ಸೋಮವಾರಪೇಟೆ,ಆ.೨೯: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಗೌರಿ ಗಣಪತಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬಾರಿ ೪೯ ಸ್ಥಳಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ದಾನಿಗಳೇ ಸದಸ್ಯರಾಗಿರುವ ಶ್ರೀ ಸಾರ್ವಜನಿಕ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇದರೊಂದಿಗೆ ಕುರುಹಿನ ಶೆಟ್ಟಿ ಸಮಾಜದಿಂದ ರಾಮಮಂದಿರ, ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.
ಉಳಿದಂತೆ ಬಳಗುಂದ ವಿನಾಯಕ ಸೇವಾ ಸಮಿತಿ, ಬಾಣಾವರದ ವಿಘ್ನೇಶ್ವರ ಯುವಕ ಸಂಘ, ರೇಂಜರ್ ಬ್ಲಾಕ್ನ ಯೂತ್ ಕ್ಲಬ್, ಬೇಳೂರು ಬಸವನಹಳ್ಳಿ,ಯಲಕನೂರು ವಿನಾಯಕ ಸೇವಾ ಸಮಿತಿ, ಚೌಡೇಶ್ವರಿ ಬ್ಲಾಕ್, ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯ, ಬಾಣಾವರ ಬಸವೇಶ್ವರ ದೇವಾಲಯಗಳಲ್ಲಿ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಲಿದೆ.
ಪಟ್ಟಣ ಸಮೀಪದ ಗಾಂಧಿನಗರ ವೀರ ಕೇಸರಿ ಯುವಕ ಸಂಘ, ಕುಮಾರಳ್ಳಿ ಗ್ರಾಮಾಭಿವೃದ್ಧಿ ಸಮಿತಿ, ತಲ್ತರೆಶೆಟ್ಟಳ್ಳಿ ಗ್ರಾಮಾಭಿವೃದ್ಧಿ ಸಮಿತಿ, ಕೂತಿ ಸಮುದಾಯ ಭವನ, ಗಾಂಧಿನಗರ ಮಾರಿಯಮ್ಮ ದೇವಾಲಯ, ಹೊಸಬಡಾವಣೆಯ ಮಾದೇಶ್ವರ ಯುವಕ ಸಂಘ, ಮಾದಾಪುರ, ಯಡವನಾಡು, ಅಬ್ಬೂರುಕಟ್ಟೆ, ಕೆಂಚಮ್ಮನ ಬಾಣೆ, ಹಾನಗಲ್ಲು, ಹರಗ, ಉದ್ರಳ್ಳಿ ಗ್ರೂಪ್, ಯಡೂರು ಗ್ರಾಮದಲ್ಲಿ ಸಾರ್ವಜನಿಕ ಉತ್ಸವ ನಡೆಯಲಿದೆ.
ಅಭಿಮಠ ಬಾಚಳ್ಳಿ, ಕಿರಗಂದೂರು, ಚೌಡ್ಲು, ಆಡಿನಾಡೂರು, ಚಿಕ್ಕತೋಳೂರು, ಕರ್ಕಳ್ಳಿ, ಮಾನಸ ಹಾಲ್ ಸಮೀಪ, ಹೊಸಳ್ಳಿ, ಅರೆಯೂರು, ಕಾನ್ವೆಂಟ್ ಬಾಣೆ, ಕುಂದಳ್ಳಿ, ಆಲೇಕಟ್ಟೆ ಸಿದ್ದಿವಿನಾಯಕ ಯುವಕ ಸಂಘ, ಭಾರತೀಯ ಯುವಕ ಸಂಘ, ಯರಪಾರೆ, ಕಕ್ಕೆಹೊಳೆ ಜಂಕ್ಷನ್, ಬಾಣಾವರ, ತಣ್ಣೀರುಹಳ್ಳ, ಗೋಣಿಮರೂರು ಗ್ರಾಮಗಳಲ್ಲಿ ಗೌರಿ ಗಣಪತಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.