ಚೆಟ್ಟಳ್ಳಿ, ಆ. ೨೯: ಪಾರ್ಥೇನಿಯಂ ನಿರ್ಮೂಲನಾ ತಿಳುವಳಿಕಾ ಸಪ್ತಾಹವನ್ನು ಆಗಸ್ಟ್ ೧೬ ರಿಂದ ೨೨ ರವರೆಗೆ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ ಚೆಟ್ಟಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ೧೭ ನೇ ವರ್ಷದ ಪಾರ್ಥೇನಿಯಂ ನಿರ್ಮೂಲನಾ ತಿಳುವಳಿಕಾ ಸಪ್ತಾಹದ ಮೊದಲನೇ ದಿನವಾದ ಆಗಸ್ಟ್ ೧೬ ರಂದು ಪಾರ್ಥೇನಿಯಂ ನಿರ್ಮೂಲನೆ ತಿಳುವಳಿಕೆ ಸಂಬAಧಿತ ಹಸ್ತಪ್ರತಿಗಳನ್ನು ಮತ್ತು ಬಿತ್ತಿಚಿತ್ರಗಳನ್ನು ಕೇಂದ್ರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹಾಗೂ ಇಲ್ಲಿನ ಸಿಬ್ಬಂದಿ ವರ್ಗದವರಿಗೆ ಅರಿವು ಮೂಡಿಸಲು ಕಚೇರಿಯ ಮುಂಭಾಗದಲ್ಲಿ ಪ್ರದರ್ಶಿಸಲಾಗಿತ್ತು.
ತೋಟಗಾರಿಕಾ ಮಹಾವಿದ್ಯಾಲಯ, ಮೂಡಿಗೆರೆಯ ಅಂತಿಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹದ ಉದ್ದೇಶವನ್ನು ಮನವರಿಕೆ ಮಾಡಲಾಯಿತು.
ಇಲ್ಲಿನ ಎಲ್ಲಾ ಸಿಬ್ಬಂದಿಗಳು ಸೇರಿ ಆವರಣದ ಪಾರ್ಥೇನಿಯಂ ಗಿಡಗಳನ್ನು ನಾಶಪಡಿಸುವುದರ ಮೂಲಕ ಈ ಸಪ್ತಾಹದಲ್ಲಿ ಭಾಗಿಯಾದರು. ಈ ಸಂದರ್ಭ ಕಾಫಿ ಸಂಶೋಧನಾ ಉಪಕೇಂದ್ರ, ಚೆಟ್ಟಳ್ಳಿಯ ಕೀಟಶಾಸ್ತç ವಿಷಯ ತಜ್ಞ ಮಂಜುನಾಥ್ ರೆಡ್ಡಿ ಹಾಗೂ ರಂಜಿತ್ ಕುಮಾರ್ ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದ್ದು, ಅವರೂ ಸಹ ಸಕ್ರಿಯವಾಗಿ ಭಾಗಿಯಾಗಿದ್ದರು. ಸಪ್ತಾಹದ ಭಾಗವಾಗಿ ಕಂಡಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪಾರ್ಥೇನಿಯಂ ವಿಷಯವಾಗಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಪ್ತಾಹದ ಕೊನೆಯ ದಿನವಾದ ತಾ. ೨೨ ರಂದು ಚೆಟ್ಟಳ್ಳಿ ಸಮೀಪದ ಕಂಡಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಭಾರತಕ್ಕೆ ಪಾರ್ಥೇನಿಯಂ ಕಳೆಯ ಆಗಮನ, ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ಈ ಸಂದರ್ಭ ವಿತರಿಸಲಾಯಿತು. ಮಕ್ಕಳಿಗೆ ಕೊನೆಯಲ್ಲಿ ರಸಪ್ರಶ್ನೆಯನ್ನು ಏರ್ಪಡಿಸಿ, ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ ಚೆಟ್ಟಳ್ಳಿಯ ಮೇಲ್ವಿಚಾರಕ ಡಾ. ರಾಜೇಂದಿರನ್, ಕೇಂದ್ರದ ವಿಜ್ಞಾನಿ ಡಾ. ಮುರಳಿಧರ್ ಬಿ.ಎಂ., ಶಾಲಾ ಮುಖ್ಯೋಪಾಧ್ಯಾಯ ಧನು ಪ್ರಕಾಶ್, ಸಂಶೋಧನಾ ಕೇಂದ್ರ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.