ಪೊನ್ನAಪೇಟೆ, ಸೆ.೪: ಪೊನ್ನಂಪೇಟೆ ವಲಯದ ಹುದಿಕೇರಿ ವ್ಯಾಪ್ತಿಗೆ ಬರುವ ವೆಸ್ಟ್ ನೆಮ್ಮಲೆ ಗ್ರಾಮದಿಂದ ಬೀರುಗ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಿಸಲು ಯತ್ನಿಸುತ್ತಿದ್ದ ೮ ಮಂದಿ ಆರೋಪಿಗಳ ಪೈಕಿ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಕುಂಜಿಲ ಗ್ರಾಮದ ಕೆ.ಎಂ.ಜುಬೇದ್ ಮತ್ತು ವಿ.ಬಾಡಗ ಗ್ರಾಮದ ವೈ.ಸಿ.ಮಹೇಶ ಬಂಧಿತ ಆರೋಪಿಗಳು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ೩೫ ಬೀಟೆ ಮರದ ನಾಟಾಗಳು, ಮರ ಸಾಗಾಟಕ್ಕೆ ಬಳಸಿದ ಅಶೋಕ ಲೈಲ್ಯಾಂಡ್ ಲಾರಿ (ಕೆ.ಎ.೧೯- ಎ ಎ ೬೪೮೫), ಪಿಕಪ್ ವಾಹನ ಕೆ.ಎ.೫೩- ೭೮೫೩) ಮರ ಸಾಗಾಟ ಸಂದರ್ಭ ಬೆಂಗಾವಲಿಗೆ ತಂದಿದ್ದ ಟಿವಿಎಸ್ ವಿಕ್ಟರ್ ಬೈಕ್ (ಕೆ.ಎ.೧೪-ಯು.೮೯೦೯) ಸೇರಿದಂತೆ ೨೬ ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಅವರ ಮಾರ್ಗದರ್ಶನದಲ್ಲಿ ತಿತಿಮತಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು ನೇತೃತ್ವದಲ್ಲಿ, ವಲಯ ಅರಣ್ಯಾಧಿಕಾರಿ ಬಿ.ಎಂ.ಶAಕರ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಡಿ.ಬೋಪಣ್ಣ, ಕೆ.ಜಿ.ದಿವಾಕರ್, ರಕ್ಷಿತ್, ಮಂಜುನಾಥ ಬೆನಕೊಟಗಿ, ಅರಣ್ಯ ರಕ್ಷಕರಾದ ಸಂಜಯ್ ಚೌಹಾಣ್, ಕೆ.ಜಿ.ರಾಜೇಶ್, ಆಂಟೋನಿ ಪ್ರಕಾಶ್ ಮತ್ತು ಆರ್ ಆರ್ ಟಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.