ಮಡಿಕೇರಿ, ಆ. ೧೭: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಆಜಾದಿಕಾ ಅಮೃತ ಮಹೋತ್ಸವ ಪ್ರಯುಕ್ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಡಿಕೇರಿ ಆಕಾಶವಾಣಿ ನಿರ್ದೇಶಕ ಡಾ. ವಿಜಯ್ ಅಂಗಡಿ, “ಭಾರತದಲ್ಲಿ ಯಾರೊಬ್ಬರೂ ಬಡವರಿಲ್ಲ. ಬಡತನವಿರುವುದು ಅವರವರ ಭಾವನೆಗಳಲ್ಲಿ. ಕೆಲಸ ಮಾಡುವ ಮನಸ್ಸಿದ್ದರೆ ಸಾಕು, ಎಷ್ಟೇ ಓದಿದ್ದರೂ ಅವರಿಗೆ ಈ ದೇಶದಲ್ಲಿ ಉದ್ಯೋಗವಿದೆ.” ಎಂದು ಅಭಿಪ್ರಾಯಪಟ್ಟರು.
ಎಲ್ಲರೂ ಕೃಷಿ ಲಾಭದಾಯಕ ಉದ್ಯೋಗವಲ್ಲ ಎಂದು ತಪ್ಪು ತಿಳಿದುಕೊಂಡಿದ್ದಾರೆಯಾದರೂ, ಕೃಷಿಯಲ್ಲಿ ಜಾಣತನವನ್ನು ಉಪಯೋಗಿಸಿದರೆ ಉತ್ತಮ ಲಾಭ ಪಡೆಯಬಹುದೆಂದು ಅಭಿಪ್ರಾಯಪಟ್ಟರು.
ಆಹಾರ ಬೆಳೆಯಾದ ಭತ್ತವನ್ನು ಲಾಭವಿಲ್ಲದ ದೃಷ್ಟಿಯಿಂದ ಕೈಬಿಟ್ಟು ವಾಣಿಜ್ಯ ಬೆಳೆಗೆ ಎಲ್ಲರೂ ಮಾರು ಹೋಗುತ್ತಿರುವ ಸಂದರ್ಭದಲ್ಲಿಯೂ ಕೊಡಗಿನ ಕೆಲವು ಕೃಷಿಕರು ಭತ್ತ ಬೆಳೆಯುತ್ತಿರುವುದು ಶ್ಲಾಘನೀಯ ಎಂದ ಅವರು ಭತ್ತ ಬೆಳೆಯನ್ನು ಯಾರೂ ಕೈಬಿಡಬೇಡಿ ಎಂದು ಕರೆ ನೀಡಿದರು.
ಕೃಷಿಯಲ್ಲಿ ಶ್ರಮವಿದೆ. ಶ್ರಮದಲ್ಲಿ ಆರೋಗ್ಯವಿದೆ. ಹಾಗಾಗಿ ಎಲ್ಲರೂ ಶ್ರಮವಹಿಸಿ ಬದುಕುವ ಕಲೆಯನ್ನು ರೂಢಿಸಿಕೊಂಡು ನೀರನ್ನು ಸಂರಕ್ಷಿಸೋಣ, ಯಾವುದೇ ಆಹಾರ ಅಥವಾ ಇನ್ನಾವುದೇ ಸಂಪನ್ಮೂಲಗಳನ್ನು ಪೋಲು ಮಾಡದೆ ಬದುಕುವ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೋರ್ವ ಮುಖ್ಯ ಅತಿಥಿ ಮಕ್ಕಳ ತಜ್ಞ ಮತ್ತು ಲೇಖಕ ಮೇಜರ್ ಡಾ. ಕುಶ್ವಂತ್ ಕೋಳಿಬೈಲು, ವಿಶ್ವದ ಬಹುತೇಕ ಸಾಧಕರು ಹಾಗೂ ಶ್ರೇಷ್ಠ ವ್ಯಕ್ತಿಗಳೆಲ್ಲರೂ ಬಡತನದ ಹಿನ್ನೆಲೆಯಿಂದಲೇ ಬಂದವರಾಗಿದ್ದು, ಬಡತನವಿದೆಯೆಂದು ಯಾರೂ ಧೃತಿಗೆಡಬೇಕಾಗಿಲ್ಲ, ಬದಲಾಗಿ ನಮ್ಮನ್ನು ನಾವು ಹೇಗೆ ತೊಡಗಿಸಿಕೊಳ್ಳುತ್ತೇವೆ ಎಂಬುದು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಷ್ಟçಪಿತ ಮಹಾತ್ಮ ಗಾಂಧಿ, ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು, ಸುಭಾಶ್ ಚಂದ್ರ ಬೋಸರು ಶ್ರೀಮಂತಿಕೆಯ ಹಿನ್ನೆಲೆಯಿದ್ದರೂ ಅವರು ತಮ್ಮನ್ನು ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದರಿAದಾಗಿಯೇ ಅವರು ರಾಷ್ಟçನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ, ನಾವು ನಮ್ಮನ್ನು ಸಮಾಜಮುಖಿಯಾಗಿ ತೊಡಗಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಸ್ಫೂರ್ತಿ ನೀಡಿದರು.
ಆಜಾದಿಕಾ ಅಮೃತ ಮಹೋತ್ಸವದ ಮಹತ್ವದ ಕುರಿತು ಮಾತನಾಡಿದ ಜಿಲ್ಲಾ ನೋಡಲ್ ಅಧಿಕಾರಿ, ಎನ್‌ಸಿಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಪ್ರಾಧ್ಯಾಪಕ ಮೇಜರ್ ಡಾ. ರಾಘವ. ಬಿ, ಬ್ರಿಟೀಷರಿಗಿಂತ ಮೊದಲು ಹಲವರು ನಮ್ಮ ದೇಶವನ್ನು ಆಡಳಿತ ನಡೆಸಿದ್ದರಾದರೂ ಭಾರತ ರಾಜಕೀಯವಾಗಿ ಒಂದಾಗಿರಲಿಲ್ಲ. ಆದರೆ, ಬ್ರಿಟೀಷರ ಆಳ್ವಿಕೆಗೆ ಅನುಕೂಲಕ್ಕಾಗಿ ಭಾರತದಲ್ಲಿ ಇಂಗ್ಲೀಷ್ ಬಳಕೆಗೆ ಬಂದಿತ್ತಾದರೂ, ವಿವಿಧ ಪ್ರಾಂತ್ಯಗಳಾಗಿ ವಿಂಗಡನೆೆಯಾಗಿದ್ದ ಭಾರತೀಯರು ಒಂದಾಗಲು ಇಂಗ್ಲೀಷ್ ಶಿಕ್ಷಣ ಅನುಕೂಲಕರವಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಸಿ. ಜಗತ್ ತಿಮ್ಮಯ್ಯ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಶಿಸ್ತನ್ನು ರೂಪಿಸಿಕೊಂಡರೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿತ್ವವಾಗಿಟ್ಟುಕೊಂಡು ಅದನ್ನು ಮುಂದಿನ ತಲೆಮಾರಿಗೂ ಸ್ವಚ್ಛಂದವಾಗಿ ಕಾಪಾಡಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿ ಸಂಘದ ಸಲಹೆಗಾರರು ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರಾದ ಬಿ.ಹೆಚ್. ತಳವಾರ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ತೃತೀಯ ಬಿ.ಕಾಂ, ಸಿ.ಎ ವಿದ್ಯಾರ್ಥಿನಿ ಪೂಜಿತ. ಪಿ.ಎಂ ಅವರು ವಂದಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ತೃತೀಯ ಬಿಎಸ್‌ಸಿ ವಿದ್ಯಾರ್ಥಿನಿ ಅನನ್ಯಾ ಅನಂತ್, ಉಪಾಧ್ಯಕ್ಷೆ, ತೃತೀಯ ಬಿಎಸ್‌ಸಿ ವಿದ್ಯಾರ್ಥಿನಿ ಪ್ರತೀಕ್ಷಾ, ಕಾರ್ಯದರ್ಶಿ, ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಮದನ್.ಕೆ.ಎಚ್, ಜಂಟಿ ಕಾರ್ಯದರ್ಶಿ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಅಪೂರ್ವ.ಎಚ್.ಜಿ, ಜಂಟಿ ಕಾರ್ಯದರ್ಶಿ, ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿ ಯತೀಶ್. ಪಿ.ವಿ, ಸಾಂಸ್ಕೃತಿಕ ಕಾರ್ಯದರ್ಶಿ, ದ್ವಿತೀಯ ಬಿ.ಎಸ್.ಸಿ ವಿದ್ಯಾರ್ಥಿನಿ ಹಿಬಾತುಲ್ ಬಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಾಂಶುಪಾಲರು ಹಾಗೂ ಪ್ರಸಕ್ತ ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಕಾವೇರಪ್ಪ, ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ದಂದಿಗಳು ಭಾಗವಹಿಸಿದ್ದರು.
ರಾಷ್ಟç ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರö್ಯ ದಿನಾಚರಣೆಯಂದು ಸನ್ಮಾನಿಸಿ ಗೌರವಿಸಲಾಯಿತು.