*ಗೋಣಿಕೊಪ್ಪ, ಆ. ೧೫: ಗೋಣಿಕೊಪ್ಪ ಪೊಲೀಸರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಅಕ್ರಮ ಲಾಟರಿ ಮಾರಾಟ ಮತ್ತು ಗೋಮಾಂಸ ಮಾರಾಟದ ಆರೋಪದಡಿ ಇಬ್ಬರು ಆರೋಪಿಗಳು ವಿರುದ್ಧ ಕ್ರಮಕೈಗೊಳ್ಳ ಲಾಗಿದೆ. ತಾ. ೧೪ ರಂದು ಕೇರಳ ರಾಜ್ಯದ ಅಕ್ರಮ ಲಾಟರಿ ಮಾರಾಟ ಆರೋಪದಡಿ ತಿತಿಮತಿ ದೇವರಕಾಡು ಪೈಸಾರಿಯ ಪಿ. ಚಂದ್ರ (೪೮) ವಿರುದ್ಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಕ್ರಮಕೈಗೊಂಡಿದ್ದಾರೆ.
ಆರೋಪಿಯಿAದ ೭,೪೦೦ ರೂ. ಮೌಲ್ಯದ ೧೪೮ ಲಾಟರಿಯನ್ನು ವಶಕ್ಕೆ ಪಡೆದು, ಅಲ್ಲಿನ ಬಸ್ ತಂಗುದಾಣದಲ್ಲಿ ಲಾಟರಿ ಮಾರುತ್ತಿದ್ದ ಆರೋಪದಂತೆ ವಶಕ್ಕೆ ಪಡೆದು ನಂತರ ಜಾಮೀನು ಮೂಲಕ ಬಿಡಲಾಯಿತು. ಕಾರ್ಯಾಚರಣೆಯಲ್ಲಿ ಪೊಲೀಸ್ ಉಪ ನಿರೀಕ್ಷಕ ದೀಕ್ಷಿತ್ ಕುಮಾರ್, ಸಹಾಯಕ ಉಪ ನಿರೀಕ್ಷಕ ಸುಬ್ರಮಣಿ, ಸಿಬ್ಬಂದಿ ಕೃಷ್ಣ, ಕೃಷ್ಣಪ್ಪ ಇದ್ದರು. ಹುಣಸೂರು ಭಾಗದಿಂದ ಗೋಮಾಂಸ ಮಾರಾಟ ಮಾಡುತ್ತಿರುವ ಆರೋಪದಡಿ ಬಾಳೆಲೆ ಕೊಪ್ಪಲು ನಿವಾಸಿ ಎಚ್.ಎಂ. ಅಜಯ್ (೩೫) ಅವರನ್ನು ಮಾಂಸ ಸಮೇತ ವಶಕ್ಕೆ ಪಡೆದು ಕ್ರಮಕೈಗೊಳ್ಳಲಾಗಿದೆ.
ಮಾಯಮುಡಿ ರಸ್ತೆ ಜಂಕ್ಷನ್‌ನಲ್ಲಿ ಅಜಯ್ ಸ್ಕೂಟರ್‌ನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಲಾಗಿದೆ. ಈ ಸಂದರ್ಭ ಸುಮಾರು ೧೨ ಸಾವಿರ ಮೌಲ್ಯದ ೪೦ ಕೆ.ಜಿ. ಮಾಂಸ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಆರೋಪಿಗೆ ಪೊನ್ನಂಪೇಟೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಕಾರ್ಯಾಚರಣೆ ಸಂದರ್ಭ ಪೊಲೀಸ್ ಉಪನಿರೀಕ್ಷಕ ದೀಕ್ಷಿತ್ ಕುಮಾರ್, ಸಹಾಯಕ ಉಪ ನಿರೀಕ್ಷಕ ಸುಬ್ರಮಣಿ, ಸಿಬ್ಬಂದಿ ಕೃಷ್ಣ, ಹನೀಫ್, ದೇವೇಂದ್ರ ನಾಯಕ್, ಕೃಷ್ಣಪ್ಪ, ಬಾಳೆಲೆ ಉಪ ಠಾಣೆ ಸಿಬ್ಬಂದಿ ಸಂತೋಷ್ ಇದ್ದರು.