ಸೋಮವಾರಪೇಟೆ, ಆ. ೧೪: ಕಳೆದ ಒಂದು ತಿಂಗಳಿನಿAದ ಇಲ್ಲಿನ ಶ್ರೀಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಜರುಗಿದ ಕರ್ಕಾಟಕ ಮಾಸದ ವಿಶೇಷ ಪೂಜೆಯು ತಾ.೧೫ರಂದು (ಇಂದು) ಮುಕ್ತಾಯಗೊಳ್ಳಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ ತಿಳಿಸಿದ್ದಾರೆ.
ಕರ್ಕಾಟಕ ಮಾಸದಲ್ಲಿ ಸತತವಾಗಿ ಒಂದು ತಿಂಗಳು ಪ್ರತಿನಿತ್ಯ ಭುವನೇಶ್ವರಿ ಸನ್ನಿಧಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಮತ್ತು ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಭಗವತಿ ದೇವಿಗೆ ದುರ್ಗಾದೀಪ ನಮಸ್ಕಾರ ಪೂಜೆ ಜರುಗಿತು.
ತಾ.೧೫ರಂದು (ಇಂದು) ಬೆಳಿಗ್ಗೆ ೯ ಗಂಟೆಗೆ ದೇವಾಲಯದಲ್ಲಿ ಶ್ರೀಸೂಕ್ತ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಮಧ್ಯಾಹ್ನ ಮಹಾಮಂಗಳಾರತಿಯೊAದಿಗೆ ಪೂಜೆ ಮುಕ್ತಾಯಗೊಳ್ಳಲ್ಳಿದೆ. ಪೂಜೆಯ ನಂತರ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.