ಮಡಿಕೇರಿ, ಆ. ೨೯: ಇತ್ತೀಚೆಗೆ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕೊಡಗು ಮೂಲದವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರನ್ನು ತಮಿಳುನಾಡು ವಿನಲ್ಲಿ ಸನ್ಮಾನಿಸಲಾಯಿತು.
ಈ ಕ್ರೀಡಾಕೂಟದಲ್ಲಿ ಜೋಶ್ನಾ ಸ್ಕಾ÷್ವಷ್‌ನಲ್ಲಿ ಸಿಂಗಲ್ಸ್ನಲ್ಲಿ ಹಾಗೂ ಮಿಕ್ಸೆಡ್ ಡಬಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಹಾಗೂ ಡಬಲ್ಸ್ನಲ್ಲಿ ಪ್ರೀಕ್ವಾರ್ಟರ್ ಫೈನಲ್ ತಲುಪಿದ್ದರು. ಒಟ್ಟಾರೆಯಾಗಿ ನಾಲ್ಕು ಕಾಮನ್‌ವೆಲ್ತ್ನಲ್ಲಿ ಪಾಲ್ಗೊಂಡಿರುವ ಇವರು ೨೦೧೦ರಲ್ಲಿ ಚಿನ್ನದ ಪದಕ, ೨೦೧೮ರಲ್ಲಿ ಬೆಳ್ಳಿಯ ಪದಕವನ್ನು ಗಳಿಸಿದ್ದರು. ಈ ಬಾರಿ ಪದಕ ಬಾರದಿದ್ದರೂ ಉತ್ತಮ ಸಾಧನೆ ತೋರಿದ್ದರು. ತಮಿಳುನಾಡು ರಾಜ್ಯಪಾಲರಾದ ಆರ್.ಎನ್. ರವಿ ಅವರು ನಿನ್ನೆ ಜೋಶ್ನಾ ಅವರನ್ನು ಗೌರವಿಸಿದರು.