ಸೋಮವಾರಪೇಟೆ, ಸೆ.೧: ಇಲ್ಲಿನ ಜೂನಿಯರ್ ಕಾಲೇಜು ಟರ್ಫ್ ಮೈದಾನದಲ್ಲಿರುವ ಸ್ಟೇಡಿಯಂನ ಬೀಗ ಒಡೆದು ಅದರ ಒಳಗಿದ್ದ ಕಬ್ಬಿಣ ಹಾಗೂ ಅಲ್ಯೂಮಿನಿಯಂ ಪರಿಕರಗಳನ್ನು ಕಳವು ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸ್ಟೇಡಿಯಂನ ಗೇಟ್ಗೆ ಅಳವಡಿಸಿದ್ದ ಬೀಗವನ್ನು ಒಡೆದು ಒಳಗೆ ನುಗ್ಗಿರುವ ಕಳ್ಳರು, ಅದರೊಳಗಿದ್ದ ಕಬ್ಬಿಣ ಹಾಗೂ ಅಲ್ಯೂಮಿನಿಯಂ ವಸ್ತುಗಳನ್ನು ಕಳವು ಮಾಡಿದ್ದಾರೆ. ಇಲಾಖೆ ಯಿಂದ ಹಗಲು ಕಾವಲುಗಾರರನ್ನು ಇಲ್ಲಿಗೆ ನಿಯೋಜಿಸಿದ್ದು, ರಾತ್ರಿಯೂ ಕಾವಲುಗಾರರನ್ನು ನಿಯೋಜಿಸಬೇಕೆಂದು ಕ್ರೀಡಾಭಿಮಾನಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಠಾಣಾಧಿಕಾರಿ ರಮೇಶ್ ಕುಮಾರ್ ಮತ್ತು ತಂಡ ಕಳ್ಳರ ಪತ್ತೆಗೆ ಬಲೆ ಬೀಸಿದೆ.