ಸಂಸ್ಕೃತಿ ಸಂಸ್ಕಾರ ಉಡುಗೆ-ತೊಡುಗೆ ಆಚಾರ-ವಿಚಾರ ಪದ್ಧತಿ ಪರಂಪರೆಯಲ್ಲಿ ಹಾಗೂ ವಿಶಿಷ್ಟ ಜೀವನ ಶೈಲಿಯೊಂದಿಗೆ ಪ್ರಪಂಚದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಕೊಡಗು ಸುಮಾರು ೨೫೦-೩೦೦ ವರ್ಷಗಳ ಹಿಂದೆ ಒಂದು ಪ್ರತ್ಯೇಕ ದೇಶವಾಗಿತ್ತು ಎನ್ನುವುದು ಬಾಳೋ ಪಾಟ್ ಆಧಾರಿತ ಜಾನಪದ ಇತಿಹಾಸದಲ್ಲಿದೆ. ಆನಂತರದ ಬದಲಾದ ಸನ್ನಿವೇಶದಲ್ಲಿ ಕೊಡಗು ಭಾರತ ದೇಶದ ಒಂದು ರಾಜ್ಯವಾಗಿ ಇದ್ದಾಗಲೂ ತನ್ನದೇ ಆದ ವಿಭಿನ್ನತೆ ಮತ್ತು ವೈಶಿಷಟ್ಯಕ್ಕೆ ಹೆಸರಾಗಿತ್ತು. ಕೊಡವ ನಾಡಿನ ಪ್ರತಿ ಮನೆ-ಮನೆಯಲ್ಲೂ ಯೋಧ ಪರಂಪರೆಯನ್ನು ಕಾಣಬಹುದು. ಹಾಗಾಗಿ ಕೊಡಗು ಇತರ ಸಂಸ್ಕೃತಿ ಸಂಸ್ಕಾರ ಆಚಾರದ ಜೊತೆ-ಜೊತೆಗೆ ಕೆಚ್ಚೆದೆಯ ವೀರತ್ವಕ್ಕೂ ಹೆಸರುವಾಸಿಯಾಗಿದೆ, ಇಂಥಹ ಕೊಡಗಿನಲ್ಲಿ ನೂರಾರು ಯುದ್ಧಗಳು, ಹೋರಾಟಗಳು ನಡೆದಿರುವುದನ್ನು ಇತಿಹಾಸದಿಂದ ತಿಳಿಯಬಹುದು. ಭಾರತ ದೇಶವನ್ನು ಪಾಶ್ಚಿಮಾತ್ಯರು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಾಗಲೂ ಕೊಡಗು ತನ್ನದೇ ಆದ ರೀತಿಯಲ್ಲಿ ಪ್ರತಿಭಟನೆಯನ್ನು ದಾಖಲಿಸಿ ಹೋರಾಟವನ್ನು ರೂಪಿಸಿತ್ತು ಎನ್ನುವುದು ಇತಿಹಾಸದ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ಅಂಶ. ಕೊಡಗಿನ ಆದಿಮೂಲ ನಿವಾಸಿಗಳಾಗಿರುವ ಕೊಡವರು ಭಾರತದ ಸ್ವಾತಂತ್ರ‍್ಯಕ್ಕಾಗಿ ಕೊಡವ ನಾಡಿನ ಉಳಿವಿಗಾಗಿ ತಮ್ಮ ತನು, ಮನ, ಧನ, ವಜ್ರ ವೈಢೂರ್ಯಗಳನ್ನ, ಚಿನ್ನಾಭರಣಗಳನ್ನು ಅರ್ಪಿಸಿದ್ದಲ್ಲದೆ ತಮ್ಮನ್ನು ತಾವೇ ಸಮರ್ಪಿಸಿ ಕೊಂಡವರು. ಈ ದೇಶದ ಸ್ವತಂತ್ರ ಜ್ವಾಲೆಯಲ್ಲಿ ಆಹುತಿಯಾದ ಕೊಡವರ ಸಂಖ್ಯೆ ಬಹಳಷ್ಟು ಇದೆ. ಅದರಲ್ಲೂ ಇಡೀ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಯೂನಿಯನ್ ಜಾಕನ್ನು ಕೆಳಗಿಳಿಸಿ ತ್ರಿವರ್ಣ ಧ್ವಜವನ್ನು ಏರಿಸಿದ ಕೀರ್ತಿ ಮಲ್ಲೇಂಗಡ ಚಂಗಪ್ಪ ಅವರಿಗೆ ಸಲ್ಲುತ್ತದೆ. ಸ್ವಾತಂತ್ರದ ಕಿಚ್ಚು ಹೊತ್ತಿಸಿ ದೂರದ ಹುಬ್ಬಳ್ಳಿಯಲ್ಲಿಯೂ ಸಮರ್ಪಕವಾಗಿ ಸಂಘಟಿಸಿದ ಸಂಘಟನಾ ಚತುರ, ಹುಬ್ಬಳ್ಳಿ ಹುಲಿ ಎಂದೇ ಖ್ಯಾತರಾಗಿದ್ದ ಚಕ್ಕೇರ ಮೊಣ್ಣಯ್ಯ ಅವರು, ಕೊಡಗಿನ ಗಾಂಧಿ ಎಂದು ಹೆಸರಾಗಿ ಇಡೀ ಸಂಸಾರವನ್ನೇ ಜೈಲಿನಲ್ಲಿರಿಸಿದ್ದರು, ಅದರಲ್ಲೂ ತನ್ನ ಗರ್ಭಿಣಿ ಪತ್ನಿಯೊಂದಿಗೂ ಸ್ವ್ವಾತಂತ್ರದ ಜ್ವಾಲೆಯಲ್ಲಿ ಬೆಂದು ಜೈಲುವಾಸ ವನ್ನು ಅನುಭವಿಸಿದ ಪಂದ್ಯAಡ ಬೆಳ್ಯಪ್ಪ ದಂಪತಿಗಳು, ಸ್ವತಂತ್ರ ಚಳುವಳಿಗಾಗಿಯೇ ಕೆರೆಗೆ ಹಾರಿ ಆತ್ಮಾಹುತಿ ಮಾಡಿಕೊಂಡ ಕೋಳೆರ ಕಾವೇರಿ, ಬ್ರಿಟಿಷ್ ಸೈನ್ಯವನ್ನು ಕೊಡಗಿನಿಂದ ಮಾತ್ರವಲ್ಲದೇ ದೂರದ ಪೆರಾಜೆಯವರೆಗೂ ಅಟ್ಟಾಡಿಸಿ ಹೊಡೆದೋಡಿಸಿ ನಂತರ ಅದೇ ಬ್ರಿಟಿಷರಿಂದ ದಾಖಲೀಕರಣಕ್ಕೆ ಒಳಗಾದ ಪಟ್ಟಚೆರವಂಡ ಬೊಳುಕ, ಹೀಗೆ ಪಟ್ಟಿ ಬೆಳೆಯುತ್ತಾ ಕೊಡವನಾಡಿನ ಸ್ವಾತಂತ್ರಕ್ಕಾಗಿ ಹೋರಾಡಿದ ನೇತಾರರ ಸಂಖ್ಯೆ ಸರಿಸುಮಾರು ೨೨೦ ರಿಂದ ೨೫೦ ರಷ್ಟು ಹೋಗುತ್ತದೆ. ಭಾರತ ಸ್ವಾತಂತ್ರ‍್ಯಗೊAಡು ೭೫ ವರ್ಷಗಳನ್ನು ಪೂರೈಸಿ ಇದೇ ಸಂಭ್ರಮದಲ್ಲಿ ಹರ್ ಘರ್ ತಿರಂಗ ಅಭಿಯಾನವನ್ನು ನಡೆಸಿ ಸ್ವಾತಂತ್ರö್ಯ ಸಂಭ್ರಮವನ್ನ ಸಂಭ್ರಮಿಸಿ ತೇಲಾಡಿದ ನಾವು ನಮ್ಮದೇ ಮಣ್ಣಿಗಾಗಿ ತಮ್ಮ ಇಡೀ ಜೀವ ಮತ್ತು ಜೀವನವನ್ನು ಮುಡಿಪಾಗಿಟ್ಟು ಹೋರಾಡಿದ ನಮ್ಮ ಪೂರ್ವಜರನ್ನನೆನೆಸಿಕೊಳ್ಳುವುದು ಧರ್ಮ ಮತ್ತು ಕರ್ತವ್ಯ ವೆನಿಸುತ್ತದೆ

ಈ ನೆಲೆಗಟ್ಟಿನಲ್ಲಿ ಕೊಡವಾಮೆರ ಕೊಂಡಾಟ ಸÀಂಘಟನೆಯು ಕಳೆದ ಒಂದು ವರ್ಷದಿಂದ ಸತತವಾಗಿ ಸ್ವಾತಂತ್ರ‍್ಯ ಚಳುವಳಿಯಲ್ಲಿ ಕೊಡವ ಎಂಬ ಶೀರ್ಷಿಕೆಯಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಇದರ ಮುಂದುವರಿದ ಭಾಗವಾಗಿ ನಾವು ಸ್ವಾತಂತ್ರ‍್ಯ ಚಳುವಳಿಯಲ್ಲಿ ಹೋರಾಡಿ ನಮ್ಮ ಇಂದಿನ ನೆಮ್ಮದಿಗೆ ಕಾರಣಕರ್ತರಾಗಿರುವ ಎಲ್ಲ ಹಿರಿಯರ ಸಂಸಾರಕ್ಕೆ ಕನಿಷ್ಠ ಗೌರವವನ್ನು ಅರ್ಪಿಸುವ ಕಾರ್ಯಕ್ರಮವಾಗಿ ಇದೇ ತಿಂಗಳ ತಾ. ೭ರಂದು ಮಡಿಕೇರಿಯ ರೆಡ್‌ಕ್ರಾಸ್ ಭವನದಲ್ಲಿ ಸ್ವಾತಂತ್ರö್ಯ ಚಳುವಳಿಯಲ್ಲಿ ಕೊಡವ ನೆನಪಿನ ಕಾರ್ಯಕ್ರಮವಾಗಿ ಆಚರಿಸುತ್ತಿದ್ದೇವೆ.

ಕಾರ್ಯಕ್ರಮದಲ್ಲಿ ಕೊಡವ ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬಸ್ಥರು ಭಾಗವಹಿಸಲಿದ್ದು ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಅಭಿನಂದಿಸಲಾಗುತ್ತದೆ ಅಲ್ಲದೇ ಇತಿಹಾಸದ ಪುಟಗಳಲ್ಲಿ ಮರೆಯಾಗಿರುವ ಮತ್ತು ಮರೆಯಾಗುತ್ತಿರುವ ಎಲ್ಲ ಕೊಡವ ಸ್ವಾತಂತ್ರ‍್ಯ ಹೋರಾಟಗಾರರ ನೆನಪು ಅಜರಾಮರವಾಗಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ, ಕೊಡವ ಸ್ವಾತಂತ್ರ‍್ಯ ವೀರರ ಸ್ಮಾರಕವನ್ನ ನಿರ್ಮಿಸಲು ಉದ್ದೇಶಿಸಿದ್ದು, ಮೊಟ್ಟಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಹಾರಾಡಿದ ಮಡಿಕೇರಿ ಕೋಟೆಯಲ್ಲಿ ಮಲ್ಲೇಂಗಡ ಚಂಗಪ್ಪ ಅವರ ಪುತ್ಥಳಿಯನ್ನು ಇಡುವಂತೆಯೂ ಮತ್ತು ಕೊಡಗಿನ ವಿವಿಧ ಪ್ರದೇಶಗಳಿಗೆ, ರಸ್ತೆಗಳಿಗೆ ಸ್ವಾತಂತ್ರ‍್ಯ ಹೋರಾಟಗಾರರ ಹೆಸರನ್ನ ಇಡಲು ಕ್ರಮ ವಹಿಸುವಂತೆ ಯೋಜನೆಯನ್ನು ರೂಪಿಸಲು ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು. ಹಾಗೂ ಮಡಿಕೇರಿಯಲ್ಲಿ ಬೃಹತ್ ಸ್ವತಂತ್ರ ಸ್ಮಾರಕವನ್ನು ನಿರ್ಮಿಸಿ ಕೊಡಗಿನ ಎಲ್ಲಾ ನೈಜ ಸ್ವಾತಂತ್ರö್ಯ ಹೋರಾಟಗಾರರ ನೆನಪನ್ನು ಅಮರವಾಗಿ ಇರಿಸುವಂತೆ ಕ್ರಮವಹಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇದೇ ಸಂದರ್ಭದಲ್ಲಿ ‘‘ಸ್ವತಂತ್ರ ಚಳುವಳಿಲ್ ಕೊಡವ’’ ಎನ್ನುವ ವಿಚಾರವಾಗಿ ನಡೆz Àಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಮಾನ್ಯತಾ ಪತ್ರವನ್ನು ವಿತರಿಸಲಾಗುವುದು.

ಕಳೆದ ಮೂರು ವರ್ಷಗಳಿಂದ ಕೊಡಗು ಕೊಡವ ಸಂಸ್ಕೃತಿ ಪದ್ಧತಿ ಆಚಾರ-ವಿಚಾರ, ಸಾಹಿತ್ಯದಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯು ತನ್ನದೇ ಆದ ಛಾಪನ್ನು ಮೂಡಿಸಿದೆ. ಸಂಘಟನೆಯು ಸುಮಾರು ೨೨೦ಕ್ಕೂ ಅಧಿಕ ಸ್ವಾತಂತ್ರ‍್ಯ ಹೋರಾಟಗಾರರ ಹೆಸರನ್ನು ಈಗಾಗಲೇ ಪಟ್ಟಿ ಮಾಡಿದ್ದು ಇವರ ಹೆಸರು ಮತ್ತು ಮನೆ ಹೆಸರನ್ನು ಬಿಟ್ಟರೆ ಉಳಿದ ವಿವರಗಳು ಲಭ್ಯವಿಲ್ಲದ ಕಾರಣ ಆಯಾ ಕುಟುಂಬಸ್ಥರು, ಸಂಬAಧಿಕರು ತಮ್ಮ ಹಿರಿಯ ಹೋರಾಗಾರರನ್ನ ನೆನಪಿಸಿಕೊಳ್ಳುವ ಈ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತ ರಾಗಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ತಮಗೆ ಅರಿವಿರುವ ಕೊಡವ ಸ್ವಾತಂತ್ರ‍್ಯ ಹೋರಾಟಗಾರರ ವಿವರವನ್ನು ತಾ. ೫ ರ ಒಳಗೆ ನೀಡುವಂತೆ ಮನವಿ.

ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನಿಲ್ ಕುಮಾರ್, ಮಂಡೇಪAಡ ಅಪ್ಪಚ್ಚು ರಂಜನ್, ಆದಿ ಬ್ರಹ್ಮಗಿರಿ ಪತ್ರಿಕೆಯ ಸಂಪಾದಕ ಡಾ. ಉಳ್ಳಿಯಡ ಎಂ ಪೂವಯ್ಯ, ಹೊಸ ದಿಗಂತ ಪತ್ರಿಕೆಯ ಸುದ್ದಿ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ, ಮಡಿಕೇರಿಯ ಎಫ್‌ಎಂಸಿ ಕಾಲೇಜಿನ ಉಪನ್ಯಾಸಕ ಆಗಿರುವ ಕಂಬೆಯAಡ ಡೀನಾ ಬೋಜಣ್ಣ, ಸ್ವಾತಂತ್ರ‍್ಯ ಚಳುವಳಿಯಲ್ಲಿ ಕೊಡವರು ಪ್ರಬಂಧ ಸ್ಪರ್ಧೆಯ ನಗದು ಬಹುಮಾನ ಟ್ರೋಫಿ ಹಾಗೂ ಮಾನ್ಯತಾ ಪತ್ರಗಳನ್ನು ತನ್ನ ದಿವಂಗತ ತಂದೆ-ತಾಯಿಯರ ನೆನಪಿನಲ್ಲಿ ನೀಡಿದ ವಿ.ಬಾಡಗದ ಬೆಳೆಗಾರ ಕೊಂಗAಡ ಕಾಶಿ ಕಾರ್ಯಪ್ಪ, ಕಾರ್ಯಕ್ರಮ ಆಯೋಜನೆಯ ದಾನಿಗಳಾದ ಕುಕ್ಕೆರ ಜಯ ಚಿಣ್ಣಪ್ಪ, ಹಾಗೂ ಮಲ್ಲಂಡ ದರ್ಶನ್ ಮುತ್ತಪ್ಪ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಸಂಘಟನೆಯು ಸಂಗ್ರಹಿಸಿದ ಸ್ವಾತಂತ್ರ ಹೋರಾಟಗಾರರ ಪಟ್ಟಿಯನ್ನು ನಾಳಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.

-ಕುಂಙÂರ ಗಿರೀಶ್ ಭೀಮಯ್ಯ,

ಕಾರ್ಯದರ್ಶಿ ಕೊಡವಾಮೆರ ಕೊಂಡಾಟ ಸÀಂಘಟನೆ

ಮೊ: ೯೪೮೩೫೩೪೪೮೧