ಕೂಡಿಗೆ, ಆ. ೨೧: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಚದುರಂಗ ಆಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಎನ್. ಧರ್ಮಪ್ಪ ನೆರವೇರಿಸಿದರು. ಕಾರ್ಯಕ್ರಮದ ತೀರ್ಪುಗಾರರಾಗಿ ಶನಿವಾರಸಂತೆಯ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅನಂತ್ ಕಾರ್ಯನಿರ್ವಹಿಸಿದರು.

ಮೂರು ವಿಭಾಗದ ಸ್ಪರ್ಧೆಯಲ್ಲಿ ೧ ರಿಂದ ೭ನೇ ತರಗತಿವರೆಗಿನ ಮಕ್ಕಳಲ್ಲಿ ವಿಶ್ವಾಸ್ ಎಸ್.ಎಲ್. ಪ್ರಥಮ ಹಾಗೂ ವಿಶಾಲ್ ಎಸ್.ಎಲ್. ದ್ವಿತೀಯ, ೮ ರಿಂದ ೧೨ನೇ ತರಗತಿ ವಿಭಾಗದಲ್ಲಿ ಸಂದೇಶ ಎಂ.ಕೆ. ಪ್ರಥಮ ಹಾಗೂ ಚಿರನೂತನ ದ್ವಿತೀಯ ಹಾಗೂ ಸೀನಿಯರ್ ವಿಭಾಗದಲ್ಲಿ ಅಕ್ಷಯ ಪ್ರಥಮ ಮತ್ತು ಭಾಗೀರಥಿ ಬಿ.ಹೆಚ್. ದ್ವಿತೀಯ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್, ಗೀತಾ, ಲತಾಭಾಯಿ, ಭಾಗೀರಥಿ. ಬಿ.ಹೆಚ್. ಹಾಗೂ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.