ಕುಶಾಲನಗರ, ಸೆ. ೨ : ಪ್ರಕೃತಿ ಸಂಪತ್ತನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ಸಾಗಬೇಕು, ಪ್ರಕೃತಿಯ ಆರಾಧನೆಯ ಮೂಲಕ ಸಂರಕ್ಷಣೆ ಸಾಧ್ಯ, ಪ್ರತಿಯೊಬ್ಬರೂ ವನಸಿರಿಯ ಸಂರಕ್ಷಣೆಗೆ ಪಣತೊಡಬೇಕಾಗಿದೆ ಎಂದು ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ಡಾ.ತಿಮ್ಮಕ್ಕ ಕರೆ ನೀಡಿದರು.

ಅವರು ಕುಶಾಲನಗರದಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಕೊಡಗು ಜಿಲ್ಲೆ ಮತ್ತು ಪಿರಿಯಾಪಟ್ಟಣ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮನುಷ್ಯರು ಪ್ರಕೃತಿಯನ್ನು ಅವಲಂಬಿಸಿಕೊAಡು ಬದುಕು ಸಾಗಿಸಬೇಕಾಗಿದೆ, ಪ್ರಕೃತಿ ನಾಶಗೊಂಡಲ್ಲಿ ಮನುಷ್ಯ ಕುಲ ಅವನತಿಯತ್ತ ಸಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಮಕ್ಕಳಲ್ಲಿ ಪ್ರಕೃತಿ ನದಿ ಗಿಡ ಮರಗಳ ಬಗ್ಗೆ ಅರಿವು ಜ್ಞಾನ ಮೂಡಿಸಬೇಕಾಗಿದೆ ಎಂದರು.

ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪತ್ರಕರ್ತರಾದ ನದೀಮ್ ಪಾಷಾ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಧನೆಗೈದ ಪ್ರಮುಖರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ವಿನೋದ್ ಕುಮಾರ್, ತಾಲೂಕು ಘಟಕದ ಅಧ್ಯಕ್ಷರುಗಳಾದ ಕೆ. ಪಳನಿ ಪ್ರಕಾಶ್, ಸಿ.ಜೆ. ಪ್ರಕಾಶ್, ನರೇಶ್‌ಚಂದ್ರ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.