ಮಡಿಕೇರಿ, ಸೆ. ೧: ವಿಘ್ನ ನಿವಾರಕ, ಆದಿಪೂಜಿತ, ಗೌರಿತನಯ ಗಣಪತಿಯನ್ನು ಆರಾಧಿಸುವ ಗಣೇಶ ಚತುರ್ಥಿಯನ್ನು ಕೊಡಗು ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ಹಾಗೂ ವಿವಿಧ ಸಮಿತಿಗಳ ಮೂಲಕ ಗಜಮುಖನಿಗೆ ವಿಶೇಷ ಪೂಜೆ ಹಾಗೂ ಈಡುಗಾಯಿ ಸಮರ್ಪಣೆಯೊಂದಿಗೆ ಭಕ್ತಿ ಪೂರ್ವಕ ನಮನ ಸಲ್ಲಿಸಲಾಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರಮುಖವಾಗಿ ಶ್ರೀಕೋಟೆ ಮಹಾಗಣಪತಿ ದೇವಾಲಯ, ವಿಜಯವಿನಾಯಕ ದೇವಾಲಯ, ದೃಷ್ಟಿಗಣಪತಿ ದೇವಸ್ಥಾನ ಸೇರಿದಂತೆ ನಗರದ ೩೦ಕ್ಕೂ ಅಧಿಕ ಕಡೆಗಳಲ್ಲಿ ವಿನಾಯಕನ ಆರಾಧನೆ ನೆರವೇರಿತು. ಭಕ್ತಾದಿಗಳು ಪೂಜಾಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು. ಧಾರ್ಮಿಕ್ ಯುವವೇದಿಕೆ, ಸ್ವಸ್ತಿಕ್ ಯುವವೇದಿಕೆ, ಹಿಂದೂ ಯುವಶಕ್ತಿ, ಕಾನ್ವೆಂಟ್ ಜಂಕ್ಷನ್‌ನ ಮಹಾಗಣಪತಿ ಸೇವಾ ಸಮಿತಿ, ಕನ್ನಂಡಬಾಣೆ ದೃಷ್ಟಿಗಣಪತಿ ಯುವಕಸಂಘ, ಮಲ್ಲಿಕಾರ್ಜುನಗರ ಜ್ಯೋತಿಯುವಕ ಸಂಘ, ವಿದ್ಯಾನಗರ ಶಕ್ತಿಗಣಪತಿ ದೇವಾಲಯ ಸಮಿತಿ, ರಾಣಿಪೇಟೆ ಸಿಎಂಸಿ ಕ್ವಾಟ್ರರ್ಸ್, ಕೆಎಸ್‌ಆರ್‌ಟಿಸಿ ಡಿಪೋ, ಗೌಳಿಬೀದಿ ಕಾಮಾಕ್ಷಿ ಯುವಕ ಸಂಘ, ನಾಗಚೈತನ್ಯ
(ಮೊದಲ ಪುಟದಿಂದ) ಯುವಕ ಸಂಘ, ಅಂಬೇಡ್ಕರ್ ಬಡಾವಣೆ, ಸುದರ್ಶನ ಬಡಾವಣೆಯ ಮುನೀಶ್ವರ ಯುವಕ ಸಂಘ, ಸಂಪಿಗೆಕಟ್ಟೆ ಯುವಕ ಸಂಘ, ಹಳೇ ಖಾಸಗಿ ಬಸ್ ನಿಲ್ದಾಣದ ಟ್ಯಾಕ್ಸಿ ಆಟೋ ಚಾಲಕರ ಸಂಘ, ಚಾಮುಂಡೇಶ್ವರಿ ನಗರದ ಕೇಸರಿ ಯುವಕ ಸಂಘ, ದೇಚೂರಿನ ವಿದ್ಯಾವಾರಿಧಿ ಯುವಕ ಸಂಘ, ಹೊಸಬಡಾವಣೆಯ ಪ್ರಸನ್ನ ಗಣಪತಿ ಯುವಕ ಸಂಘ, ರೈಫಲ್ ರೇಂಜ್ ಗಣಪತಿ, ಮಹದೇವಪೇಟೆ ವಿನಾಯಕ ಯುವಕ ಮಿತ್ರ ಮಂಡಳಿ, ಗಣಪತಿ ಬೀದಿಯ ಗಣಪತಿ ಯುವಕ ಸಂಘ, ಜ್ಯೋತಿ ನಗರದ ಶಿವಶಕ್ತಿ ಯುವಕ ಸಂಘಗಳ ಗಣಪತಿ ಉತ್ಸವ ಮೂರ್ತಿಗಳ ವಿಸರ್ಜನೆ ನಿನ್ನೆ ದಿನ ನೆರವೇರಿದ್ದು, ಉಳಿದ ೧೩ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ನೆರವೇರಲು ಬಾಕಿ ಉಳಿದಿದೆ.
ವೀರಾಜಪೇಟೆಯ ೨೨ ಕಡೆಗಳಲ್ಲಿ
ವೀರಾಜಪೇಟೆ: ಅದ್ಧೂರಿ ಗಣೇಶೋತ್ಸವಕ್ಕೆ ಹೆಸರುವಾಸಿಯಾಗಿರುವ ವೀರಾಜಪೇಟೆಯಲ್ಲಿ ಈ ಬಾರಿ ೨೨ ಕಡೆಗಳಲ್ಲಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ.
ನಗರದ ರಾಜ ಬೀದಿ ಎಂದು ಖ್ಯಾತಿ ಪಡೆದ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಗೌರಮ್ಮ ದೇವಿಯ ಪಲ್ಲಕ್ಕಿ ಉತ್ಸವ ನಗರದ ಎಲ್ಲೆಡೆ ಸಂಚರಿಸಿ, ಭಕ್ತರಿಂದ ಪೂಜೆಗಳನ್ನು ಸ್ವೀಕರಿಸಿ ದೇವಾಲಯಕ್ಕೆ ಆಗಮನವಾದ ನಂತರ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿತು.
ಚತುರ್ಥಿಯಂದು ನಗರಕ್ಕೆ ಕಳಸಪ್ರಾಯದಂತಿರುವ ಶ್ರೀಮಹಾಗಣಪತಿ ದೇವಾಲಯದಲ್ಲಿ ಲಂಭೋದರನ ಉತ್ಸವ ಮೂರ್ತಿಯು ಪ್ರತಿಪ್ಠಾಪನೆಗೊಂಡಿತು.
ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಪಂಜರುಪೇಟೆ ಶ್ರೀ ವಿನಾಯಕ ಸೇವಾ ಸಮಿತಿ, ಪಂಜರುಪೇಟೆಯ ಗಣಪತಿ ಬೀದಿಯ ಶ್ರೀ ಮಹಾಗಣಪತಿ ಸೇವಾ ಸಂಘ, ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲ ಆಂಜನೇಯ ವಿನಾಯಕ ಸೇವಾ ಸಂಘ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ, ಗಡಿಯಾರ ಕಂಬದ ಬಳಿಯ ಮಹಾಗಣಪತಿ ದೇವಾಲಯ, ಅರಸು ನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ನೆಹರು ನಗರದ ನೇತಾಜಿ ಗಣೇಶೋತ್ಸವ ಸಮಿತಿ, ದಖ್ಖನಿ ಮೊಹಲ್ಲದ ವಿಜಯ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ಯುವಕ ಸಂಘ, ಸುಂಕದ ಕಟ್ಟೆಯ ಸರ್ವ ಸಿದ್ಧಿ ವಿನಾಯಕ ಉತ್ಸವ ಸಮಿತಿ, ಗಾಂಧಿನಗರದ ಶ್ರೀ ಗಣಪತಿ ಸೇವಾ ಸಮಿತಿ, ಕೆ. ಬೋಯಿಕೇರಿಯ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಚಿಕ್ಕಪೇಟೆಯ ಜಲದರ್ಶಿನಿ ಗಣೇಶೋತ್ಸವ ಸಮಿತಿ, ಪಟ್ಟಣ ಪಂಚಾಯಿತಿ ಪೌರ ಸೇವಾ ನೌಕರರ ಸಂಘದ ಗಣಪತಿ ಸೇವಾ ಸಮಿತಿ, ಮೀನು ಪೇಟೆಯ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಹರಿಕೆರೆ ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಕುಕ್ಲೂರು ಶ್ರೀ ವಿನಾಯಕ ಯುವಕರ ಸಂಘ, ಗೌರಿಕೆರೆ ಸೇವಾ ಸಮಿತಿ, ಶಿವಕೇರಿ ಶ್ರೀ ವಿನಾಯಕ ಉತ್ಸವ ಸಮಿತಿಗಳ ವತಿಯಿಂದ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ಅನಂತ ಪದ್ಮನಾಭ ವ್ರತದಂದು ವಿಸರ್ಜನೆಗೊಳ್ಳಲಿದೆ.ಪೊನ್ನಂಪೇಟೆ: ಪೊನ್ನಂಪೇಟೆ ಪಟ್ಟಣದ ೭ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ಬೆಳಗ್ಗೆ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಗಣಪತಿ ಹೋಮದ ನಂತರ ಎಲ್ಲಾ ಗಣಪತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಇಲ್ಲಿನ ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಎಂ.ಜಿ.ನಗರದ ನಿಸರ್ಗ ಯುವಕ ಸಂಘ, ಮುಖ್ಯ ರಸ್ತೆಯಲ್ಲಿರುವ ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಶಿವ ಕಾಲೋನಿಯ ಶಿವ ಯುವಕ ಸಂಘ, ಜೋಡುಬೀಟಿ ವಿನಾಯಕ ಯುವಕರ ಸಂಘಗಳು ತಮ್ಮ ತಮ್ಮ ಬಡಾವಣೆಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿದವು. ಗಣಪತಿ ಹೋಮ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ತಾ.೭ ರಂದು ರಾತ್ರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ಪೊನ್ನಂಪೇಟೆಯ ಗೌರಿ ಕೆರೆಯಲ್ಲಿ ಸಾಮೂಹಿಕವಾಗಿ ಗಣಪತಿ ಮೂರ್ತಿಗಳ ವಿಸರ್ಜನೆಯನ್ನು ಮಾಡಲಾಗುತ್ತದೆ.
ಕುಶಾಲನಗರ: ಗೌರಿ ಗಣೇಶೋತ್ಸವ ಅಂಗವಾಗಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು ೨೨ ಸ್ಥಳಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶೋತ್ಸವ ಪ್ರಯುಕ್ತ ಇಲ್ಲಿನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಚೌಡೇಶ್ವರಿ ದೇವಾಲಯದಲ್ಲಿಯೂ ಪೂಜೆಗಳು ನಡೆದವು.
ಕುಶಾಲನಗರ ಬೈಚನಹಳ್ಳಿ, ಮಾದಪಟ್ಟಣ, ಮುಳ್ಳುಸೋಗೆ ವಿವಿಧೆಡೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಬುಧವಾರ ೭ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಗೌರಿ ಗಣಪತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಉತ್ಸವ ಮೂರ್ತಿಗಳನ್ನು ಗಂಗಾ ಪೂಜೆಯ ನಂತರ ಮೆರವಣಿಗೆಯಲ್ಲಿ ತಂದು ಪೆಂಡಾಲ್, ದೇವಾಲಯ, ಬಸ್ ನಿಲ್ದಾಣಗಳಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಈ ಬಾರಿ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಂತೆ ೪೯ ಕಡೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ದಾನಿಗಳೇ ಸದಸ್ಯರಾಗಿರುವ ಶ್ರೀ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಬೆಳಗ್ಗಿನಿಂದ ಸಂಜೆಯವರೆಗೂ ಪೂಜೆ ನಡೆಯುತ್ತಿದೆ. ಇದರೊಂದಿಗೆ ಕುರುಹಿನ ಶೆಟ್ಟಿ ಸಮಾಜದಿಂದ ರಾಮಮಂದಿರ, ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ.
ಬಳಗುಂದ ವಿನಾಯಕ ಸೇವಾ ಸಮಿತಿ, ಬಾಣಾವರದ ವಿಘ್ನೇಶ್ವರ ಯುವಕ ಸಂಘ, ರೇಂಜರ್ ಬ್ಲಾಕ್‌ನ ಯೂತ್ ಕ್ಲಬ್, ಬೇಳೂರು ಬಸವನಹಳ್ಳಿ,ಯಲಕನೂರು ವಿನಾಯಕ ಸೇವಾ ಸಮಿತಿ, ಚೌಡೇಶ್ವರಿ ಬ್ಲಾಕ್, ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯ, ಬಾಣಾವರ ಬಸವೇಶ್ವರ ದೇವಾಲಯಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಪಟ್ಟಣ ಸಮೀಪದ ಗಾಂಧಿನಗರ ವೀರ ಕೇಸರಿ ಯುವಕ ಸಂಘ, ಕುಮಾರಳ್ಳಿ ಗ್ರಾಮಾಭಿವೃದ್ಧಿ ಸಮಿತಿ, ತಲ್ತರೆಶೆಟ್ಟಳ್ಳಿ ಗ್ರಾಮಾಭಿವೃದ್ಧಿ ಸಮಿತಿ, ಕೂತಿ ಸಮುದಾಯ ಭವನ, ಗಾಂಧಿನಗರ ಮಾರಿಯಮ್ಮ ದೇವಾಲಯ, ಹೊಸಬಡಾವಣೆಯ ಮಾದೇಶ್ವರ ಯುವಕ ಸಂಘ, ಮಾದಾಪುರ, ಯಡವನಾಡು, ಅಬ್ಬೂರುಕಟ್ಟೆ, ಕೆಂಚಮ್ಮನ ಬಾಣೆ, ಹಾನಗಲ್ಲು, ಹರಗ, ಉದ್ರಳ್ಳಿ ಗ್ರೂಪ್, ಯಡೂರು ಗ್ರಾಮದಲ್ಲಿ ಸಾರ್ವಜನಿಕ ಉತ್ಸವ ನಡೆಯುತ್ತಿದೆ.
ಅಭಿಮಠ ಬಾಚಳ್ಳಿ, ಕಿರಗಂದೂರು, ಚೌಡ್ಲು, ಆಡಿನಾಡೂರು, ಚಿಕ್ಕತೋಳೂರು, ಕರ್ಕಳ್ಳಿ, ಮಾನಸ ಹಾಲ್ ಸಮೀಪ, ಹೊಸಳ್ಳಿ, ಅರೆಯೂರು, ಕಾನ್ವೆಂಟ್ ಬಾಣೆ, ಕುಂದಳ್ಳಿ, ಆಲೇಕಟ್ಟೆ ಸಿದ್ದಿವಿನಾಯಕ ಯುವಕ ಸಂಘ, ಭಾರತೀಯ ಯುವಕ ಸಂಘ, ಯರಪಾರೆ, ಕಕ್ಕೆಹೊಳೆ ಜಂಕ್ಷನ್, ಬಾಣಾವರ, ತಣ್ಣೀರುಹಳ್ಳ, ಗೋಣಿಮರೂರು ಗ್ರಾಮಗಳಲ್ಲಿ ಗೌರಿ ಗಣಪತಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಕೆಲವು ಕಡೆಗಳಲ್ಲಿ ಪ್ರತಿಷ್ಠಾಪಿಸಿರುವ ಉತ್ಸವ ಮೂರ್ತಿಗಳನ್ನು ೩ ದಿನಗಳಿಗೆ ವಿಸರ್ಜಿಸಲಾಗುತ್ತಿದ್ದು, ತಾ. ೭ರಂದು ಬಹುತೇಕ ಕಡೆಗಳಲ್ಲಿ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದೆ. ಮಳೆ ಬಿಡುವು ನೀಡಿರುವುದರಿಂದ ಹಬ್ಬವನ್ನು ಸಂಭ್ರಮದಿAದ ಆಚರಿಸಲು ಅನುಕೂಲವಾಗಿದೆ.