ಹರಿಯಾಣದ ನಾಗ ಸಾಧು ಬಾಬಾ ವಿಠ್ಠಲ್ ಗಿರೀಜಿ ಕರೆ

ಮಡಿಕೇರಿ, ಸೆ. ೧: ಇಲ್ಲಿನ ಸ್ವಸ್ಥಿಕ್ ಯುವ ವೇದಿಕೆಯ ೨೧ನೇ ವರ್ಷದ ಗಣೇಶೋತ್ಸವದಲ್ಲಿ ಭಾಗವಹಿಸಿದ ಹರಿಯಾಣ ಮೂಲದ ನಾಗ ಸಾಧು ಬಾಬಾ ವಿಠ್ಠಲ್ ಗಿರೀಜಿ ಮಹಾರಾಜ್, ಭಾರತದ ಮೂಲ ಸಂಸ್ಕೃತಿಯನ್ನು ಬೆಳಗಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.

ನಿನ್ನೆ ದಿನ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಸಂಸ್ಕೃತಿ, ಆಚರಣೆ, ದೈವಭಕ್ತಿ ಮರೆಯಾಗ ಕೂಡದು. ಎಲ್ಲ ಸಂಘಟನೆಗಳೂ ಒಗ್ಗೂಡಿ ಸನಾತನವಾದ ಹಿಂದೂ ಸಂಸ್ಕೃತಿಯನ್ನು ಬಲಪಡಿಸಬೇಕು ಎಂದು ನುಡಿದರು. ಬಾಬಾ ವಿಠ್ಠಲ್ ಗಿರೀಜಿ ಅವರು ಕರ್ನಾಟಕ ಹಿಂದೂ ಯುವ ವಾಹಿನಿಯ ರಾಜ್ಯ ಪ್ರಭಾರಿ ಆಗಿದ್ದಾರೆ.

ಸಂಜೆ ಶೋಭಾಯಾತ್ರೆಗೆ ಸಿದ್ಧಲಿಂಗಪುರ ಅರಿಸಿನಗುಪ್ಪೆ ಮಂಜುನಾಥ ದೇವಾಲಯದ ರಾಜೇಶ್ ನಾಥ್ ಮಹಾರಾಜ್ ಚಾಲನೆ ನೀಡಿದರು. ಭವ್ಯ ಪರಂಪರೆ ಹೊಂದಿರುವ ಹಿಂದೂ ಧರ್ಮದ ಅಖಂಡತೆಗೆ ಎಲ್ಲರೂ ಶ್ರಮಿಸುವಂತೆ ಆಗಬೇಕೆಂದು ಆಶಿಸಿದರು. ಹಿಂದೂ ಯುವ ವಾಹಿನಿಯ ರಾಜ್ಯ ವರಿಷ್ಠ್ ಉಪಾಧ್ಯಕ್ಷ ಕುಲ್ದೀಪ್ ಪೂಣಚ್ಚ, ಸ್ವಸ್ಥಿಕ್ ಯುವ ವೇದಿಕೆಯ ಅಧ್ಯಕ್ಷ ಶಿವರಾಜ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್ ಹಾಗೂ ಇತರರು ಹಾಜರಿದ್ದರು.