ಮಡಿಕೇರಿ, ಆ. ೧೭: ಕೊಡವ ಕೂಟಾಳಿಯಡ ಕೂಟದ ಸಂಘಟನೆಯ ವತಿಯಿಂದ ಕೊಡವ ಮಕ್ಕಳಿಗಾಗಿ ಎರಡನೇ ವರ್ಷದ "ಕೊಡಗ್'ರ ಚುಪ್ಪಿ ಕೋಗಿಲೆಯ" ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ೧೫ ವರುಷದ ಒಳಗಿನ ಮಕ್ಕಳು ತಾವು ಯಾವುದೇ ಮ್ಯೂಸಿಕ್, ಕರೋಕೆ, ಆ್ಯಪ್ ಬಳಸದೇ ೩ ನಿಮಿಷದ ಒಳಗೆ ಹಾಡಿದ ಕೊಡವ ಭಾಷೆಯ ಹಾಡನ್ನು ಸೆಪ್ಟೆಂಬರ್ ೮ರೊಳಗೆ ೯೫೩೫೫೯೪೩೩೩ ಈ ವಾಟ್ಸಪ್ ಸಂಖ್ಯೆಗೆ ಕಳಿಸಬಹುದು.

ಎರಡು ಸುತ್ತಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಿರುದು, ನಗದು ಬಹುಮಾನ ಮತ್ತು ಎರಡನೇ ಸುತ್ತಿನಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು.

ಸ್ಪರ್ಧೆಯ ಮತ್ತಷ್ಟು ಮಾಹಿತಿ ಮತ್ತು ನಿಯಮಗಳಿಗಾಗಿ ಸಂಘಟನೆಯ ಅಧ್ಯಕ್ಷೆ ೯೬೬೩೨೬೭೨೪೯ ಚಿಮ್ಮಚಿರ ಪವಿತ ರಜನ್ ಕಾರ್ಯದರ್ಶಿ ೯೯೭೨೫೩೮೦೩೦ ಚೆಟ್ಟೋಳಿರ ಶರತ್ ಸೋಮಣ್ಣ ಅವರನ್ನು ಸಂಪರ್ಕಿಸಬಹುದು.