ಕರಿಕೆ, ಆ.೨೯: ಭಾಗಮಂಡಲ- ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭಾಗಮಂಡಲ- ಕರಿಕೆ ಅಂತರರಾಜ್ಯ ಹೆದ್ದಾರಿ ಹಕ್ಕಿಕಂಡಿ ಹಾಗೂ ಬಾಚಿಮಲೆ, ಮೇಲಡ್ಕ ಬಳಿ ಬರೆ ಹಾಗೂ ಮರ ಉರುಳಿ ಬಿದ್ದ ಪರಿಣಾಮವಾಗಿ ದಿನವಿಡೀ ವಾಹನ ಸಂಚಾರ ಸ್ಥಗಿತ ಗೊಂಡು ಖಾಸಗಿ, ಸಾರಿಗೆ ಸಂಸ್ಥೆಯ ಪ್ರಯಾಣಿಕರು ಮತ್ತು ಇತರೆ ಲಘು ವಾಹನ ಪ್ರಯಾಣಿಕರು ಊಟ ತಿಂಡಿ ಇಲ್ಲದೆ ಪರದಾಡಿದ ಘಟನೆ ನಡೆಯಿತು. ಲೋಕೋಪ ಯೋಗಿ ಇಲಾಖೆಯ ಮೂಲಕ ಎಕ್ಸ್ಕಾವೇಟರ್ ಯಂತ್ರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸತತ ಕಾರ್ಯಾಚರಣೆ ಯಿಂದ ಸಂಜೆ ವೇಳೆಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಮಳೆ ಸುರಿದರೆ ಮತ್ತೆ ಸಂಪರ್ಕ ಕಡಿತಗೊಳ್ಳುವ ಸಾಧÀ್ಯತೆ ಇದೆ.