ಮಡಿಕೇರಿ, ಆ. ೧೪: ಕೊಡಗು ಜಿಲ್ಲೆಯಲ್ಲಿ ಹಲವು ವಿಶಿಷ್ಟ ಸಂಪ್ರದಾಯ ಆಚರಣೆಗಳು ಇವೆ. ಪುರಾತನ ಕಾಲದಿಂದಲೂ ಒಂದಲ್ಲಾ ಒಂದು ರೀತಿಯ ವಿಶಿಷ್ಟತೆಗಳು ಹೆಚ್ಚಿನ ಪ್ರಚಾರವಿಲ್ಲದೆ ಅದರಷ್ಟಕ್ಕೆ ಪರಿಪಾಲನೆಯಾಗುತ್ತಾ ಬರುತ್ತಿದೆ. ಇವುಗಳಲ್ಲಿ ಒಂದಾಗಿರುವುದು ಕಕ್ಕಡತಜ್ಜಿ... ಎಂಬ ಸಂಪ್ರದಾಯ. ಬಹುಶಃ ಇದು ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರಕ್ಕೆ ಬಂದಿಲ್ಲವಾದ್ದರಿAದ ಈ ಬಗ್ಗೆ ಯಾರಿಗೂ ಇದರ ಅರಿವು ಇಲ್ಲ. ಈ ಆಚರಣೆ ನಡೆಯುವುದು ಕಡಿಯತ್ನಾಡ್ ಎಂದು ಕರೆಯಲ್ಪಡುವ ಗ್ರಾಮಗಳ ವ್ಯಾಪ್ತಿಯಲ್ಲಿ ಅರಪಟ್ಟು, ಪೊದವಾಡ, ಕರಡ, ಚೆಯ್ಯಂಡಾಣೆ, ಪಾಲಂಗಾಲ, ಎಡಪಾಲ, ಕೋಕೇರಿ ವ್ಯಾಪ್ತಿಯ ಗ್ರಾಮಗಳಲ್ಲಿ ವಾರ್ಷಿಕವಾಗಿ ಕಕ್ಕಡ ತಿಂಗಳಿನಲ್ಲಿ ಈ ಆಚರಣೆ ಕಂಡು ಬರುತ್ತಿದೆ.
ನರಿಯಂದಡ ವ್ಯಾಪ್ತಿಯಲ್ಲಿರುವ ಅರಮನೆಪಾಲೆ ಜನಾಂಗ ಈ ಕಕ್ಕಡತಜ್ಜಿ ಎಂಬ ಪದ್ಧತಿಯನ್ನು ಆಚರಿಸುತ್ತಾ ಬರುತ್ತಿದೆ. ಇದು ಇಂದು ನಿನ್ನೆಯ ಸಂಪ್ರದಾಯವಲ್ಲ. ಹಿಂದಿನ ಕಾಲದಲ್ಲಿ ಇಡೀ ಕಕ್ಕಡ ಮಾಸಪೂರ್ತಿ ನಡೆಯುತಿತ್ತಂತೆ. ಆದರೆ ಇದೀಗ ಕಕ್ಕಡ ೧೮ರ ನಂತರದಿAದ ಈ ಮಾಸ ಪೂರ್ಣಗೊಳ್ಳುವವರೆಗೆ ಜರುಗುತ್ತದೆ. ಇದು ಒಂದು ರೀತಿಯಲ್ಲಿ ಕೋಲದ ಮಾದರಿಯ ಸಂಪ್ರದಾಯ.
(ಮೊದಲ ಪುಟದಿಂದ) ಕಕ್ಕಡತಜ್ಜಿ (ಭಗವತಿ ದೇವಿ ವೇಷ) ದೊಡ್ಡ ಮೀಸೆಯ ಕಳ್ಂಜಕಳಿ ಹಾಗೂ ಮುಖವಾಡ ಹಾಕಿದ (ಮೊಗ) (ವಿಷ್ಣು ಮೂರ್ತಿ) ವೇಷಧಾರಿಗಳಾಗಿ ‘ಕಳಿ’ ಹೊರಟಿರಲಾಗಿರುತ್ತದೆ. ಅರಪಟ್ಟು ಭಗವತಿ ದೇವಸ್ಥಾನದಿಂದ ಇದು ಆರಂಭಗೊAಡು ನಂತರದಲ್ಲಿ ತಕ್ಕರಾದ ಮುಕ್ಕಾಟಿರ ಐನ್ಮನೆ, ಪಾಂಡAಡ, ಐತಿಚಂಡ ಬಳಿಕ ಚೇಲಾವರ ಪೊನ್ನೋಲ ದೇವಸ್ಥಾನ, ಪುದಿಯೋದಿ ದೇವಸ್ಥಾನ ಪಾಡಿಯಮ್ಮಂಡ ಮನೆ, ಹೊಸೊಕ್ಲು ಮನೆ, ಬಾಚಮಂಡ ಬಳಿಕ ನರಿಯಂದಡ ದೇವಸ್ಥಾನ ಬೋವೇರಿಯಂಡ, ಕೋಲಿರ ಮನೆ, ಕಿರುಂದಾಡು ದೇವಸ್ಥಾನ ನಂತರದಲ್ಲಿ ಕೋಕೇರಿ ವ್ಯಾಪ್ತಿಗೆ ತೆರಳಲಾಗುತ್ತದೆ.
ಕಡಿಯತ್ನಾಡ್ ವ್ಯಾಪ್ತಿಯ ದೇವಸ್ಥಾನಗಳು ಎಲ್ಲಾ ಜನಾಂಗದ ಐನ್ಮನೆ ಸೇರಿದಂತೆ ಪ್ರಮುಖ ಮನೆಗಳಿಗೆ ತೆರಳಿ ಅಲ್ಲಿ ಚಂಡೆ ಸಹಿತವಾಗಿ ಸಂಪ್ರದಾಯದAತೆ ನೃತ್ಯ... ಹಾಡು... ಇತ್ಯಾದಿಗಳೊಂದಿಗೆ ಪದ್ಧತಿ - ಕಟ್ಟುಪಾಡನ್ನು ಪಾಲಿಸಲಾಗುತ್ತದೆ ಎಂದು ಅರಮನೆಪಾಲೆ ಜನಾಂಗದ ಈ ಸಂಪ್ರದಾಯ ಪಾಲಿಸುವ ಮಂದಿ ಹೇಳುತ್ತಾರೆ. ಈ ‘ಕಳಿ’ ಆಗಮಿಸುವ ಸಂದರ್ಭ ಅವರನ್ನು ಆಯಾ ದೇವಸ್ಥಾನ... ಮನೆಗಳಲ್ಲಿ ಸ್ವಾಗತಿಸಿ, ಕಟ್ಟುಪಾಡಿನಂತೆ ಸತ್ಕರಿಸಲಾಗುತ್ತದೆ.
ಮನೆಯಲ್ಲಿರುವ ಎಲ್ಲರಿಗೂ ಇವರು ಆಶೀರ್ವಾದವನ್ನು ಮಾಡುತ್ತಾರೆ. ಮುಖ್ಯವಾಗಿ ನೊಕ್ಕಿ ಸೊಪ್ಪಿನೊಂದಿಗೆ ಇರುವ ಕಕ್ಕಡತಜ್ಜಿಯ ಆಶೀರ್ವಾದ ಇಲ್ಲಿ ಮುಖ್ಯ. ಊರಿನ ದಾರಿದ್ರö್ಯ ಹೋಗಲಾಡಿಸುವುದು, ಆರೋಗ್ಯಕ್ಕೆ ಸಂಬAಧಿಸಿದAತೆ ಈ ಆಚರಣೆ ನಡೆಯುತ್ತದೆ ಎಂಬದು ಒಂದು ಅಂಶ. ಕಳಿ (ವೇಷ) ಹೊರಟವರು ಈ ಪದ್ಧತಿ ಪೂರ್ಣವಾಗುವವರೆಗೂ ಮಾತನಾಡುವುದಿಲ್ಲ ಎಂಬದು ಮತ್ತೊಂದು ವಿಶೇಷವಾಗಿದೆ.
ಸ್ಥಳೀಯರಾದ ಚೆಲ್ಮಂಡ ಬೆಲ್ಲು ಅವರು ಹೇಳುವಂತೆ... ಇದೊಂದು ವಿಶಿಷ್ಟವಾದ, ಪುರಾತನ ಕಾಲದಿಂದ ನಡೆಯುತ್ತಿರುವ ಆಚರಣೆ ಇದಾಗಿದೆ. ಕಕ್ಕಡತಜ್ಜಿ... ಮನೆಗೆ ಬಂದಾಗ ಶಕ್ತಾö್ಯನುಸಾರ ಅಕ್ಕಿ, ಭತ್ತ, ಹಣ್ಣು - ಹಂಪಲಿನ ಮೂಲಕ ನೈವೇದ್ಯದ ರೀತಿಯಲ್ಲಿ ಪದ್ಧತಿಯನ್ನು ನಡೆಸಲಾಗುವುದು. ಕೊಡವ ಜನಾಂಗದವರು ಸೇರಿದಂತೆ ಕಡಿಯತ್ನಾಡ್ ವ್ಯಾಪ್ತಿಯ ಎಲ್ಲಾ ಜನಾಂಗದ ಮಲೆಗಳಿಗೆ, ದೇವಸ್ಥಾನಗಳಿಗೆ ತೆರಳಲಾಗುತ್ತದೆ. ಈ ಹಿಂದೆ ಎಲ್ಲಾ ಮನೆ ಮನೆಗಳಿಗೆ ಹೋಗುವ ಪದ್ಧತಿ ಇತ್ತು. ಇದೀಗ ಕೇವಲ ಆಯಾ ಕುಟುಂಬದ ಐನ್ಮನೆಗಳಿಗೆ ತೆರಳುವದು ವಾಡಿಕೆಯಾಗಿದೆ. ದೇವಸ್ಥಾನಗಳಲ್ಲಿ ತಕ್ಕರು... ಇನ್ನಿತರ ಪ್ರಮುಖರು ಬರಮಾಡಿಕೊಳ್ಳುತ್ತಾರೆ.
ಮತ್ತೊಬ್ಬರು ಸ್ಥಳೀಯರಾದ ನಂಬಿಯಪAಡ ರಂಜು ನಾಣಯ್ಯ ಅವರ ಅಭಿಪ್ರಾಯದಂತೆ ಕಕ್ಕಡ ಮಾಸದಲ್ಲಿ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿರುವದರಿಂದ ದೇವಸ್ಥಾನಗಳಿಗೆ ತೆರಳುವದು ಕಷ್ಟಕರವಾಗಿರುತ್ತದೆ. ಈ ಸಂದರ್ಭ ಅರಮನೆಪಾಲೆ ಜನಾಂಗದವರು ದೇವರ ಮೂಲ ಸ್ವರೂಪದೊಂದಿಗೆ ಕೋಲ ಕಟ್ಟಿ ಮನೆ ಮನೆಗೆ ಬಂದು ಆಶೀರ್ವಾದ ಮಾಡುತ್ತಾರೆ. ಅರಪಟ್ಟು ಭಗವತಿ ದೇವಸ್ಥಾನದಿಂದ ಇದು ಆರಂಭಗೊಳ್ಳುತ್ತದೆ. ನೊಕ್ಕಿ ಸೊಪ್ಪು ಇಲ್ಲಿ ಪ್ರಮುಖವಾಗಿರುತ್ತದೆ ಎನ್ನುತ್ತಾರೆ.
ಹಿನ್ನೆಲೆ
ಕೊಡಗಿನ ಮೂಲನಿವಾಸಿ ಜನಾಂಗದಲ್ಲಿ ಒಂದಾಗಿರುವ ಅರಮನೆಪಾಲೆ ಜನಾಂಗ ನರಿಯಂದಡ ವ್ಯಾಪ್ತಿಯಲ್ಲಿ ನೆಲೆಸಿದೆ. ಕಕ್ಕಡತಜ್ಜಿ... ಆಚರಣೆಯ ಕುರಿತಾಗಿ ಈ ಜನಾಂಗದವರಾದ ನವೀನ್ ಅವರು ತಮ್ಮ ಅನುಭವವನ್ನು ‘ಶಕ್ತಿ’ಯೊಂದಿಗೆ ಹಂಚಿಕೊAಡರು. ಈ ಹಿಂದೆ ಒಂದೆಡೆ ತೆರೆಕಟ್ಟಿ ಹಿಂತಿರುಗುತ್ತಿದ್ದ ಸಂದರ್ಭ ನೊಕ್ಕಿ ಮರದ ಕೆಳಗೆ ಓರ್ವ ಮಹಿಳೆ ನಗ್ನಾವಸ್ಥೆಯ ರೀತಿಯಲ್ಲಿ ಚಡಪಡಿಸುತ್ತಿದ್ದರಂತೆ. ಮೊದಲು ಎರಡು ತಂಡ ಈ ದಾರಿಯಲ್ಲಿ ಸಾಗಿದಾಗ ಅವರ ಚಂಡೆಗೆ ಆಕೆ ಕಲ್ಲು ಎಸೆದು ಗಮನ ಸೆಳೆದರೂ ಅವರು ಹಿಂತಿರುಗಿ ನೋಡಿರಲಿಲ್ಲ. ನಂತರದಲ್ಲಿ ಅರಮನೆಪಾಲೆ ಜನಾಂಗ ಸಾಗಿದಾಗ ಅವರ ಚಂಡೆಗೂ ಕಲ್ಲು ಬಿದ್ದಿದೆ. ಇದೇನು ಶಬ್ದ ಎಂದು ಅವರು ತಿರುಗಿ ನೋಡಿದಾಗ ಆ ಮಹಿಳೆಯ ದುಸ್ಥಿತಿ ಅರಿವಾಗಿದೆ. ಆಗ ಆಕೆ ಇವರ ಚಂಡೆಯ ಮೇಲಿದ್ದ ಬಟ್ಟೆಯನ್ನು ಮಾನ ರಕ್ಷಣೆಗಾಗಿ ಕೇಳಿದಾಗ ಅವರು ದೂರದಿಂದಲೇ ವಸ್ತçವನ್ನು ಎಸೆದು ಕೊಟ್ಟಿದ್ದಾರೆ. ಬಳಿಕ ಆಕೆ ದೈವೀ ಸ್ವರೂಪದ ಮಹಿಳೆ ಎಂದು ಅರಿವಾಗಿದೆ. ಈ ಸಂದರ್ಭ ಆ ದೇವಿ ತನ್ನ ರಕ್ಷಣೆಗೆ ಬಂದ ಇವರನ್ನು ಆಶೀರ್ವದಿಸಿ ಪ್ರತಿವರ್ಷ ಕಕ್ಕಡ ಮಾಸದಲ್ಲಿ ತನ್ನನ್ನು ಆರಾಧಿಸಿದರೆ, ಜನಾಂಗಕ್ಕೆ ಹಾಗೂ ಗ್ರಾಮಕ್ಕೆ ಒಳಿತಾಗುತ್ತದೆ ಎಂಬ ವರ ನೀಡಿದ್ದರಂತೆ. ಇದರಂತೆ ಈ ಪದ್ಧತಿಯನ್ನು ಪರಿಪಾಲಿಸಿಕೊಂಡು ಬರಲಾಗುತ್ತಿರುವುದಾಗಿ ಅವರು ಹೇಳಿದರು. - ಶಶಿ ಸೋಮಯ್ಯ