ಮಡಿಕೇರಿ, ಆ. ೧೪: ವಾರ್ತಾ ಇಲಾಖೆ ಹೊರಡಿಸಿದ ದೇಶದ ಸ್ವಾತಂತ್ರö್ಯ ಹೋರಾಟದ ಜಾಹೀರಾತಿನಲ್ಲಿ, ಒಬ್ಬೇ ಒಬ್ಬ ಕೊಡವರ ಹೆಸರನ್ನು ಸೇರಿಸದಿರುವುದು ಖಂಡನೀಯ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರ ಅಸಮಾಧಾನ ಹೊರಹಾಕಿದೆ. ಕೂಡಲೆ ಕೊಡಗು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಮಧ್ಯ ಪ್ರವೇಶ ಮಾಡಿ ಪ್ರಮಾದವನ್ನು ಸರಿ ಪಡಿಸುವಂತೆ ಆಗ್ರಹಿಸಿದೆ.

ಭಾರತ ಸ್ವಾತಂತ್ರಕ್ಕಾಗಿ ಹೋರಾಡಿದವರಲ್ಲಿ, ಅತೀ ಸಣ್ಣ ಜನಾಂಗವಾದ ಕೊಡವರ ಪಾಲು ಸಾಕಷ್ಟಿದೆ. ಕೊಡಗಿನಲ್ಲಿ ಸ್ವಾತಂತ್ರ ಮಡಿಕೇರಿ, ಆ. ೧೪: ವಾರ್ತಾ ಇಲಾಖೆ ಹೊರಡಿಸಿದ ದೇಶದ ಸ್ವಾತಂತ್ರö್ಯ ಹೋರಾಟದ ಜಾಹೀರಾತಿನಲ್ಲಿ, ಒಬ್ಬೇ ಒಬ್ಬ ಕೊಡವರ ಹೆಸರನ್ನು ಸೇರಿಸದಿರುವುದು ಖಂಡನೀಯ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರ ಅಸಮಾಧಾನ ಹೊರಹಾಕಿದೆ. ಕೂಡಲೆ ಕೊಡಗು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಮಧ್ಯ ಪ್ರವೇಶ ಮಾಡಿ ಪ್ರಮಾದವನ್ನು ಸರಿ ಪಡಿಸುವಂತೆ ಆಗ್ರಹಿಸಿದೆ.

ಭಾರತ ಸ್ವಾತಂತ್ರಕ್ಕಾಗಿ ಹೋರಾಡಿದವರಲ್ಲಿ, ಅತೀ ಸಣ್ಣ ಜನಾಂಗವಾದ ಕೊಡವರ ಪಾಲು ಸಾಕಷ್ಟಿದೆ. ಕೊಡಗಿನಲ್ಲಿ ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿ ನಿಂತ ಸುಮಾರು ೧೫೦ಕ್ಕೂ ಅಧಿಕ ಕೊಡವ ನೇತಾರರು, ಕೊಡವ ಕಾರ್ಯಕರ್ತರು ಅನೇಕ ಜೀವ ಸವೆಸಿದ್ದಾರೆ.

ಹೀಗಿರುವಾಗ ಸರಕಾರ ಇಂತ ಮಹಾನ್ ಚೇತನಗಳನ್ನು ಈ ಸಂದರ್ಭದಲ್ಲಿ ನೆನೆಪಿಸಿಕೊಳ್ಳದೇ ಇರುವುದು, ಜನಾಂಗಕ್ಕೆ ಮಾಡಿದ ಅವಮಾನವಾಗಿದೆ ಎಂದು ಸಂಘಟನೆ ಪರವಾಗಿ ಅಧ್ಯಕ್ಷ ಚಾಮೇರ ದಿನೇಶ್ ಆಕ್ಷೇಪಿಸಿದ್ದಾರೆ. ಅಲ್ಲದೆ ಕೊಡಗು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕೂಡಲೆ ಮಧ್ಯಪ್ರವೇಶ ಮಾಡಿ ಪ್ರಮಾದವನ್ನು ಸರಿಪಡಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.