾಡ ಪ್ರಭಾವ ಬೀರುವರು. ಅವರು ಉತ್ತಮ ಮಾರ್ಗದರ್ಶಕರು, ಸಲಹೆಗಾರರು ಮತ್ತು ಸ್ನೇಹಿತರಾಗಿ ವ್ಯಕ್ತಿಯ ಸವಾಂಗೀಣ-ಸರ್ವತೋಮುಖ ಪ್ರಗತಿಯ ಪಾವಟಿಗೆಗಳಂತೆ ಸಹಕಾರಿ. ಈ ಮೂಲಕ ಸಮಾಜದಲ್ಲಿ ನಮ್ಮನ್ನು ಉಪಯುಕ್ತ ವ್ಯಕ್ತಿಗಳನ್ನಾಗಿ ಮಾಡುವ ಬೌದ್ಧಿಕ ಸಾಮರ್ಥ್ಯಗಳನ್ನು ನಾವು ಬೆಳೆಸಿಕೊಳ್ಳುತ್ತೇವೆ. ಶಿಕ್ಷಕರು ನಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತಾರೆ. ಶಿಕ್ಷಣದ ಮೂಲಕ, ನಮ್ಮ ಮನಸ್ಸು ವಿಶಾಲವಾಗಿ ತೆರೆದುಕೊಳ್ಳುತ್ತದೆ. ಗುರುಗಳ ನೆರವಿನೊಂದಿಗೆ “ಜ್ಞಾನಜ್ಯೋತಿ”ಯು ಬೆಳಗಿದಂತೆಲ್ಲಾ ಜಗತ್ತನ್ನು ವಿಮರ್ಶಾತ್ಮಕವಾಗಿ ವೀಕ್ಷಿಸಲು ಪ್ರಾರಂಭಿಸುತ್ತೇವೆ. ಇಂದು ಜಗತ್ತಿನಲ್ಲಿ ಕಂಡುಬರುವ ಅಪೂರ್ವ ಪ್ರಗತಿಗೆ ಶಿಕ್ಷಕರೇ ಪ್ರಮುಖ ಕಾರಣ. ನಮ್ಮ ಸುತ್ತಮುತ್ತಲು ಕಾಣುವ ಪ್ರತಿಭಾನ್ವಿತರ ಹಿಂದೆ ಶಿಕ್ಷಕರ ಅವಿಶ್ರಾಂತ ಪರಿಶ್ರಮವಿದೆ.
ವಿವಿಧ ಸಂಘ-ಸAಸ್ಥೆಗಳು ಶಿಕ್ಷಕರ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿ, ಶಿಕ್ಷಕರ ಸಮಾಜಮುಖಿ ಕೊಡುಗೆಯನ್ನು ಕೊಂಡಾಡಬೇಕು. ಅವರು ಸಮಾಜದ ಏಳಿಗೆಗಾಗಿ ಇನ್ನೂ ಮಹತ್ತರ ಕೊಡುಗೆ ನೀಡುವಂತೆ ಪ್ರೋತ್ಸಾಹಿಸಬೇಕು. ಜತೆಗೆ ಅಪೂರ್ವ ಶಿಕ್ಷಣತಜ್ಞ ಡಾ. ರಾಧಾಕೃಷ್ಣನ್ ಅವರ ಕುರಿತು ವಿಚಾರ ಮಂಥನ ನಡೆಸಬೇಕು. ನಿವೃತ್ತ, ಹಿರಿಯ ಮತ್ತು ಸಾಧಕ ಶಿಕ್ಷಕರನ್ನು ಸನ್ಮಾನಿಸಿ, ಅವರ ಕೊಡುಗೆಯನ್ನು ಸ್ಮರಿಸುವ ಕಾರ್ಯ ನಡೆಯಬೇಕಿದೆ. ಸಮಾಜದ ವಿವಿಧ ಸ್ತರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸುವ ಕಾರ್ಯ ನಡೆಸಬೇಕಿದೆ. ಶೈಕ್ಷಣಿಕ ಕ್ಷೇತ್ರದ ಜೊತೆಗೆ ಇತರ ಕ್ಷೇತ್ರಗಳಲ್ಲಿಯೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ “ಗುರುಗಳ ಪುಣ್ಯ ಸೇವೆ”ಯನ್ನು ಗುರುತಿಸುವಂತಾಗಬೇಕು. ಗುರುವನ್ನು ಗೌರವಿಸುವ ಪ್ರಕ್ರಿಯೆಯು “ನಿತ್ಯೋತ್ಸವ”ವಾಗಬೇಕಿದೆ. ಗುರು ಪರಂಪರೆಯು ಸಮಾಜದ ಏಳಿಗೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಸಾಧ್ಯ. ಹಾಗಾದಲ್ಲಿ ಮಾತ್ರ ಶಿಕ್ಷಕರ ದಿನಾಚರಣೆಗೆ ನೈಜ ಅರ್ಥ ಬರಲಿದೆ. -ಕೂಡಂಡ ರವಿ
ಗುರಿಮುಟ್ಟಲು ಗುರುಬೇಕು
‘ಗುರು’ ಎಂದರೆ ಜೀವನದ ಗುರಿಗೆ ನಿಖರವಾಗಿ ಹಾದಿ ತೋರಿಸುವ ಸೂತ್ರಧಾರ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ ಕಂಡ ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ. ದೇಶದ ಪ್ರಗತಿಗೆ ಶಿಕ್ಷಣಕ್ಕೆ ಮಹತ್ವವಿರುವಷ್ಟೇ ಶಿಕ್ಷಕನಿಗೂ ಇದೆ. ವಿದ್ಯಾರ್ಥಿಗಳ ಸುಂದರ ಭವಿಷ್ಯ ರೂಪಿಸುವ ರೂವಾರಿಗಳೇ ಶಿಕ್ಷಕರು. ವಿದ್ಯಾರ್ಥಿಗಳ ಅಭಿವೃದ್ಧಿಯನ್ನು ಮುಖ್ಯವಾಗಿಟ್ಟುಕೊಂಡು ಶಿಕ್ಷಣ ಚೌಕಟ್ಟು ಕಾಲಕ್ಕೆ ಅನುಗುಣವಾಗಿ ವಿಸ್ತೀರ್ಣಗೊಳ್ಳುತ್ತಿದೆ. ಯೋಚನೆ, ಚಿಂತನೆ, ತಾತ್ವಿಕ, ವೈಜ್ಞಾನಿಕ ಪ್ರಗತಿಗಳು, ಸಾಮಾಜಿಕ ಪ್ರಾಕೃತಿಕ ವಿದ್ಯಮಾನಗಳ ಅನಿವಾರ್ಯತೆ ಶಿಕ್ಷಣ ಕ್ರಮದ ಬದಲಾವಣೆಗೆ ಕಾರಣವಾಗಬಹುದು. ಅಂತೆಯೇ ಪ್ರಾಚೀನ ಕಾಲದ ಗುರುಕುಲ ಪದ್ಧತಿಯನ್ನು ಇಂದು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದಿದ್ದರೂ, ವಿದ್ಯಾರ್ಥಿಗಳ ಭವಿಷ್ಯವನ್ನು ಸಫಲವಾಗಿಸುವಲ್ಲಿ ಗುರುಕುಲ ಪದ್ಧತಿಯುಪ್ರಾಮುಖ್ಯತೆ ಪಡೆದಿದೆ.
ಸ್ವಾಮಿ ವಿವೇಕಾನಂದರು, ಮಹಾತ್ಮಗಾಂಧಿ, ಅಂಬೇಡ್ಕರ್, ಸರ್ವಪಲ್ಲಿ ರಾಧಾಕೃಷ್ಣನ್ ಮುಂತಾದ ಅನೇಕ ದಾರ್ಶನಿಕರು ಶಿಕ್ಷಣದ ಚಿಂತನೆಯಲ್ಲಿ ಆಧ್ಯಾತ್ಮಿಕ, ನೈತಿಕ ಯೋಜನೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಮುತುವರ್ಜಿ ವಹಿಸುತ್ತಿದ್ದರು. ಇದು ದೇಶ ಬೆಳವಣಿವಣಿಗೆ ಪೂರಕ ಎಂಬ ಚಿಂತನೆ ಇವರದಾಗಿತ್ತು.
ಶಿಕ್ಷಣವು ಪ್ರತಿಯೊಬ್ಬರನ್ನು ಉದ್ಯೋಗಕ್ಕೆ ಮಾತ್ರ ಅಣಿಗೊಳಿಸುವ ಸಾಧನವಾಗಬಾರದು ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ತಂದೆ - ತಾಯಿ ಮಾತ್ರವಲ್ಲದೆ, ಕೌಟುಂಬಿಕ ಸಂಬAಧಗಳಿಗೆ ಹಿರಿದಾದ ಮಹತ್ವ, ವೈಯಕ್ತಿಕ ಕರ್ತವ್ಯ. ಪ್ರಕೃತಿಯ ಉಳಿವು. ಭಾಷೆ ಸಾಹಿತ್ಯಕ್ಕೆ ತನ್ನದೇ ಆದ ಗೌರವವನ್ನು ಸಲ್ಲಿಸಬೇಕಾದುದು ಯುವಜನತೆಯ ಆದ್ಯ ಕರ್ತವ್ಯ ಎಂಬುದನ್ನು ಮರೆಯಬಾರದು.
- ಮೋಹಿನಿ ದಯಾನಂದ ರೈ, ಪಾಲಿಬೆಟ್ಟ ಶಿಕ್ಷಕ ವೃತ್ತಿ ಉದಾತ್ತವಾದುದು
ಶಿಕ್ಷಕ ವೃತ್ತಿಯು ಬಹಳ ಉದಾತ್ತವಾದುದು, ಗೌರವಯುತವಾದುದು, ಪವಿತ್ರವಾದುದು ಮತ್ತು ಅಷ್ಟೇ ಜವಾಬ್ದಾರಿಯುತವಾದುದು. ವಿದ್ಯಾರ್ಥಿಗಳಿಗೆ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ ಮಾದರಿಯಾಗಿರುವ ಶಿಕ್ಷಕರೇ ಉತ್ತಮ ಶಿಕ್ಷಕರು. ಪಾಠ, ಪ್ರವಚನಗಳಲ್ಲಿ ಮಾರ್ಗದರ್ಶನ ಮಾಡುವುದಲ್ಲದೆ ಇತರ ಚಟುವಟಿಕೆಗಳಲ್ಲಿಯೂ, ರಾಷ್ಟçದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಸಕ್ರಿಯಾತ್ಮವಾಗಿ ಚರ್ಚಿಸುವುದು, ಮಹನೀಯರ ಜೀವನ ಚರಿತ್ರೆಯನ್ನು ಹೇಳುವುದು, ವಿಜ್ಞಾನದ ಪ್ರಯೋಗಳನ್ನು ಮಾಡಲು ಸಹಾಯ ಮಾಡುವುದು. ಭಾಷಣಗಳನ್ನು ಮಾಡಲು ಪ್ರೆರೇಪಿಸುವುದು, ಶಾಲಾ ಉತ್ಸವದಲ್ಲಿ ಮಕ್ಕಳಿಂದಲೇ ಕಾರ್ಯಕ್ರಮಗಳನ್ನು ರೂಪಿಸುವಂತೆ ತಯಾರಿ ಕೊಡುವುದು ಇವೇ ಮುಂತಾದವು ಉತ್ತಮ ಶಿಕ್ಷಕನ ಕಾರ್ಯಕ್ಷಮತೆ. ವಿದ್ಯಾರ್ಥಿಗಳು ತಮ್ಮ ಉಪಾಧ್ಯಾಯರನ್ನು ಚಾಚು ತಪ್ಪದೆ ಅನುಸರಿಸುತ್ತಾರೆ. ಅವರು ಹೇಳಿದ್ದೇ ಸರಿ ಎಂದು ಮುಗ್ಧವಾಗಿ ನಂಬುತ್ತಾರೆ. ಶಾಲಾಮಟ್ಟದವg ೆಗೂ ವಿದ್ಯಾರ್ಥಿಗಳಿಗೆ ಶಿಕ್ಷಕರೇ ಸರ್ವಸ್ವ ಹಾಗೂ ಅವರೇ ಸಕಲ ವಿದ್ಯಾಪಾರಂಗತರು. ಶಿಕ್ಷಕರು ವಿದ್ಯಾರ್ಥಿಗಳ ನಡತೆ, ಜ್ಞಾನ, ಶಾಲಾ ಜೀವನದ ಮೇಲೆ ಅತ್ಯಂತ ಪ್ರಭಾವ ಬೀರುತ್ತಾರೆ. ಶಿಕ್ಷಕರು ತಮ್ಮ ವೃತ್ತಿಗೆ ತಮ್ಮನ್ನು ಅರ್ಪಿಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ತಾವು ಬೋಧಿಸುವ ವಿಷಯದಲ್ಲಿ ಹೆಚ್ಚಿನ ಜ್ಞಾನ, ತಿಳುವಳಿಕೆಯನ್ನು ಪಡೆದಿರಬೇಕು. ಬೋಧಿಸುವ ತಂತ್ರವನ್ನೂ ಚೆನ್ನಾಗಿ ತಿಳಿದುಕೊಂಡಿರಬೇಕು. ದಿನ ದಿನವೂ ಬದಲಾಗುತ್ತಿರುವ ಕಾಲಚಕ್ರದಲ್ಲಿ ಹೊಸದನ್ನು ತಿಳಿದುಕೊಳ್ಳುತ್ತಲೇ ಇರಬೇಕು. ಶಿಕ್ಷಕರಿಗೆ ಒಳ್ಳೆಯ ಹವ್ಯಾಸಗಳಿರಬೇಕು. ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿರಬೇಕು. ಹಲವು ವಿದ್ಯಾರ್ಥಿಗಳು ಶಿಕ್ಷಕರನ್ನೇ ಅನುಸರಿಸಿ ಅವರ ವ್ಯಕ್ತಿತ್ವವನ್ನೇ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ದರ್ಶನಶಾಸ್ತçದಲ್ಲಿ ಮಾಸ್ಟರ್ ಡಿಗ್ರಿ, ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರೊಫೆಸರ್ ಹುದ್ದೆ ಜೊತೆಗೆ ಉಪನಿಷತ್ತು, ವೇದಾಂತ, ಭಗವದ್ಗೀತೆ ಮತ್ತು ಬೌದ್ಧ ಗ್ರಂಥಗಳನ್ನು ಅಧ್ಯಯನ ಮಾಡಿದವರು. ೧೯೧೮ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತçದ ಪ್ರೊಫೆಸರ್ ಹುದ್ದೆಯನ್ನು ವಹಿಸಿಕೊಂಡರು. ಅವರು ಉತ್ತಮ ಬರಹಗಾರರು, ಭಾಷಣಕಾರರು ಆಗಿದ್ದರು. ‘ದಿ ಎಸೆನ್ಸಿಯಲ್ಸ್ ಆಫ್ ಫಿಲೋಸಫಿ’ ಎಂಬ ಪುಸ್ತಕದ ಬರಹದಿಂದ ಅವರ ಕೀರ್ತಿ ವಿಶ್ವದಾದ್ಯಂತ ಹರಡಿತು. ಆಕ್ಸ್ಫರ್ಡ್ ಯೂನಿವರ್ಸಿಟಿ ಸೇರಿದಂತೆ ಪ್ರಪಂಚದ ಪ್ರಸಿದ್ಧ ವಿಶ್ವವ�