ಚೆಟ್ಟಳ್ಳಿ, ಆ. ೨೮: ನಾಪೋಕ್ಲು ಸಮೀಪದ ಹೊದವಾಡ ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜಿನ ಸ್ಟೂಡೆಂಟ್ಸ್ ಯೂನಿಯನ್ ಉಪಾಧ್ಯಕ್ಷನಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮಹಮ್ಮದ್ ಅಫ್ಸಲ್ ಕೆ.ಝೆಡ್ ಆಯ್ಕೆಯಾಗಿದ್ದಾರೆ. ಕ್ರೀಡಾ ನಾಯಕನಾಗಿ ದ್ವಿತೀಯ ವಾಣಿಜ್ಯ ಭಾಗದ ಪಿ.ಎನ್ ಮೊಹಮ್ಮದ್ ಸವಾದ್, ಸಾಂಸ್ಕೃತಿಕ ವಿಭಾಗದ ನಾಯಕಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಜುಹಾ ಫಾತಿಮಾ, ಹಾಗೂ ಸಹ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಫಾಜಿಲ್ ಎ.ಕೆ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆಯಿಶತ್ ಮುಬಶ್ಶೀರ ಆಯ್ಕೆಯಾಗಿದ್ದಾರೆ.
ಶಾಲಾ ವಿಭಾಗದ ನಾಯಕರಾಗಿ ಮೂರನೇ ತರಗತಿಯ ಮೊಹಮ ಮಿಹ್ನಾಜ್ ಹಾಗೂ ಹನಾ ಫಾತಿಮಾ, ಸಾಂಸ್ಕೃತಿಕ ವಿಭಾಗಕ್ಕೆ ಮೂರನೇ ತರಗತಿ ವಿದ್ಯಾರ್ಥಿಗಳಾದ ಎಂ.ಎ ಸನೂಫ ಹಾಗೂ ಶಾಹಜನಾ ಟಿ.ಎಸ್ ಹಾಗೂ ಕ್ರೀಡಾ ನಾಯಕರಾಗಿ ಮೂರನೇ ತರಗತಿ ವಿದ್ಯಾರ್ಥಿಗಳಾದ ಮೊಹಮ್ಮದ್ ನಿಸಾಜ್ ಕೆ.ಎನ್ ಹಾಗೂ ಕೆ.ಎ ಮೊಹಮ್ಮದ್ ನಿಹಾಲ್ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ ಎಂದರು. ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ಹಾಗೂ ಶಾಲೆಯ ಪ್ರಾಂಶುಪಾಲರಾದ ತನ್ವೀರ್ ತಿಳಿಸಿದ್ದಾರೆ.