ಸುಂಟಿಕೊಪ್ಪ, ಆ. ೨೬: ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಜೋಡು ಕೆರೆಯನ್ನು ಅಭಿವೃದ್ಧಿಪಡಿಸಿ ೨ ಲಕ್ಷ ೧೭ಸಾವಿರ ವಚ್ಚದಲ್ಲಿ ನಿರ್ಮಿಸಲಾದ ಅಮೃತ ಸರೋವರವನ್ನು ಕೇಂದ್ರದ ತನಿಖಾ ತಂಡದ ಸಂಸದರು ಗುರುವಾರ ಆಗಮಿಸಿ ಅಮೃತ ಸರೋವರವನ್ನು ವೀಕ್ಷಿಸಿ ಕಾಮಗಾರಿಯ ಖರ್ಚುವೆಚ್ಚದ ಬಗ್ಗೆ ಮಾಹಿತಿ ಪಡೆದರು. ನಂತರ ಸರೋವರಕ್ಕೆ ಮೀನಿನ ಮರಿಗಳನ್ನು ಬಿಟ್ಟು ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ಸರೋವರವನ್ನು ಉದ್ಘಾಟಿಸಿದರು. ಈ ಸಂದರ್ಭ ಕೇಂದ್ರದ ಭಾರತೀಯ ಜನತಾ ಪಕ್ಷದ ದಿಲರ್ ರಾಜ್‌ವೀರ್, ದುಬೆ ವಿಜಯ್ ಕುಮಾರ್, ಕುಮಾರ್ ನರೇಂದ್ರ, ವಿಜೇಸಿಂಗ್ ಭಾಯಿ, ಮಾಲಾ ರಾಜ್ಯ ಲಕ್ಷಿö್ಮ, ಶ್ಯಾಮ್ ಸಿಂಗ್, ಶಾಂತಾ ಚೆಟ್ರಿ, ಲೋಕಸಭಾ ಕಾರ್ಯಲಯದ ಅಧಿಕಾರಿಗಳಾದ ಯಮುನಾ ಅರುಣ್ ಕುಮಾರ್, ನಿಶಾಂತ್ ಮೆಹ್ರಾ, ರಾಹುಲ್ ಸಲೋಂಕೆ, ಅರ್ಜುನ್ ಚೌದರಿ ಹಾಗೂ ಕೊಡಗು ಜಿಲ್ಲ್ಲಾಧಿಕಾರಿಗಳಾದ ಬಿ.ಸಿ.ಸತೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀತ್, ಉಪಾದ್ಯಕ್ಷೆ ಕವಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜ್ ಶೇಖರ್ ಹಾಜರಿದ್ದರು.