ಪೊನ್ನಂಪೇಟೆ, ಆ. ೧೭: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸಾಹಿತ್ಯ ಅಕಾಡೆÀಮಿ ಬೆಂಗಳೂರು, ಗೋಣಿಕೊಪ್ಪಲು ಕಾವೇರಿ ಕಾಲೇಜು ಕನ್ನಡ ಸಂಘ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಅಂಗವಾಗಿ, ಅಮೃತ ಪುಸ್ತಕ ಮಾರಾಟ ಅಭಿಯಾನ ಮತ್ತು ಸಾಕ್ಷö್ಯಚಿತ್ರ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಕಾಲೇಜು ಆವರಣದಲ್ಲಿ ಅಮೃತ ಪುಸ್ತಕ ಮಾರಾಟ ಅಭಿಯಾನಕ್ಕೆ ಚಾಲನೆ ನೀಡಿದರು. ಶೇ. ೫೦ ರಷ್ಟು ರಿಯಾಯಿತಿ ದರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಮಗ್ರ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾರಾಟ ಮಾಡಲಾಯಿತು.

ಈ ಸಂದರ್ಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾವೇರಿ ಕಾಲೇಜು ನಿವೃತ್ತ ಪ್ರಾಂಶುಪಾಲ ಹಾಗೂ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಸಾಕ್ಷö್ಯಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು, ಕಾರ್ಮಿಕರು, ರಾಜಕೀಯ ಮುತ್ಸದ್ದಿಗಳ, ವಿದ್ಯಾರ್ಥಿಗಳ, ಮಹಿಳೆಯರ ತ್ಯಾಗ ಬಲಿದಾನದಿಂದಾಗಿ ನಮಗೆ ಸ್ವಾತಂತ್ರö್ಯ ದೊರಕಿದೆ. ಸ್ವಾತಂತ್ರö್ಯ ಹೋರಾಟದಲ್ಲಿ ಕರ್ನಾಟಕದ ಅನೇಕ ಸ್ವಾತಂತ್ರ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಜೈಲುವಾಸ ಅನುಭವಿಸಿದ್ದಾರೆ. ಕೊಡಗಿನಲ್ಲಿಯೂ ಕೂಡ ಹೋರಾಟದ ವಿವಿಧ ರೋಚಕ ಮಜಲುಗಳನ್ನು ಕಾಣಬಹು ದಾಗಿದ್ದು, ಯಾವುದೇ ಜಾತಿ, ಧರ್ಮ ಪರಿಗಣಿಸದೇ, ದೇಶದ ಸಮಗ್ರತೆ, ಏಕತೆ, ಸಾರ್ವಭೌಮತ್ವ ಹಾಗೂ ಬಲಿಷ್ಠತೆಯನ್ನು ಕಾಪಾಡಿಕೊಂಡು ಹೋಗುವುದೇ, ನಾವು ಸ್ವಾತಂತ್ರö್ಯ ಹೋರಾಟದಲ್ಲಿ ಮಡಿದವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು.

ವಿದ್ಯಾರ್ಥಿಗಳಿಗೆ ಸಾಕ್ಷö್ಯಚಿತ್ರದ ಮೂಲಕ ಸ್ವಾತಂತ್ರö್ಯಕ್ಕಾಗಿ ಹೋರಾಟ ಮಾಡಿದ ಕರ್ನಾಟಕದ ಪ್ರಮುಖ ಹೋರಾಟಗಾರರ ಪರಿಚಯವನ್ನು ಮಾಡಿಕೊಡಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಥಮ ದರ್ಜೆ ಸಹಾಯಕ ಹರೀಶ್, ಸಿಬ್ಬಂದಿ ತೇಜಸ್, ಯೋಗಿಶ್ ಇದ್ದರು. ವಿದ್ಯಾರ್ಥಿ ವಸುಂಧರ ಭಾರ್ಗವ್ ಪ್ರಾರ್ಥಿಸಿ, ಕಾರ್ಯಕ್ರಮ ಸಂಚಾಲಕಿ ಡಾ. ರೇವತಿ ಪೂವಯ್ಯ ಸ್ವಾಗತಿಸಿ, ಉಪನ್ಯಾಸಕಿ ಎಸ್.ಎಂ. ರಜನಿ ವಂದಿಸಿ, ಸಂಜೀವ್ ನಿರೂಪಿಸಿದರು. ಹ್ಯಾರಿ ತಾಂತ್ರಿಕ ನಿರ್ವಹಣೆ ಮಾಡಿದರು.