ಸೋಮವಾರಪೇಟೆ, ಆ. ೨೬: ಸಮೀಪದ ಹೊಸತೋಟ ಗ್ರಾಮದ ಎಸ್‌ವೈಎಸ್ ಬ್ರಾಂಚ್ ಹಾಗೂ ಎಸ್‌ಎಸ್‌ಎಫ್ ಶಾಖಾ ವತಿಯಿಂದ ಜಿಲ್ಲಾ ಸಮಿತಿ ಹಾಗೂ ಕೊಡಗು ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಹೊಸತೋಟದ ಶಾದಿ ಮಹಲ್‌ನಲ್ಲಿ ಉಚಿತ ರಕ್ತದಾನ ಶಿಬಿರ ನಡೆಯಿತು. ಎಸ್‌ಎಸ್‌ಎಫ್ ರಾಜ್ಯ ಸಮಿತಿ ಸಂಯೋಜಕ ಅಬ್ದುಲ್ ಅಜೀಜ್ ಉದ್ಘಾಟಿಸಿದರು. ಸೋಮವಾರಪೇಟೆ ವಿಭಾಗದ ಅಧ್ಯಕ್ಷ ಶಾಫಿ ಅನ್ಸಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ವತಿಯಿಂದ ಆಯೋಜಿಸಿಕೊಂಡು ಬರುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಅವರು, ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಕಾಫಿ ಬೆಳೆಗಾರ ಲಿಖಿತ್ ದಾಮೋದರ್, ಚೌಡ್ಲು ಆಶಿತ್, ರೈತ ಸಂಘದ ಸಂಚಾಲಕ ಲಕ್ಷö್ಮಣ್, ಮುಸ್ಲಿಂ ಜಮಾತ್‌ನ ಸೈದು ಹಾಜಿ, ಜಮಾತ್ ಅಧ್ಯಕ್ಷ ಮಹಮ್ಮದ್ ಕುಟ್ಟಿ, ಹರದೂರು ಗ್ರಾ.ಪಂ. ಅಧ್ಯಕ್ಷ ಪದ್ಮನಾಭ, ಸದಸ್ಯ ರಮೇಶ್, ಸಲೀಂ ಸೇರಿದಂತೆ ಇತರರು ಉಪಸ್ಥಿತರಿದ್ದರು.