ಗೋಣಿಕೊಪ್ಪ ವರದಿ, ಆ. ೧೩: ಬಿ.ಶೆಟ್ಟಿಗೇರಿ ಕೊಂಗಣ ಗ್ರಾಮದ ತೋಡಿನಲ್ಲಿ ಅಪರಿಚಿತ ಪುರುಷ ಶವ ಪತ್ತೆಯಾಗಿದೆ.
ನಾಮೇರ ಬೆಳ್ಯಪ್ಪ ಅವರ ಗದ್ದೆಯ ಹತ್ತಿರ ತೋಡಿನಲ್ಲಿ ಶನಿವಾರ ಪತ್ತೆಯಾಗಿದ್ದು, ಅಂದಾಜು ೨೫-೩೫ ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಕೆಂಪು ಬಣ್ಣದ ಟಿ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು ದೇಹವು ಕೊಳೆತ ಸ್ಥಿತಿಯಲ್ಲಿದೆ. ಮಡಿಕೇರಿ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರು ಇದ್ದಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.