ದಸರಾ ದಶಮಂಟಪ - ೧ ಮಡಿಕೇರಿ, ಸೆ. ೧: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಸಾರಥಿ ಎಂಬ ಖ್ಯಾತಿ ಪಡೆದಿರುವ ನೂರಾರು ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಸಮಿತಿ ಈ ಬಾರಿಯ ಉತ್ಸವಕ್ಕೆ ಸಜ್ಜಾಗುತ್ತಿದೆ ಎಂದು ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಎಂ.ಡಿ. ಸುರೇಶ್ ತಿಳಿಸಿದ್ದಾರೆ.

ಋಷಿ-ಮುನಿಗಳ ತಪಸ್ಸಿಗೆ ಶಿವ-ಪಾರ್ವತಿ ತಮ್ಮ ಪುತ್ರರ ಸಹಿತ ಒಲಿದು ಲೋಕ ಕಲ್ಯಾಣಕ್ಕಾಗಿ ಆಶೀರ್ವಾದ ಮಾಡುವ ಕಥಾ ಸಾರಾಂಶವನ್ನು ಈ ಬಾರಿ ಮಂಟಪದಲ್ಲಿ ಅಳವಡಿಸಲಾಗುತ್ತಿದ್ದು, ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದೆ. ಪ್ಲಾಟ್‌ಫಾರಂ ಹಾಗೂ ಟ್ರಾö್ಯಕ್ಟರ್ ಸೆಟ್ಟಿಂಗ್ಸ್ ಅನ್ನು ಸಮಿತಿ ಸದಸ್ಯರೆ ಮಾಡಲಿದ್ದು, ದಿಂಡಿಗಲ್‌ನ ಸೆಲ್ವಂ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ೮ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಬೆಂಗಳೂರಿನ ಕಲಾವಿದ ಮಧುಕರ್ ಕಲಾ ಕೃತಿಗಳನ್ನು ತಯಾರಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಮಡಿಕೇರಿಯ ಸ್ಕಂದ ಡೆಕೊರೇರ‍್ಸ್ನ ಅನಿ ಒದಗಿಸಲಿದ್ದಾರೆ. ಒಟ್ಟು ರೂ. ೫ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಸಾಂಪ್ರದಾಯಿಕ ಆಚರಣೆಯೊಂದಿಗೆ ಜನಾಕರ್ಷಣೆಗೆ ಒತ್ತು ನೀಡಲಾಗುವುದು ಎಂದು ಸುರೇಶ್ ಮಾಹಿತಿ ನೀಡಿದರು.

- ಉಜ್ವಲ್ ರಂಜಿತ್