ಮಡಿಕೇರಿ, ಆ. ೨೮: ವಿದ್ಯಾಕ್ಷೇತ್ರ, ಬಡವರ ಕಲ್ಯಾಣ ಕ್ಷೇತ್ರ, ಔಷಧೀಯ ಕ್ಷೇತ್ರ, ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕ್ಷೇತ್ರಗಳಲ್ಲಿ ನಡೆಸುವ ಸೇವಾ ಕಾರ್ಯಗಳನ್ನು ‘ಚಾರಿಟೇಬಲ್ ಪರ್ಪಸ್’ ಎಂಬುದಾಗಿ ಆದಾಯ ತೆರಿಗೆ ಕಾನೂನು ೧೯೬೧ರಲ್ಲಿ ವಿಭಾಗಿಸಲಾಗಿದೆ.
ಈ ಕ್ಷೇತ್ರಗಳಲ್ಲಿ ಲಾಭದ ಉದ್ದೇಶವಿಲ್ಲದೆ ಕೆಲಸ ಮಾಡುವ ಸಂಘ-ಸAಸ್ಥೆಗಳು ಅಥವಾ ಟ್ರಸ್ಟ್ಗಳನ್ನು ‘ಚಾರಿಟೇಬಲ್ ಇನ್ಸಿ÷್ಟಟ್ಯೂಷನ್ಸ್’ ಎಂದು ಕರೆಯಲಾಗಿದೆ. (ಇನ್ನು ಮುಂದೆ ದತ್ತಿ ಸಂಸ್ಥೆಗಳು ಎಂದು ನಮೂದಿಸ ಲಾಗುವುದು) ಇಂತಹ ಸಂಸ್ಥೆಗಳು ಆದಾಯ ತೆರಿಗೆ ಕಾನೂನಿನ ಕಲಂ ೧೨ಂಃಯ ಪ್ರಕಾರ ಆದಾಯ ತೆರಿಗೆ ಕಮೀಷನರ್ಗೆ ಅರ್ಜಿ ಸಲ್ಲಿಸಿ ತಮ್ಮ ಸಂಸ್ಥೆ, ಟ್ರಸ್ಟನ್ನು ಆದಾಯ ತೆರಿಗೆ ಕಾನೂನು ಕಲಂ ೧೨ಂಯ ಪ್ರಕಾರ ನೋಂದಣಿ ಪಡೆದುಕೊಳ್ಳಬೇಕಾಗಿದೆ. ಇಂತಹ ನೋಂದಾಯಿತ ಸಂಸ್ಥೆಗಳು ಆದಾಯ ತೆರಿಗೆ ಕಾನೂನಿನ ಇತರ ಕೆಲವು ಕಲಂಗಳಲ್ಲಿ ನಿಗದಿಸಲ್ಪಟ್ಟ ನಿಯಮಗಳನ್ನು ಪಾಲಿಸುತ್ತಿದ್ದಲ್ಲಿ, ಅಂತಹ ಸಂಸ್ಥೆಗಳ ಆದಾಯಕ್ಕೆ ತೆರಿಗೆ ವಿನಾಯಿತಿ ದೊರೆಯುವುದು.
ವಾರ್ಷಿಕ ಆದಾಯದ ೮೫% ಭಾಗವನ್ನು ತನ್ನ ಧ್ಯೇಯೋದ್ದೇಶಗಳಿಗೆ ಆ ವರ್ಷದಲ್ಲೇ ಉಪಯೋಗಿಸುವುದು, ಆಡಿಟ್ ಆದ ವಾರ್ಷಿಕ ಲೆಕ್ಕ ಪತ್ರಗಳೊಂದಿಗೆ ಪ್ರತಿ ವರ್ಷ, ನಿಗದಿತ ದಿನದೊಳಗೆ ಆದಾಯ ತೆರಿಗೆ ರಿಟರ್ನ್ ಭರ್ತಿ ಮಾಡಿ ಸಲ್ಲಿಸುವುದು, ಸಂಸ್ಥೆಗಳ ಹೂಡಿಕೆಗಳನ್ನು ಆದಾಯ ತೆರಿಗೆ ಕಾನೂನಿನ ಕಲಂಗಳಲ್ಲಿ ನಮೂದಿಸಿದ ಹೂಡಿಕೆಗಳಲ್ಲಿ ಮಾತ್ರ ಹೂಡುವುದು, ಸಂಸ್ಥೆಯ ಯಾವುದೇ ಆದಾಯದಲ್ಲಾಗಲೀ, ಆಸ್ತಿಯಲ್ಲಾಗಲೀ ಸಂಸ್ಥೆಯಲ್ಲಿ ಆಸಕ್ತ ವ್ಯಕ್ತಿಗಳಾರೂ ಪಾಲು ಪಡೆಯದಿರುವುದು... ಇತ್ಯಾದಿ ಅಂತಹ ನಿಯಮಗಳನ್ನು ನೋಂದಾಯಿತ ದತ್ತಿ ಸಂಸ್ಥೆಗಳು ಪಾಲಿಸಲೇಬೇಕು.
ಅಲ್ಲದೆ, ಆದಾಯ ತೆರಿಗೆ ಕಲಂ ೮೦ಉಯ ಪ್ರಕಾರ ನೋಂದಣಿ ಮಾಡಿಸಿಕೊಂಡಿದ್ದಲ್ಲಿ, ದೇಣಿಗೆ ನೀಡಿದ ವ್ಯಕ್ತಿಗಳಿಗೆ ಇತರ ನಿಯಮ ಗಳಿಗನುಸಾರವಾಗಿ ಆದಾಯದಲ್ಲಿ ಕಡಿತ ಸಿಗುವುದು. ದತ್ತಿ ಸಂಸ್ಥೆಗಳು ದೇಣಿಗೆ ಪಡೆದ ಎಲ್ಲ ವಿವರಗಳ ನ್ನೊಳಗೊಂಡ ಪಟ್ಟಿ (ವಾರ್ಷಿಕ ರಿಟರ್ನ್) ಸಲ್ಲಿಸುವ ಜವಾಬ್ದಾರಿಯೂ ಅಂತಹ ಸಂಸ್ಥೆಗಳ ಮೇಲೆ ೨೦೨೧-೨೦೨೨ನೇ ವರ್ಷದಿಂದ ಹೊರಿಸ ಲಾಗಿದೆ. ಸರಿಯಾದ ಮಾಹಿತಿಯಿರುವ ರಿಟರ್ನ್ನನ್ನು ಸಂಸ್ಥೆಗಳು ಸಲ್ಲಿಸದಿದ್ದಲ್ಲಿ, ದೇಣಿಗೆ ನೀಡಿದವರಿಗೆ ಸಿಗಬೇಕಾದ ಆದಾಯ ತೆರಿಗೆ ಕಡಿತ ಸಿಗಲಾರದು.
ಇಂತಹ ಸಂಸ್ಥೆಗಳು ಪಡೆಯುವ ಎಲ್ಲ ದೇಣಿಗೆಗಳನ್ನೂ ಸಂಸ್ಥೆಯ ಆದಾಯವೆಂದೇ ಪರಿಗಣಿಸಲಾಗು ವುದು. ದೇಣಿಗೆಯನ್ನು ದತ್ತಿನಿಧಿ ರೂಪದಲ್ಲಿ ಪಡೆದಿದ್ದಲ್ಲಿ ಅಂತಹ ನಿಧಿಯ ನಿರ್ವಹಣೆಯ ಮತ್ತು ಬಳಕೆಯ ಬಗ್ಗೆ ಲಿಖಿತವಾದ ನಿರ್ದೇಶನ ಪಡೆದುಕೊಳ್ಳುವ ಅಗತ್ಯವಿದೆ. ಅದಲ್ಲದೆ, ದತ್ತಿನಿಧಿಯ ನಿರ್ವಹಣೆಯ ಬಗ್ಗೆಯೂ, ದತ್ತಿನಿಧಿ ನೀಡಿದವರ ನಿರ್ದೇಶನವನ್ನು ಪಡೆದುಕೊಳ್ಳಬೇಕಿದೆ. ಅಂತಹ ನಿರ್ದೇಶನದ ಪ್ರಕಾರವೇ ದತ್ತಿ ನಿಧಿಗಳ ನಿರ್ವಹಣೆಯನ್ನು ಮಾಡಬೇಕಿದೆ.
ಇತ್ತೀಚೆಗೆ ಆದಾಯ ತೆರಿಗೆ ನಿಯಮಗಳಿಗೆ ಕೆಲವು ತಿದ್ದುಪಡಿ ಗಳನ್ನು ತರುವ ಮೂಲಕ ನಿಯಮ ೧೭ಂA ಎಂಬ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ. ಈ ನಿಯಮಗಳು ದತ್ತಿ ಸಂಸ್ಥೆಗಳು ಯಾವ ರೀತಿಯ ಲೆಕ್ಕ ಪತ್ರಗಳನ್ನು ನಿರ್ವಹಿಸಬೇಕು ಮತ್ತು ಯಾವುದೆಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಇರಿಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿವೆ.
ಅಂತಹ ನಿಯಮಗಳ ಸಂಕ್ಷಿಪ್ತ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲು ಪ್ರಯತ್ನಿಸಲಾಗಿದೆ. ಸಮಗ್ರ ಮಾಹಿತಿಗಾಗಿ ಆದಾಯ ತೆರಿಗೆ ನಿಯಮ ೧೭ಂAಯ ಕೂಲಂಕಷ ಪರಿಶೀಲನೆ ಅಗತ್ಯ.
ದತ್ತಿ ಸಂಸ್ಥೆಗಳೆAದರೆ, ಶಾಲಾ, ಕಾಲೇಜು ನಡೆಸುತ್ತಿರುವ ಸೊಸೈಟಿಗಳು/ ಟ್ರಸ್ಟ್ಗಳು, ವಿದ್ಯೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳು, ಆಸ್ಪತ್ರೆಗಳನ್ನು ನಡೆಸುವ ಸಂಸ್ಥೆಗಳು, ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಇತರ ಸಂಸ್ಥೆಗಳು,