ನಾಪೋಕ್ಲು, ಆ. ೨೯: ಸ್ಥಳೀಯ ಕಕ್ಕುಂದಕಾಡಿನ ಶ್ರೀ ವೆಂಕಟರಮಣ ದೇವಾಲಯದ ಗಣಪತಿ ಸೇವಾ ಸಮಿತಿ ವತಿಯಿಂದ ೧೭ನೇ ವರ್ಷದ ಗೌರಿಗಣೇಶೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುವುದು ಎಂದು ಸೇವಾ ಸಮಿತಿಯ ಅಧ್ಯಕ್ಷ ಎಂ.ಕೆ.ತAಗನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗಣೇಶೋತ್ಸವದ ಅಂಗವಾಗಿ ತಾ.೩೧ ರಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ ಹಾಗೂ ೯ ಗಂಟೆಗೆ ಗೌರಿಗಣಪತಿ ಪ್ರತಿಷ್ಠಾಪನೆ ನೆರವೇರಲಿದೆ. ಸೆಪ್ಟೆಂಬರ್ ೧ ರಿಂದ ೪ ರವರೆಗೆ ಪ್ರತಿದಿನ ಮಹಾಪೂಜೆ ಮಂಗಳಾರತಿ ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯಲಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಹಲವು ಕಲಾ ಕಾರ್ಯಕ್ರಮಗಳು ಹಾಗೂ ವಿವಿಧ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದರು.
ಸೆಪ್ಟೆಂಬರ್ ೪ ರಂದು ಮಧ್ಯಾಹ್ನ ೧ ಗಂಟೆಗೆ ಅನ್ನದಾನ ಬಳಿಕ ಸುಳ್ಯದ ನಾಸಿಕ್ ಬ್ಯಾಂಡ್ ಗೊಂಬೆಯಾಟ ಮತ್ತು ಹುಲಿವೇಷದೊಂದಿಗೆ ಅಲಂಕೃತ ಮಂಟಪದೊAದಿಗೆ ಮೆರವಣಿಗೆ ಸಾಗಿ ಕಾವೇರಿ ನದಿಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ಬಾಳೆಯಡ ಶ್ಯಾಮ್, ಸಮಿತಿ ಸದಸ್ಯರಾದ ಕೃಷ್ಣ, ರಾಧಾಕೃಷ್ಣ ರೈ ಉಪಸ್ಥಿತರಿದ್ದರು.
ಸುಂಟಿಕೊಪ್ಪ: ಹೊರೂರು ಮಠ ಸಾರ್ವಜನಿಕ ಶ್ರೀ ಗೌರಿಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಶ್ರೀ ಗೌರಿಗಣೇಶೋತ್ಸವವನ್ನು ದಿನಾಂಕ ೩೧ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ ನಂತರ ಹೊರೂರು ಮಠದಲ್ಲಿ ಶ್ರೀ ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಸಾರ್ವಜನಿಕ ಪೂಜೆಯ ನಂತರ ಸಂಜೆ ೬ ಗಂಟೆಗೆ ಸ್ಥಳೀಯ ಕೆÀರೆಯಲ್ಲಿ ವಿಸರ್ಜಿಸಲಾಗುವುದು ಎಂದು ಗೌರಿಗಣೇಶೋತ್ಸವ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಸುಂಟಿಕೊಪ್ಪ ಮಾದಾಪುರ ರಸ್ತೆಯ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದಲ್ಲಿ ತಾ. ೩೦ ರಂದು (ಇಂದು) ಗೌರಿಯನ್ನು ಪ್ರತಿಷ್ಠಾಪಿಸಿ ತಾ. ೩೧ ರಂದು ೪ ಗಂಟೆಗೆ ಹರದೂರು ಹೊಳೆಯಲ್ಲಿ ವಿಸರ್ಜಿಸಲಾಗುವುದು ಎಂದು ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ತಿಳಿಸಿದ್ದಾರೆ.
*ಮಡಿಕೇರಿ: ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. ೩೧ ರಂದು ಗಣೇಶೋತ್ಸವ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೧೦.೩೦ ಗಂಟೆಗೆ ಸಾಮೂಹಿಕ ಗಣಹೋಮ ಆರಂಭಗೊಳ್ಳಲಿದ್ದು, ೧೨ ಗಂಟೆಗೆ ಮಹಾಮಂಗಳಾರಾತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.
*ಮಡಿಕೇರಿಯ ಓಂಕಾರ್ ಯುವ ವೇದಿಕೆಯಿಂದ ಓಂಕಾರ ಸದನದಲ್ಲಿ ಗಣೇಶೋತ್ಸವ ಪ್ರಯುಕ್ತ ತಾ. ೩೧ರಂದು ಪ್ರತಿಷ್ಠಾಪನೆ, ಮಹಾಪೂಜೆ. ಸಂಜೆ ವಿಶೇಷ ಪೂಜೆ, ಸೆ.೧ರಂದು ಸಂಜೆ ೭ ಗಂಟೆಗೆ ಶ್ರೀರಾಮಾಂಜನೇಯ ಭಜನಾ ಮಂಡಳಿಯಿAದ ಭಜನೆ, ತಾ.೨ರಂದು ದೀಪಾರಾಧನೆ, ರಂಗಪೂಜೆ, ಪ್ರಸಾದ ವಿತರಣೆ, ತಾ.೩ರಂದು ಸಂಜೆ ೭ ಗಂಟೆಗೆ ಪ್ರಭು ಅಕ್ಕಿ ಮತ್ತು ಚಕ್ಕೇರ ಪಂಚಮ್ ಬೋಪಣ್ಣ ಇವರಿಂದ ಸಂಗೀತ ಸೌರಭ, ತಾ. ೪ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ೨ ಗಂಟೆಗೆ ಶೋಭಾಯಾತ್ರೆ ಹಾಗೂ ವಿಸರ್ಜನೆ ನಡೆಯಲಿದೆ.
*ಗಾಳಿಬೀಡಿನ ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ೨೭ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ತಾ. ೩೧ರಂದು ಬೆಳಿಗ್ಗೆ ೬.೪೫ಕ್ಕೆ ಗಣಪತಿ ಹೋಮ, ೮ ಗಂಟೆಗೆ ಗೌರಿ - ಗಣೇಶ ಪ್ರತಿಷ್ಠಾಪನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಮಹಾಮಂಗಳಾರತಿ ಮಧ್ಯಾಹ್ನ ೧ ಗಂಟೆಗೆ ಅನ್ನದಾನ, ಸಂಜೆ ೪.೩೦ಕ್ಕೆ ಮೆರವಣಿಗೆ ಮೂಲಕ ಸಂಜೆ ೬ ಗಂಟೆಗೆ ವಿಸರ್ಜನೋತ್ಸವ ನಡೆಯಲಿದೆ.