ಕೂಡಿಗೆ, ಆ. ೨೯: ರಸ್ತೆಯಲ್ಲಿ ಬಿದ್ದು ಸಿಕ್ಕ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರವನ್ನು ಮಾಲೀಕರಿಗೊಪ್ಪಿಸಿ ಮಹಿಳೆಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಕೂಡಿಗೆ ಅಂಜೆಲಾ ವಿದ್ಯಾಸಂಸ್ಥೆ ಶಿಕ್ಷಕಿ ಶರ್ಲಿ ಥಾಮಸ್ ಎಂಬವರು ಕೂಡಿಗೆ ಚರ್ಚ್ಗೆ ತೆರಳಿ ಹಿಂತಿರುಗುವ ಸಂದರ್ಭ ತಮ್ಮ ಚಿನ್ನದ ಸರವನ್ನು ಕಳೆದುಕೊಂಡಿದ್ದು, ಈ ಸರ ಕೂಡಿಗೆ ವೃತ್ತದಲ್ಲಿ ಟೀ ಅಂಗಡಿ ನಡೆಸುವ ವಿಜಿ ಎಂಬ ಮಹಿಳೆಗೆ ದೊರೆತಿದೆ.

ಚಿನ್ನದ ಸರದಲ್ಲಿ ಶಿಲುಬೆ ಇರುವುದನ್ನು ಗಮನಿಸಿ ವಿಜಿ ಅವರು ಚರ್ಚ್ಗೆ ತೆರಳಿ ಸರದ ಬಗ್ಗೆ ಮಾಹಿತಿ ತಿಳಿಸಿ ಕಳೆದುಕೊಂಡಿದ್ದವರನ್ನು ಪತ್ತೆ ಹಚ್ಚಿ ಅವರಿಗೆ ಒಪ್ಪಿಸಿ ಪ್ರಾಮಾಣಿಕತೆ ತೋರಿದ್ದಾರೆ.