*ಸಿದ್ದಾಪುರ ಆ.೧೭ : ಐಕೊಳ ಅಂಗನವಾಡಿ ಕೇಂದ್ರದಲ್ಲಿ ೨೭ ವರ್ಷಗಳ ಕಾಲ ಕಾರ್ಯಕರ್ತೆಯಾಗಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಮೂಲತ: ಕಿಗ್ಗಾಲು ಗ್ರಾಮದ ಪುಷ್ಪ ಅವರನ್ನು ಶ್ರೀ ಅಯ್ಯಪ್ಪ ಯುವಕ ಹಾಗೂ ಯುವತಿ ಮಂಡಳಿ, ಶ್ರೀ ಲಕ್ಷಿö್ಮ ಮತ್ತು ಶ್ರೀ ಅಯ್ಯಪ್ಪ ಸ್ವ- ಸಹಾಯ ಸಂಘ, ಸ್ತಿçà ಶಕ್ತಿ ಸಂಘ ಹಾಗೂ ಐಕೊಳ ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಐಕೊಳ ಪಂಚಾಯಿತಿ ಸದಸ್ಯೆ ಮುಂಡAಡ ಪವಿ ಸೋಮಣ್ಣ, ಸಂಘಗಳ ಪ್ರಮುಖರಾದ ಕೊಂಪುಳೀರ ಶಶಿಕಲಾ, ಕೊಂಪುಳೀರ ಸುಶೀಲ, ಕೊಂಪುಳೀರ ಸುನಿ, ಕೊಂಪುಳೀರ ಗೀತಾ, ಬಡುವಂಡ್ರ ಸುಂದರಿ ಉಪಸ್ಥಿತರಿದ್ದರು. ಪಾರೆರ ದೇವಕಿ ಕಾರ್ಯಕ್ರಮವನ್ನು ನಿರೂಪಿಸಿದರು, ತಡಿಯಪ್ಪನ ರೇಷ್ಮಾ ವಂದಿಸಿದರು.