ಕರಿಕೆ, ಸೆ. ೧: ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಅನಾಹುತಗಳು ಸಂಭವಿಸಿವೆ. ಗಣೇಶ ಹಬ್ಬದ ದಿನ ಸುರಿದ ಮಳೆರಾಯನ ಅಬ್ಬರಕ್ಕೆ ಜನ ಜೀವನ ತತ್ತರಿಸಿ ಹೋಗಿತ್ತು. ಭಾಗಮಂಡಲ- ಕರಿಕೆ ರಸ್ತೆಯ ಹದಿಮೂರನೇ ಮೈಲು ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತಲ್ಲದೆ, ರಸ್ತೆಯ ಮೋರಿಯ ತಡೆಗೋಡೆ ಕುಸಿದು ರಸ್ತೆ ಸಂಚಾರಕ್ಕೆ ಅನಾನುಕೂಲವಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ.

ತೋಟಂ ಎಂಬಲ್ಲಿ ಬೆಳ್ಳಚ್ಚಿ ಎಂಬವರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿ ಕೆಸರು ತುಂಬಿ ವಸ್ತುಗಳು ಜಖಂಗೊAಡಿವೆ. ನೀರಿನ ರಭಸಕ್ಕೆ ಚೆತ್ತುಕಾಯ ಪಚ್ಚೆಪಿಲಾವು ಸಂಪರ್ಕ ರಸ್ತೆಯ ಎರಡು ಸೇತುವೆಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಸೇತುವೆ ಕುಸಿಯುವ ಸಾಧ್ಯತೆ ಇದೆ. ಅಲ್ಲದೆ ಗ್ರಾಮದ ವಿವಿಧ ಕಡೆ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದ್ದು, ಪಚ್ಚೆಪಿಲಾವು ನಿವಾಸಿಗಳಾದ ಹುಲಿಮನೆ ಜಯಾನಂದ, ಎಂ.ಎಸ್. ಪಾರ್ವತಿ, ಸವಿತ ಎಂಬವರ ಮನೆಗಳ ಹಿಂಭಾಗ ದೊಡ್ಡ ಪ್ರಮಾಣದಲ್ಲಿ ಬರೆ ಕುಸಿತ ಉಂಟಾಗಿದೆ.

ಇದುವರೆಗೆ ಕಂಡು ಕೇಳರಿಯದ ಮಳೆಯಾಗಿದೆ ಎಂದು ಗ್ರಾಮದ ಹಿರಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ರಸ್ತೆಗಳಿಗೆ ಹಾನಿ ಸಂಭವಿಸಿದ್ದು, ಜಿಲ್ಲಾಡಳಿತ ಪರಿಶೀಲನೆ ನಡೆಸಿ ಪರಿಹಾರ ಕ್ರಮ ವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

-ಸುಧೀರ್ ಹೊದ್ದೆಟ್ಟಿ ಮಡಿಕೇರಿ: ತಾ. ೧ ರಂದು ಸಂಜೆ ಸುರಿದ ಭಾರೀ ಮಳೆಗೆ ೨ನೇ ಮೊಣ್ಣಂಗೇರಿಯ ಜೀಪ್ ಹರೀಶ್‌ರವರ ಮನೆಯಂಗಳಕ್ಕೆ ನುಗ್ಗಿದ ಜಲರಾಶಿ.

ಸೋಮವಾರಪೇಟೆಯಲ್ಲಿ

ಗುಡುಗು-ಸಿಡಿಲಿಗೆ ಬೆಚ್ಚಿಬಿದ್ದ ಜನತೆ

ಸೋಮವಾರಪೇಟೆ: ಆಗಸ್ಟ್ ೩೦ರ ನಡುರಾತ್ರಿ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಭಾರೀ ಗುಡುಗು, ಮಿಂಚು, ಸಿಡಿಲು ಉಂಟಾಗಿ ಜನತೆ ಬೆಚ್ಚಿಬಿದ್ದ ಘಟನೆ ನಡೆಯಿತು.

ನಡುರಾತ್ರಿ ೧೨.೫೦ ರಿಂದ ೧.೧೦ರವರೆಗೆ ಆಗಸದಲ್ಲಿ ಭಾರೀ ಸದ್ದಿನೊಂದಿಗೆ ಗುಡುಗು, ಸಿಡಿಲು ಮೂಡಿದೆ. ಕಾರ್ಗತ್ತಲೆಯಲ್ಲಿ ‘ಕ್ಯಾಮೆರಾ ಫೋಟೋ ಫ್ಲಾö್ಯಷ್’ನಂತಹ ಬೆಳಕು ಕಂಡುಬAದಿದ್ದು, ಮಲಗಿದ್ದವರು ಎದ್ದು ಭಯಭೀತರಾಗುವಂತೆ ಮಾಡಿತು.

ನಾಲ್ಕೆöÊದು ಬಾರಿ ಭಾರೀ ಪ್ರಮಾಣದಲ್ಲಿ ಆಗಸ ಗುಡುಗಿದೆ. ಮಿಂಚಿನೊAದಿಗೆ ಸಿಡಿಲಿನ ಆರ್ಭಟವೂ ಜೋರಾಗಿದ್ದು, ಕೆಲಕಾಲ ಆತಂಕಕ್ಕೆ ಒಳಗಾಗುವಂತೆ ಮಾಡಿತ್ತು ಎಂದು ಆಲೇಕಟ್ಟೆಯ ಮಹೇಶ್ ಅಭಿಪ್ರಾಯ ಹಂಚಿಕೊAಡಿದ್ದಾರೆ.

ನನಗೀಗ ೭೦ ವರ್ಷ ವಯಸ್ಸು, ನನ್ನ ಜೀವಮಾನದಲ್ಲೇ ಈ ರೀತಿಯ ಗುಡುಗು ಮಿಂಚು ಸಿಡಿಲನ್ನು ನೋಡಿಲ್ಲ. ಕಳೆದ ೨೦೧೮ರಲ್ಲಿ ಜಲಪ್ರಳಯ ಉಂಟಾದ ಸಂದರ್ಭವೂ ಈ ಪ್ರಮಾಣದಲ್ಲಿ ಆಗಸ ಗುಡುಗಿಲ್ಲ ಎಂದು ಕಲ್ಕಂದೂರು ಗ್ರಾಮದ ಕಾಳಪ್ಪ ಅವರು ಅಭಿಪ್ರಾಯಿಸಿದ್ದಾರೆ.

ಆಗಸ್ಟ್ ೩೦ರ ರಾತ್ರಿ ಸೋಮವಾರಪೇಟೆ ಪಟ್ಟಣ, ಹಾನಗಲ್ಲು, ಕಲ್ಕಂದೂರು, ಯಡೂರು, ಚೌಡ್ಲು, ಕಾನ್ವೆಂಟ್‌ಬಾಣೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಭಾರೀ ಸದ್ದಿನೊಂದಿಗೆ ಆಗಸ ಗುಡುಗಿದೆ. ಈ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದರಿAದ ಯಾವುದೇ ಅನಾಹುತ ಸಂಭವಿಸಿಲ್ಲ.ಸುAಟಿಕೊಪ್ಪ : ಸುಂಟಿಕೊಪ್ಪ ನಗರದಲ್ಲಿ ಇಂದು ೪.೩೦ರ ಸಮಯದಲ್ಲಿ ದಿಢೀರನೇ ಮಳೆಯಿಂದ ಶಾಲೆಯ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ವ್ಯಾಪಾರಸ್ಥರು ತೀರಾ ಆತಂಕಗೊAಡರು. ಕಳೆದ ೪ ದಿನಗಳಿಂದ ಉರಿ ಬಿಸಿಲಿನಿಂದ ಇದ್ದ ನಗರದಲ್ಲಿ ಇಂದು ಎಡೆಬಿಡದೆ ಮಳೆ ಸುರಿಯಿತು. ಸರಿಯಾದ ಚರಂಡಿ ಇಲ್ಲದ ರಸ್ತೆಯಲ್ಲಿ ನೀರು ಹರಿಯಿತು. ಉಲುಗುಲಿ ರಸ್ತೆ ನೀರಿನಿಂದ ಆವೃತಗೊಂಡಿತು. ವಾಹನ ಚಾಲಕರು ಮಳೆಯಿಂದ ಪರದಾಡಿದರು.

ಕೂಡಿಗೆ ವ್ಯಾಪ್ತಿಯಲ್ಲಿ ಭಾರೀ ಮಳೆ

ಕೂಡಿಗೆ: ಕೂಡುಮಂಗಳೂರು ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಸಂಜೆ ೬ ಗಂಟೆಯ ಒಂದು ಗಂಟೆಗೂ ಹೆಚ್ಚು ಸಮಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೂಡಿಗೆ ಸರ್ಕಲ್ ನ ತಗ್ಗು ಪ್ರದೇಶದ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ಚರಂಡಿಗಳಲ್ಲಿ ಮಳೆಯ ನೀರು ಹರಿಯಲು ಸಾಧ್ಯವಾಗದೆ ರಸ್ತೆಯ ಮೇಲೆ ಒಂದು ಅಡಿಗಳಷ್ಟು ನೀರು ಹರಿದ ಪರಿಣಾಮವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ಸುAಟಿಕೊಪ್ಪ : ಸುಂಟಿಕೊಪ್ಪ ನಗರದಲ್ಲಿ ಇಂದು ೪.೩೦ರ ಸಮಯದಲ್ಲಿ ದಿಢೀರನೇ ಮಳೆಯಿಂದ ಶಾಲೆಯ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ವ್ಯಾಪಾರಸ್ಥರು ತೀರಾ ಆತಂಕಗೊAಡರು. ಕಳೆದ ೪ ದಿನಗಳಿಂದ ಉರಿ ಬಿಸಿಲಿನಿಂದ ಇದ್ದ ನಗರದಲ್ಲಿ ಇಂದು ಎಡೆಬಿಡದೆ ಮಳೆ ಸುರಿಯಿತು. ಸರಿಯಾದ ಚರಂಡಿ ಇಲ್ಲದ ರಸ್ತೆಯಲ್ಲಿ ನೀರು ಹರಿಯಿತು. ಉಲುಗುಲಿ ರಸ್ತೆ ನೀರಿನಿಂದ ಆವೃತಗೊಂಡಿತು. ವಾಹನ ಚಾಲಕರು ಮಳೆಯಿಂದ ಪರದಾಡಿದರು.

ಕೂಡಿಗೆ ವ್ಯಾಪ್ತಿಯಲ್ಲಿ ಭಾರೀ ಮಳೆ

ಕೂಡಿಗೆ: ಕೂಡುಮಂಗಳೂರು ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಸಂಜೆ ೬ ಗಂಟೆಯ ಒಂದು ಗಂಟೆಗೂ ಹೆಚ್ಚು ಸಮಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೂಡಿಗೆ ಸರ್ಕಲ್ ನ ತಗ್ಗು ಪ್ರದೇಶದ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ಚರಂಡಿಗಳಲ್ಲಿ ಮಳೆಯ ನೀರು ಹರಿಯಲು ಸಾಧ್ಯವಾಗದೆ ರಸ್ತೆಯ ಮೇಲೆ ಒಂದು ಅಡಿಗಳಷ್ಟು ನೀರು ಹರಿದ ಪರಿಣಾಮವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ಕುಶಾಲನಗರ: ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಭಾರೀ ಪ್ರಮಾಣದ ಮಳೆ ಸುರಿದಿದೆ. ಸಂಜೆ ೬.೩೦ರಿಂದ ಪ್ರಾರಂಭಗೊAಡ ಮಳೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದು ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಪಟ್ಟಣ ಸುತ್ತಮುತ್ತ ವ್ಯಾಪ್ತಿಯ ಎಲ್ಲಾ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಮಾಹಿತಿ ತಿಳಿದು ಸ್ಥಳಕ್ಕೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಸದಸ್ಯ ಡಿ.ಕೆ ತಿಮ್ಮಪ್ಪ, ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಶಾಲನಗರದಲ್ಲಿ ತಗ್ಗು ಪ್ರದೇಶಗಳಲ್ಲಿ ಇದ್ದ ಮನೆಗಳಿಗೆ ರಸ್ತೆಯ ನೀರು ಹರಿದು ಜನ ಜೀವನ ಬಹುತೇಕ ಅಸ್ತವ್ಯಸ್ತಗೊಂಡಿತ್ತು.

ಹತ್ತು ಮನೆಗಳಿಗೆ ನೀರು

ಸುಂಟಿಕೊಪ್ಪ : ಇಂದು ಸುರಿದ ಮಳೆಗೆ ಸುಂಟಿಕೊಪ್ಪ ಸಮೀಪದ ಗಿರಿಯಪ್ಪ ಮನೆ ಬಳಿ ವಾಸಿಸುವ ಸುಮಾರು ೧೦ ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ಪದಾರ್ಥಗಳು ಸಂಪೂರ್ಣ ನೀರಿನಲ್ಲಿ ಮುಳುಗಡೆಗೊಂಡಿದೆ.