(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಆ. ೧೪: ಭಾರತ ದೇಶಕ್ಕಿಂದು ಅತ್ಯಂತ ಸಂಭ್ರಮದ ದಿನ... ದೇಶದೆಲ್ಲೆಡೆ ಈ ಸಂತಸದ ಕ್ಷಣ ಸ್ಮರಣೀಯವಾಗಿಯೂ... ಅರ್ಥಪೂರ್ಣವಾಗಿಯೂ, ಯುವ ಪೀಳಿಗೆಗೆ ಉತ್ತೇಜನಕಾರಿಯಾಗಿಯೂ ಆಚರಿಸಲ್ಪಡುತ್ತಿದೆ. ತ್ರಿವರ್ಣ ಧ್ವಜ ಇಡೀ ಭಾರತದಾದ್ಯಂತ ರಾರಾಜಿಸುವ ಮೂಲಕ ಸ್ವಾತಂತ್ರೊö್ಯÃತ್ಸವದ ೭೫ನೆಯ ವರ್ಷ ಅಮೃತ ಮಹೋತ್ಸವವಾಗಿ ಭಾರತದ ಪ್ರತಿಯೊಬ್ಬ ಪ್ರಜೆಯಲ್ಲಿ ಹೃದಯಪೂರ್ವಕವಾದ ಭಕ್ತಿ-ಭಾವದ ಹೆಮ್ಮೆಯ ಪ್ರತೀಕವಾಗಿ ವಿಶ್ವದ ಗಮನವನ್ನು ಸೆಳೆಯುತ್ತಿದೆ.

ಅಂದು ದೇಶದ ಸ್ವತಂತ್ರಕ್ಕಾಗಿ ಹೋರಾಡಿದವರೆಷ್ಟೋ... ಸ್ವಾತಂತ್ರö್ಯ ಸಂಗ್ರಾಮದ ರಣಕಹಳೆ ಇಂದು ಇತಿಹಾಸದ ಪುಟದಲ್ಲಿ ಸೇರಿದೆ. ಲೆಕ್ಕವಿಲ್ಲದಷ್ಟು ಮಂದಿ ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ್ದಾರೆ... ಪ್ರಾಣ ತೆತ್ತಿದ್ದಾರೆ... ಈ ಹೋರಾಟದಲ್ಲಿ ರಕ್ತದೋಕುಳಿಯೂ ಹರಿದಿದೆ. ಇವರೆಲ್ಲರ ಆಗಿನ ಮಹತ್ಕಾರ್ಯದಿಂದಾಗಿ ೧೯೪೭ರಲ್ಲಿ ಭಾರತ ದೇಶ ಬ್ರಿಟೀಷರ ಕಪಿಮುಷ್ಟಿಯಿಂದ ಮುಕ್ತವಾಯಿತು. ಇವೆಲ್ಲವೂ ಮರೆಯಲಾಗದ ಘಟನೆಗಳು... ದೇಶದಲ್ಲಿ ಹುಟ್ಟುವ ಪ್ರತಿ ಮಕ್ಕಳಿಗೂ ಇದರ ಅರಿವು ಇರಲೇಬೇಕು ಕೂಡ... ರಾಷ್ಟçಪಿತ ಮಹಾತ್ಮಗಾಂಧಿಯಾದಿಯಾಗಿ ಲೆಕ್ಕವಿಲ್ಲದಷ್ಟು..., ಹೆಸರು ಉಲ್ಲೇಖಿಸಲಾಗದಷ್ಟು ನೇತಾರರು ಇದರ ಅಡಿಗಲ್ಲಾಗಿದ್ದಾರೆ. ಇವರೆಲ್ಲರೂ ಎಂದಿಗೂ ಅಜರಾಮರರು... ಇವರ ಸ್ಮರಣೆ ಈಗಿನ ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಹೌದು...

ಅಂದು ಸ್ವಾತಂತ್ರö್ಯ ಹೋರಾಟಗಾರರು...

ಇಂದು ಸೈನಿಕರು...

೧೯೪೭ಕ್ಕೆ ಮುನ್ನ ದೇಶ ರಕ್ಷಿಸಿ ಉಳಿಸಿದವರು ಸ್ವಾತಂತ್ರö್ಯ ಹೋರಾಟಗಾರರಾದರೆ... ಸ್ವಾತಂತ್ರಾö್ಯ ನಂತರದ ಸ್ಮರಣೀಯರು ದೇಶದ ಹೆಮ್ಮೆಯ ಸೈನಿಕರು ಎಂಬುದು ಪ್ರಸ್ತುತದ ಅಂಶ. ಲಭಿಸಿದ ಸ್ವಾತಂತ್ರö್ಯವನ್ನು ಉಳಿಸಿಕೊಂಡು ಜಾಗತಿಕ ಮಟ್ಟದಲ್ಲಿ ಭರತ ಖಂಡದ ಹಿರಿಮೆಯನ್ನು ಎತ್ತಿ ಹಿಡಿಯುತ್ತಿರುವವರು ನಿಜವಾಗಿಯೂ ಸೈನಿಕವರ್ಗ. ದೇಶಕ್ಕೆ ಎದುರಾದ... ಕೊಡಗಿನವರ ಕರ್ತವ್ಯವಾಗಿದೆ. ಇದರೊಂದಿಗೆ ಸ್ವಾತಂತ್ರಾö್ಯ ನಂತರದ ದೇಶವನ್ನು ಅವಲೋಕಿಸಿದರೆ, ದೇಶದ ರಕ್ಷಣಾ ಪಡೆಗೆ ಕೊಡಗು ಭಾರೀ ಕೊಡುಗೆಯನ್ನೇ ನೀಡಿದೆ. ಬ್ರಿಟಿಷ್ ಆಡಳಿತದ ನಂತರ ದೇಶದ ರಕ್ಷಣಾಪಡೆಯ ನಾಯಕತ್ವ ವಹಿಸಿಕೊಂಡ ಪ್ರಪ್ರಥಮ ಮಹಾದಂಡನಾಯಕ ಫೀ.ಮಾ.ಕೆ.ಎಂ. ಕಾರ್ಯಪ್ಪ. ನಂತರದಲ್ಲಿ ಜನರಲ್ ತಿಮ್ಮಯ್ಯ ಅವರಿಂದ ಹಿಡಿದು ಈ ತನಕವೂ ಮಿಲಿಟರಿಗೆ ಕೊಡಗಿನವರ ಸೇವೆ ಹೆಮ್ಮೆ ಪಡುವಂತದ್ದಾಗಿದೆ.

ಇಬ್ಬರು ಜನರಲ್‌ಗಳಿಂದ...

ಸ್ವಾತAತ್ರಾö್ಯ ನಂತರದ ಕೊಡಗಿನ ಸೈನಿಕ ಪರಂಪರೆ ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರುಗಳಿಂದ ಪ್ರಾರಂಭಗೊAಡಿದೆ. ಭೂಸೇನೆಯಲ್ಲಿ ಪುಟ್ಟ ಜಿಲ್ಲೆಯಿಂದ ಇಬ್ಬರು ಜನರಲ್‌ಗಳಾಗಿದ್ದರೆ, ೯ ಮಂದಿ ಲೆಫ್ಟಿನೆಂಟ್ ಜನರಲ್ಸ್, ೧೮ ಮಂದಿ ಮೇಜರ್ ಜನರಲ್ಸ್, ೨೦ಕ್ಕೂ ಅಧಿಕ ಬ್ರಿಗೇಡಿರ‍್ಸ್, ೫೦ಕ್ಕೂ ಅಧಿಕ ಕರ್ನಲ್ಸ್, ಸಾಕಷ್ಟು ಮಂದಿ ಲೆಫ್ಟಿನೆಂಟ್ ಕರ್ನಲ್ಸ್, ಮೇರ‍್ಸ್, ಕ್ಯಾಪ್ಟನ್, ಲೆಫ್ಟಿನೆಂಟ್‌ಗಳಾಗಿ ಅಧಿಕಾರಿಗಳಾಗಿದ್ದಾರೆ.

ವಾಯುಸೇನೆಯಲ್ಲೂ ನಾಲ್ವರು ಏರ್‌ಮಾರ್ಷಲ್ಸ್, ಒಬ್ಬರು ಏರ್‌ವೈಸ್ ಮಾರ್ಷಲ್, ಐವರು ಏರ್ ಕಮಾಡೋರ್. ನೌಕಾದಳದಲ್ಲಿ ಒಬ್ಬರು ರಿಯರ್ ಎಡ್ಮಿರಲ್ ಕಮಡರ‍್ಸ್ನಂತಹ ಪ್ರಮುಖ ಹುದ್ದೆಗಳನ್ನು ಕೊಡಗಿನವರು ನಿಭಾಯಿಸಿದ್ದಾರೆ. ಸಾವಿರಾರು ಸೈನಿಕರು ಕೊಡಗಿನಿಂದ ದೇಶ ರಕ್ಷಣೆಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಕೊಡಗು ಸೇನಾ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಪ್ರಸ್ತುತವೂ ದೇಶದ ಎನ್.ಎಸ್.ಜಿ.

(ಮೊದಲ ಪುಟದಿಂದ) ಮುಖ್ಯಸ್ಥ ಮನೆಯಪಂಡ ಎ. ಗಣಪತಿ, ಡಿ.ಜಿ. ಅಣ್ಣಳಮಾಡ ಸುನಿಲ್ ಅಚ್ಚಯ್ಯ, ಪ್ರಮುಖ ಜವಾಬ್ದಾರಿಗಳನ್ನು ಹೊಂದಿರುವ ಇಬ್ಬರು ಲೆಫ್ಟಿನೆಂಟ್ ಜನರಲ್ಸ್ ಸೇರಿದಂತೆ ಹಲವಷ್ಟು ಮಂದಿ ಉನ್ನತಾಧಿಕಾರಿ ಗಳಾಗಿಯೂ... ಸೈನಿಕರುಗಳಾಗಿಯೂ ಕಾರ್ಯನಿರ್ವಹಿಸುತ್ತಿ ದ್ದಾರೆ. ಮಹಾವೀರಚಕ್ರ, ವೀರಚಕ್ರ, ಶೌರ್ಯಚಕ್ರ, ಅಶೋಕ ಚಕ್ರದಂತಹ ಬಿರುದುಗಳನ್ನೂ ಜಿಲ್ಲೆಯ ಹಲವರು ಪಡೆದಿರುವುದು ಸ್ವಾತಂತ್ರಾö್ಯನAತರದ ಭಾರತದ ರಕ್ಷಣೆ - ಸೇವೆಯ ಹಾದಿಯಲ್ಲಿನ ಕೀರ್ತಿಯಾಗಿದೆ ಎಂಬುದೂ ಸ್ತುತ್ಯಾರ್ಹ. ಅರೆಸೇನಾ ಪಡೆಗಳ ಸಿಬ್ಬಂದಿಗಳು ಆಯಾ ರಾಜ್ಯಗಳ ಪೊಲೀಸರನ್ನೂ ನಾಗರಿಕರು ನೆನಪಿಸಿಕೊಳ್ಳಬೇಕಿದೆ. ಸ್ವಾತಂತ್ರö್ಯ ಪೂರ್ವದಲ್ಲಿ ಸ್ವಾತಂತ್ರö್ಯ ಸಂಗ್ರಾಮ ನಡೆದರೆ, ಸ್ವಾತಂತ್ರಾö್ಯ ನಂತರದಲ್ಲಿ ದೇಶ ಹಲವು ಯುದ್ಧಗಳನ್ನು ಎದುರಿಸಿದೆ.

ಪರರಾಷ್ಟçಗಳಿಂದ ಅನೇಕ ಸಮಸ್ಯೆ, ಆಂತರಿಕವಾದ ತೊಂದರೆಗಳು ಎದುರಾದಾಗಲೆಲ್ಲಾ ದೇಶದ ರಕ್ಷಕರು ಹೆಮ್ಮೆಯ ಸೈನಿಕರು... ಇದರಂತೆ ಸ್ವಾತಂತ್ರö್ಯ ಹೋರಾಟಗಾರರು ಅಜರಾಮರರಾದರೆ... ಸೈನಿಕರು ನಿತ್ಯನೂತನರು.