ಶಾಸಕ ಸ್ಥಾನದಿಂದ ಅನರ್ಹತೆ ಕುರಿತ ವರದಿ ಸೋರಿಕೆಯಿಂದ ಆಘಾತ: ಜಾರ್ಖಂಡ್ ರಾಜ್ಯಪಾಲರಿಗೆ ಯುಪಿಎ ನಿಯೋಗ
ರಾಂಚಿ, ಸೆ. ೧: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಕುರಿತು ‘ಕೆಲವು ಆಯ್ದ ವಿಷಯಗಳನ್ನು ಸೋರಿಕೆ’ ಮಾಡಿರುವುದು ಆಘಾತಕಾರಿ ಎಂದು ಗುರುವಾರ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಭೇಟಿ ಮಾಡಿದ ಯುಪಿಎ ನಿಯೋಗ ತಿಳಿಸಿದೆ. ಇಂತಹ ಸೋರಿಕೆಗಳು ಅವ್ಯವಸ್ಥೆ, ಗೊಂದಲ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿವೆ ಎಂದು ರಾಜ್ಯಪಾಲ ಬೈಸ್ಗೆ ನೀಡಿದ ಮನವಿಯಲ್ಲಿ ಯುಪಿಎ ನಿಯೋಗ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಈ ವಿಚಾರದ ಬಗ್ಗೆ ಚುನಾವಣಾ ಆಯೋಗದ ತೀರ್ಪಿನ ಗೊಂದಲವನ್ನು ನಿವಾರಿಸುವಂತೆ ನಿಯೋಗ ರಾಜ್ಯಪಾಲರಿಗೆ ಕೇಳಿಕೊಂಡಿದೆ. ಸೊರೆನ್ ಅವರ ಭವಿಷ್ಯದ ಕುರಿತಾದ ಊಹಾಪೋಹಗಳು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ಅಸ್ಥಿರತೆಗೆ ಉತ್ತೇಜನ ನೀಡಿವೆ ಎಂದು ನಿಯೋಗ ಹೇಳಿದೆ. ೮೧ ಸದಸ್ಯರ ಸದನದಲ್ಲಿ ಆಡಳಿತಾರೂಢ ಜೆಎಂಎA-ಕಾAಗ್ರೆಸ್-ಆರ್ಜೆಡಿ ಸಮ್ಮಿಶ್ರ ಸರ್ಕಾರ ಸಂಪೂರ್ಣ ಬಹುಮತವನ್ನು ಹೊಂದಿರುವುದರಿAದ, ಸಿಎಂ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಿಕೆಯು ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಿಯೋಗ ಪ್ರತಿಪಾದಿಸಿದೆ. ಲಾಭದಾಯಕ ಹುದ್ದೆ ಹೊಂದಿದ ಪ್ರಕರಣದಲ್ಲಿ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಬಿಜೆಪಿ ಮನವಿ ಮಾಡಿದ ನಂತರ, ಚುನಾವಣಾ ಆಯೋಗವು ಆಗಸ್ಟ್ ೨೫ ರಂದು ತನ್ನ ನಿರ್ಧಾರವನ್ನು ರಾಜ್ಯಪಾಲರಿಗೆ ತಿಳಿಸಿದೆ. ಸೊರೆನ್ ಅವರನ್ನು ಅನರ್ಹಗೊಳಿಸುವ ಚುನಾವಣಾ ಆಯೋಗದ ನಿರ್ಧಾರ ಇನ್ನೂ ಅಧಿಕೃತವಾಗಿಲ್ಲವಾದರೂ, ಚುನಾವಣಾ ಸಮಿತಿಯು ಮುಖ್ಯಮಂತ್ರಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಶಿಫಾರಸು ಮಾಡಿದೆ ಎಂಬ ವದಂತಿ ಇದೆ.
ಪಾಕ್ನಲ್ಲಿ ಪ್ರವಾಹ: ಮೋದಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ
ಇಸ್ಲಾಮಾಬಾದ್, ಸೆ. ೧: ಭೀಕರ ಪ್ರವಾಹದಿಂದ ಉಂಟಾದ ಮಾನವ ಮತ್ತು ವಸ್ತು ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಧನ್ಯವಾದ ಸಲ್ಲಿಸಿದ್ದು, ತಮ್ಮ ದೇಶವು ನೈಸರ್ಗಿಕ ವಿಕೋಪದ ದುಷ್ಪರಿಣಾಮಗಳನ್ನು ಎದುರಿಸಲಿದೆ ಎಂದು ಹೇಳಿದ್ದಾರೆ. ಮಳೆಯಿಂದ ಉಂಟಾದ ಪ್ರವಾಹದಿಂದ ಪಾಕಿಸ್ತಾನದಾದ್ಯಂತ ವ್ಯಾಪಕ ಹಾನಿಯುಂಟಾಗಿದೆ. ೧,೧೦೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದೇಶದ ಜನಸಂಖ್ಯೆಯ ಏಳನೇ ಒಂದು ಭಾಗದಷ್ಟು ಜನರನ್ನು ಸ್ಥಳಾಂತರಿಸಲಾಗಿದೆ. ಪ್ರವಾಹದಿಂದ ಉಂಟಾದ ಮಾನವ ಮತ್ತು ವಸ್ತು ನಷ್ಟದ ಬಗ್ಗೆ ಸಂತಾಪ ಸೂಚಿಸಿದ್ದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪಾಕಿಸ್ತಾನದ ಜನರು ದೇವರ ಕೃಪೆಯಿಂದ ನೈಸರ್ಗಿಕ ವಿಕೋಪದ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳುತ್ತಾರೆ ಮತ್ತು ಜೀವನ ಮತ್ತು ಸಮುದಾಯಗಳನ್ನು ಪುನರ್ನಿರ್ಮಿಸಿಕೊಳ್ಳುತ್ತಾರೆ' ಎಂದು ಷರೀಫ್ ಟ್ವೀಟ್ ಮೂಲಕ ಹೇಳಿದ್ದಾರೆ. ಪ್ರಧಾನಿ ಮೋದಿ ಸೋಮವಾರ ಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ದುಃಖಿತನಾಗಿದ್ದೇನೆ ಮತ್ತು ಶೀಘ್ರದಲ್ಲೇ ಸಹಜ ಸ್ಥಿತಿಯ ಮರುಸ್ಥಾಪನೆಯಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದರು.
ವಿಶ್ವಸಂಸ್ಥೆಯ ಷಿನ್ಜಿಯಾಂಗ್ ವರದಿ ಬಗ್ಗೆ ಚೀನಾ ಕೆಂಡಾಮAಡಲ, ವರದಿ ಹಾಸ್ಯಮಯ ಎಂದ ಡ್ರ್ಯಾಗನ್
ಬೀಜಿಂಗ್, ಸೆ. ೧: ವಿಶ್ವಸಂಸ್ಥೆಯ ಮಾನವ ಹಕ್ಕುಗಳು ಷಿನ್ಜಿಯಾಂಗ್ನಲ್ಲಿ ಚೀನಾ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಪ್ರಕಟಿಸಿರುವ ವರದಿಗೆ ಚೀನಾ ಕೆಂಡಾಮAಡಲವಾಗಿದೆ. ವಿಶ್ವಸಂಸ್ಥೆಯ ವರದಿಯನ್ನು ಹಾಸ್ಯಮಯವಾದದ್ದು ಎಂದು ಹೇಳಿದ್ದು, ಚೀನಾಗೆ ಮಸಿ ಬಳಿಯುವ ಪ್ರಯತ್ನದ್ದಾಗಿದೆ ಎಂದು ತೀಕ್ಷ÷್ಣ ಪ್ರತಿಕ್ರಿಯೆ ನೀಡಿದೆ. ಯುಎನ್ ವರದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಜೆನೀವಾದಲ್ಲಿರುವ ಚೀನಾ ಮಿಷನ್ ವಕ್ತಾರ ಲಿಯೂ ಯುಯಿನ್, ಈ ವರದಿ ಚೀನಾ ವಿರೋಧಿ ಶಕ್ತಿಗಳು ಹಾಗೂ ಪಶ್ಚಿಮದ ದೇಶಗಳು ಸಿದ್ಧಪಡಿಸಿರುವ ಹಾಸ್ಯಮಯ ಕಥೆ ಎಂದು ಹೇಳಿದ್ದಾರೆ. ಚೀನಾ ಉಯ್ಘರ್ನಲ್ಲಿನ ಅಲ್ಪಸಂಖ್ಯಾತ ಜನಾಂಗದ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದೆ, ಪಶ್ಚಿಮದ ರಾಷ್ಟ್ರಗಳು ಹೈಕಮಿಷನರ್ ಹಾಗೂ ಒಹೆಚ್ ಸಿಹೆಚ್ಆರ್ಗೆ ಒತ್ತಡ ಹೇರುತ್ತಿದ್ದವು ಎಂದು ಚೀನಾ ಆರೋಪ ಮಾಡಿದೆ. ಷಿನ್ ಜಿಯಾಂಗ್ಗೆ ಸಂಬAಧಿಸಿದ ಮೌಲ್ಯಮಾಪನದಲ್ಲಿ ಷಿನ್ ಜಿಯಾಂಗ್ನಲ್ಲಿರುವ ಮುಸ್ಲಿಂ ಸಮುದಾಯದ ಮೇಲೆ ಚೀನಾ ದೌರ್ಜನ್ಯ ಎಸಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿತ್ತು.