ನಾಪೋಕ್ಲು , ಆ. ೨೮: ಹಳೇ ತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಅವರ ಗದ್ದೆಯಲ್ಲಿ ನಾಟಿ ಓಟ ಹಮ್ಮಿಕೊಳ್ಳಲಾಗಿತ್ತು.
ನಾಟಿ ಓಟದಲ್ಲಿ ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ಸ್ಪರ್ಧೆ ಏರ್ಪಾಡಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಸಿ.ಲತೀಶ್ ಪ್ರಥಮ, ಬಿ. ಸುಜನ ದ್ವಿತೀಯ ಚೆರಿಯಪರಂಬುವಿನ ಸುರೇಶ್ ತೃತೀಯ. ಮಹಿಳೆಯರ ವಿಭಾಗ ಜ್ಯೋತಿ ಪ್ರಥಮ, ಸುಂದರಿ ದ್ವಿತೀಯ, ವಿಜಿ ತೃತೀಯ ಸ್ಥಾನ ಪಡೆದರು. ಕಾಶಿ ನಂಜಪ್ಪ ಬಹುಮಾನ ವಿತರಿಸಿದರು.