ವೀರಾಜಪೇಟೆ, ಸೆ. ೧: ಇಲ್ಲಿನ ಕೂರ್ಗ್ ಮಾರ್ಕ್ಸ್ಮೆನ್ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ೮ನೇ ವರ್ಷದ ಮುಕ್ತ ತೆಂಗಿನಕಾಯಿಗೆ ಗುರಿ ಇಡುವ ಸ್ಪರ್ಧೆಯು ಸರ್ವಜನಿಕರಿಗೆ ತಾ. ೩ ರಂದು ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಪರಾಹ್ನ ೨ ಗಂಟೆಯಿAದ ನಡೆಯಲಿದೆ.

ಪ್ರಥಮ ಬಹುಮಾನ ರೂ. ೧೫ ಸಾವಿರ, ದ್ವಿತಿಯಾ ರೂ. ೧೦ ಸಾವಿರ, ತೃತೀಯ ರೂ. ೫ ಸಾವಿರ ರೂಪಾಯಿಗಳ ನಗದು ಹಾಗೂ ಟ್ರೋಫಿ ನೀಡಲಾಗುವುದು.

ದಿ. ಮುಕ್ಕಾಟಿರ ಮುತ್ತಪ್ಪ ಅವರ ಜ್ಞಾಪಕಾರ್ಥವಾಗಿ ಅವರ ಪತ್ನಿ ಮಿರಾ ಮುತ್ತಪ್ಪ ಹಾಗೂ ಮಕ್ಕಳು ಪ್ರಾಯೋಜಕತ್ವ ನಿಡಿರುತ್ತಾರೆ.

೧೦ನೇ ತರಗತಿಯಿಂದ ಕೆಳಗಿನ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಬಹುಮಾನವನ್ನು ನೆರವಂಡ ಪ್ರಸೂದ್ ಪ್ರ‍್ರಾಯೋಜಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಮುಕ್ಕಾಟಿರ ಕಾರ್ಯಪ್ಪ, ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.