ಮಡಿಕೇರಿ, ಆ.೧೭: ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ವೀರಾಜಪೇಟೆ ಟಿಎಚ್ಸಿ ವ್ಯಾಪ್ತಿಯ ವೀರಾಜಪೇಟೆ ಪಟ್ಟಣದಲ್ಲಿ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಯ ಕೋಟ್ಪಾ ಕಾಯ್ದೆ ಉಲ್ಲಂಘನೆ ಸಂಬAಧ ಅಂಗಡಿ, ಬಾರ್ ಹಾಗೂ ಹೊಟೇಲ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಆರೋಗ್ಯ ಶಿಕ್ಷಣವನ್ನು ನೀಡಿ ಸೆಕ್ಷನ್ ೪ ಅಡಿಯಲ್ಲಿ ೮೮೦ ರೂ, ಸೆಕ್ಷನ್ ೬೦ ಅಡಿಯಲ್ಲಿ ೫೦ ರೂ. ಒಟ್ಟು ೯೩೦ ರೂ ದಂಡ ಸಂಗ್ರಹಿಸಲಾಯಿತು.
ಈ ದಂಡದ ಮೊತ್ತವನ್ನು ಜಿಲ್ಲಾಧಿಕಾರಿಯವರ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯವರ ಜಂಟಿ ಖಾತೆಗೆ ಜಮಾ ಮಾಡಲಾಯಿತು. ಈ ಭೇಟಿಯಲ್ಲಿ ಜಿಲ್ಲಾ ಎಸ್ಆರ್, ಎಚ್ಐಒ, ಡಿಎಸ್ಒ ಕಚೇರಿ, ಜಿಲ್ಲಾ ತಂಬಾಕು ಕೋಶದ ಸಮಾಜ ಕಾರ್ಯಕರ್ತರು, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ, ತಾಲೂಕು ಎಸ್ಆರ್ ಎಚ್ಐಒ, ತಿತಿಮತಿ ಬಿಎಚ್ಇಒ ಬಾಳೆಲೆ ಬಿಎಚ್ಇಒ, ವೀರಾಜಪೇಟೆ ನಗರ ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.