ಚೆಟ್ಟಳ್ಳಿ, ಆ. ೨೯: ಸಂಘದ ಸದಸ್ಯರ ಸಂಪೂರ್ಣ ಸಹಕಾರವಿದ್ದರೆ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಚೆಟ್ಟಳ್ಳಿ ಸಹಕಾರ ಸಂಘ ದೇಶದಲ್ಲೇ ಮಾದರಿಯಾಗಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯಿಸಿದರು.
ಚೆಟ್ಟಳ್ಳಿ ಸಹಕಾರ ಸಂಘ ಈ ಬಾರಿ ರೂ.೫೦.೪೨ ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೧೫ ಡಿವಿಡೆಂಡ್ ನೀಡಲಾಗಿದೆ.
ಸಂಘವು ನರೇಂದ್ರ ಮೋದಿ ಭವನ, ಪುಣ್ಯಕೋಟಿ ಭವನ, ಈರಳೆ ಶಾಖೆಯಲ್ಲಿ ಪಂಚಮುಖಿ ವಾಯು ಪುತ್ರ ವಾಣಿಜ್ಯ ಸಂಕೀರ್ಣ ಹಾಗೂ ಚೆಟ್ಟಳ್ಳಿ, ಆ. ೨೯: ಸಂಘದ ಸದಸ್ಯರ ಸಂಪೂರ್ಣ ಸಹಕಾರವಿದ್ದರೆ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಚೆಟ್ಟಳ್ಳಿ ಸಹಕಾರ ಸಂಘ ದೇಶದಲ್ಲೇ ಮಾದರಿಯಾಗಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯಿಸಿದರು.
ಚೆಟ್ಟಳ್ಳಿ ಸಹಕಾರ ಸಂಘ ಈ ಬಾರಿ ರೂ.೫೦.೪೨ ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೧೫ ಡಿವಿಡೆಂಡ್ ನೀಡಲಾಗಿದೆ.
ಸಂಘವು ನರೇಂದ್ರ ಮೋದಿ ಭವನ, ಪುಣ್ಯಕೋಟಿ ಭವನ, ಈರಳೆ ಶಾಖೆಯಲ್ಲಿ ಪಂಚಮುಖಿ ವಾಯು ಪುತ್ರ ವಾಣಿಜ್ಯ ಸಂಕೀರ್ಣ ಹಾಗೂ ಪೆಟ್ರೋಲ್ ಬಂಕ್ ಸ್ಥಾಪನೆಗೆ ಹೆಚ್ಚಿನ ಹೊರೆಯಾಗುವುದರಿಂದ ಕೈಬಿಡಲಾಗಿದ್ದು, ಮುಂದಿನ ದಿನಗಳಲ್ಲಿ ಡೆಯಾಲಿಸಿಸ್ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಮಾಹಿತಿಯಿತ್ತರು.
ಸಭೆಯಲ್ಲಿ ಮೃತಪಟ್ಟ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು.
ಮುಖ್ಯಕಾರ್ಯನಿವಹಣಾಧಿಕಾರಿ ನಂದಿನಿ ಪ್ರಾರ್ಥಿಸಿ, ಮಣಿ ಉತ್ತಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ಕಣಜಾಲು ಪೂವಯ್ಯ ವಂದಿಸಿದರು.
ವೇದಿಕೆಯಲ್ಲಿ ಸಂಘದ ನಿರ್ದೇಶಕ ನೂಜಿಬೈಲು ನಾಣಯ್ಯ, ಪುತ್ತರಿರ ಸೀತಮ್ಮ, ಕೊಂಗೇಟಿರ ವಾಣಿ ಕಾಳಪ್ಪ, ಪುತ್ತರಿರ ಶಿವು ನಂಜಪ್ಪ, ಬಟ್ಟೀರ ಅಪ್ಪಣ್ಣ, ಮರದಾಳು ಉಲ್ಲಾಸ, ಅಡಿಕೇರ ಜಯಾ, ಪೇರಿಯನ ಪೂಣಚ್ಚ, ಧನಂಜಯ, ಕಾಶಿ, ಆಂತರಿಕ ಲೆಕ್ಕಪರಿಶೋಧಕ ರಮೇಶ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಜ್ಯೋತಿ ಹಾಜರಿದ್ದರು.