ಮಡಿಕೇರಿ, ಆ.೧೭: ಪ್ರಸಕ್ತ (೨೦೨೨-೨೩) ಸಾಲಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಾಡುವ “ನಾರೀಶಕ್ತಿ ಪುರಸ್ಕಾರ” ಪ್ರಶಸ್ತಿಗೆ ಜಿಲ್ಲೆಯಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ (ನಗರಾಭಿವೃದ್ಧಿ ಸಂಸ್ಥೆ, ಮುನಿಸಿಪಲ್ ಸಂಸ್ಥೆಗಳು ಮಹಿಳೆಯರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರಬೇಕು) ಅರ್ಹ ವ್ಯಕ್ತಿಗಳಿಂದ ಹಾಗೂ ಸಂಸ್ಥೆಗಳಿAದ ಅರ್ಜಿ ಆಹ್ವಾನಿಸಲಾಗಿದೆ.

ಕೇಂದ್ರ ಸರ್ಕಾರದಿಂದ ನೀಡಲಾಗುವ ನಾರೀಶಕ್ತಿ ಪ್ರಶಸ್ತಿಗಾಗಿ ಆನ್‌ಲೈನ್ ಮೂಲಕ ವೆಬ್‌ಸೈಟ್ ತಿತಿತಿ.ಚಿತಿಚಿಡಿಜs.gov. ನಲ್ಲಿ ಅಕ್ಟೋಬರ್ ೩೧ ರೊಳಗೆ ಅರ್ಜಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ದೂ.ಸಂ.೦೮೨೭೨-೨೯೮೩೭೯ ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.