ವೀರಾಜಪೇಟೆ, ಆ. ೨೮: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ದಿ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರಿ ಕಾಲೇಜಿನಲ್ಲಿ ಇಂದು ಎಲ್ಲಾ ರೀತಿಯ ಸೌಲಭ್ಯಗಳಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆÀ.

ಸರ್ಕಾರಿ ಕಾಲೇಜಿನಲ್ಲಿ ಉನ್ನತ ತರಗತಿ(ಮಾಸ್ಟರ್ ಡಿಗ್ರಿ)ಯನ್ನು ಆರಂಭಿಸಲು ಉದೇಶಿಸಿದ್ದು ಇದಕ್ಕಾಗಿ ವೀರಾಜಪೇಟೆ ಪುರಸಭೆಯಿಂದ ಒಂದುವರೆ ಎಕರೆ ಜಾಗ ಪಡೆಯಲಾಗಿದೆ. ಆರಂಭಿಕವಾಗಿ ೧.೫ ಕೋಟಿಯಲ್ಲಿ ಹೊಸ ಕಟ್ಟಡ ಕಾಮಗಾರಿ ಆರಂಭಿಸಿ ಸುಸಜ್ಜಿತ ಕೊಠಡಿಗಳನ್ನು ಮುಂದೆ ನಿರ್ಮಿಸಲಾಗುತ್ತದೆ ಎಂದು ಹೇಳಿದರು. ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಕ್ರೀಡೆ ಕೂಡ ಮನುಷ್ಯನ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ರಂಗಕರ್ಮಿ ಹಾಗೂ ನಾಥ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಅಧ್ಯಕ್ಷ, ಉದ್ಯಮಿ ವಿ.ಎಂ. ವಿಜಯ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಅಂಬಿಕಾ ಉತ್ತಪ್ಪ, ಜಿಲ್ಲಾ ಗೋರಕ್ಷಕ ಪ್ರಮುಖ್ ಶಿವಸ್ವಾಮಿ, ಜಿಲ್ಲಾ ಅಖಾಡ ಪ್ರಮುಖ್ ಸಜಿ ಭರತ್, ತಾಲೂಕು ಗೋರಕ್ಷಕ ಪ್ರಮುಖ್ ಶಶಿಕುಮಾರ್, ವಿ ಎಚ್ ಪಿ ತಾಲೂಕು ಕಾರ್ಯದರ್ಶಿ ಕೆ.ವಿನು, ಕಂಬಿಬಾಣೆ ಘಟಕದ ಅಧ್ಯಕ್ಷ ಆನಂದ್, ತಾಲೂಕು ಸಹ ಸಂಯೋಜಕ ಪ್ರಮೋದ್, ದುರ್ಗಾವಾಹಿನಿ ಕಂಬಿಬಾಣೆ ಘಟಕದ ಸಂಚಾಲಕಿ ಮೀನಾ, ಮಾತೃಶಕ್ತಿ ಸಂಚಾಲಕಿ ಪ್ರಿಯಾ ಮತ್ತಿತರರು ಇದ್ದರು. ಛದ್ಮವೇಶ ಸ್ಪರ್ಧೆಯಲ್ಲಿ ೬೦ಕ್ಕೂ ಅಧಿಕ ಪುಟಾಣಿಗಳು ಭಾಗವಹಿಸಿ ಗಮನ ಸೆಳೆದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.