*ಗೋಣಿಕೊಪ್ಪ, ಸೆ. ೪: ಕಾನೂರು ಕೃಷಿ ಪತ್ತಿನ ಸಹಕಾರ ಸಂಘ ೨೦೨೦-೨೧ನೇ ಸಾಲಿನಲ್ಲಿ ರೂ. ೬೦,೨೮,೪೧೫ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎ.ಎ. ವಿವೇಕ್ ಅವರು ಮಾಹಿತಿ ನೀಡಿದ್ದಾರೆ.

ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೆಪ್ಟೆಂಬರ್ ೭ರಂದು ನಡೆಯುವ ಮಹಾಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸಂಘದಲ್ಲಿ ೧೫೧೩ ಸದಸ್ಯರು ಇದ್ದು, ರೂ. ೧,೪೨,೪೫,೨೦೦ ಪಾಲು ಬಂಡವಾಳವನ್ನು ಹೊಂದಿದೆ. ಸಂಘದ ವಾರ್ಷಿಕ ಸಭೆಯಲ್ಲಿ ಸದಸ್ಯರ ಒಪ್ಪಿಗೆ ಪಡೆದು ಪಾಲುಬಂಡವಾಳದ ಮೇಲೆ ಶೇ. ೨೫ರಷ್ಟು ಡಿವಿಡೆಂಟ್ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಿರಖು ಠೇವಣಿ, ಪಿಗ್ಮಿ, ಸಿಬ್ಬಂದಿ, ಮರಣನಿಧಿ ಠೇವಣಿ ಸೇರಿದಂತೆ ರೂ. ೬,೦೫,೩೬,೫೨೨ ಇದೆ. ಸಂಘದ ಕ್ಷೇಮ ನಿಧಿಯಲ್ಲಿ ರೂ. ೨,೯೮,೩೧,೭೬೬ ಹಾಗೂ ಜಿಲ್ಲಾ ಬ್ಯಾಂಕಿನ ಕ್ಷೇಮನಿದಿಯಲ್ಲಿ ರೂ. ೩,೦೭,೭೯,೧೭೭ ಪಾವತಿಯಾಗಿದೆ ಎಂದು ಹೇಳಿದರು.

ಸಂಘಕ್ಕೆ ಸಂಬAಧಿಸಿದAತೆ ಸರ್ಕಾರದಿಂದ ಗುತ್ತಿಗೆ ಆಧಾರದಲ್ಲಿ ಪಡೆದಿರುವ ೫೦ ಎಕರೆ ಜಾಗದಲ್ಲಿ ಕಾಫಿ ತೋಟವಾಗಿ ಪರಿವರ್ತಿಸಿ ಸಂಘಕ್ಕೆ ಉತ್ತಮ ಆದಾಯದ ಹಾದಿಯನ್ನು ಕಂಡುಕೊಳ್ಳಲಾಗಿದ್ದು, ಕಾಫಿ ತೋಟದ ಬಂಡವಾಳ ಮತ್ತು ಅಭಿವೃದ್ದಿ ನಿಧಿಯಿಂದ ರೂ. ೧,೩೬,೨೧,೪೩೨ ಗಳಿಸಿದೆ. ಅಲ್ಲದೇ ಸಂಘದ ಕಟ್ಟಡ ಹಾಗೂ ಇತರ ನಿಧಿಯಿಂದ ರೂ. ೧,೮೧,೧೮,೨೮೯ ಹೊಂದಿದೆ ಎಂದು ಮಾಹಿತಿ ನೀಡಿದರು.

೪೮೭ ಸದಸ್ಯರಿಗೆ ಕೆ.ಪಿ.ಸಿ.ಸಿ. ಸಾಲವಾಗಿ ರೂ. ೮,೯೮,೫೫,೦೦೦ ಮತ್ತು ೧೧೫ ಸದಸ್ಯರಿಗೆ ಜಾಮೀನು ಸಾಲ ರೂ. ೧೧,೧೨,೭೦೦ ಮತ್ತು ಪಿಗ್ಮಿ ಸಾಲ ರೂ. ೨೩,೪೦,೦೦೦, ಸ್ವಸಹಾಯ ಸಂಘಕ್ಕೆ ರೂ. ೧೩,೯೭,೦೦೦ಗಳಷ್ಟು ಆಭರಣ ಸಾಲವಾಗಿ ರೂ. ೭,೫೮,೦೦೦, ಗೊಬ್ಬರ ಸಾಲ ರೂ. ೧೮,೪೩,೭೦೦ ಸೇರಿದಂತೆ ಒಟ್ಟು ೯,೭೩,೦೦,೪೦೦ ವಿತರಿಸಲಾಗಿದೆ. ಅಲ್ಲದೇ ಪ್ರತಿ ಸಾಲವು ಶೇ. ೧೦೦ರಷ್ಟು ಮರುಪಾವತಿಯಾಗಿದೆ ಎಂದು ಹೇಳಿದರು. ಸದಸ್ಯರ ಅಭಿವೃದ್ದಿಗಾಗಿ ರಸಗೊಬ್ಬರ, ಕ್ರಿಮಿನಾಶಕ, ಹತ್ಯಾರು, ಕೋವಿತೋಟ, ಮಾರಾಟ ವ್ಯವಸ್ಥೆಯನ್ನು ಮತ್ತು ಆಹಾರ ಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಕೆ.ಸಿ.ಮುತ್ತಪ್ಪ, ನಿರ್ದೇಶಕರುಗಳಾದ ಕೆ.ಎಸ್. ಬೋಪಣ್ಣ, ಕೆ.ಎಸ್. ಭರತ್, ಸಿ.ಬಿ. ಬೆಳ್ಯಪ್ಪ, ಕೆ.ಆರ್. ಸುರೇಶ್, ಎಂ.ಕೆ. ಪ್ರಕಾಶ್, ಎಂ.ಕೆ. ರವಿ, ಎಂ.ಎನ್. ಆಶ್ವಿನಿ, ಕೆ.ಡಿ ನಿರ್ಮಲ, ಪಿ.ಬಿ. ಲೀನಾ, ಹೆಚ್.ಕೆ. ಬೊಗ್ಗುರು, ಎಂ.ಎA. ಜಗನ್ನಾಥ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಆರ್. ಉಮೇಶ್, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಎಂ.ಎನ್. ರತ್ನಕುಮಾರ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.