ಮಡಿಕೇರಿ, ಆ. ೨೯: ಮಂಗಳೂರು ವಲಯ ಅಂಡರ್ ೨೫ ತಂಡಕ್ಕೆ ಆಡಲು ಪ್ರತಿಭಾವಂತ ಕ್ರಿಕೆಟ್ ಪಟುಗಳ ಆಯ್ಕೆ ಪ್ರಕ್ರಿಯೆ ಸೆಪ್ಟೆಂಬರ್ ೪ ರಂದು ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ಬೆಳಿಗ್ಗೆ ೮ ಗಂಟೆಗೆ ಜರುಗಲಿದೆ.
೧೯೯೭ನ ಸೆಪ್ಟೆಂಬರ್ ೧ ಹಾಗೂ ನಂತರದಲ್ಲಿ ಜನಿಸಿದವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆದರೆ ೧೯ ವರ್ಷ ಕೆಳಗಿನವರಿಗೆ ಭಾಗವಹಿಸಲು ಅವಕಾಶವಿಲ್ಲ.
ಜನನ ಪ್ರಮಾಣ ಪತ್ರದ ಪ್ರತಿ, ಬ್ಯಾಟಿಂಗ್, ಬೌಲಿಂಗ್ ಶೈಲಿ, ಕೆ.ಎಸ್.ಸಿ.ಎ. ಟೂರ್ನಿಗಳಲ್ಲಿ ಭಾಗವಹಿಸಿದ್ದಲ್ಲಿ, ಅದರ ವಿವರಗಳನ್ನು ಸೆಪ್ಟೆಂಬರ್ ೧ ರೊಳಗೆ ಞsಛಿಚಿmಟoಡಿezoಟಿe@gmಚಿiಟ.ಛಿomಗೆ ಕಳುಹಿಸುವಂತೆ ಕೆ.ಎಸ್.ಸಿ.ಎ. ಮಂಗಳೂರು ವಲಯದ ಸಂಚಾಲಕ ರತನ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. ೯೧೬೪೭೫೦೮೬೩ ಅನ್ನು ಸಂಪರ್ಕಿಸಬಹುದು.