ಶನಿವಾರಸಂತೆ, ಆ. ೧೩: ಸಮೀಪದ ಹಿರಿಕರ ಗ್ರಾಮದ ಕೃಷಿಕರಾದ ಎಚ್.ಎಂ. ಈರಮ್ಮ ಅವರ ಕಾಫಿ, ಅಡಿಕೆ ತೋಟದಲ್ಲಿ ತೋಡಿನ ನೀರು ಹರಿದು ಬರುತ್ತಿದ್ದು, ಬರೆ ಕುಸಿದು ಮುಕ್ಕಾಲು ಎಕರೆ ತೋಟದಲ್ಲಿ ಬೆಳೆ ಹಾನಿಯಾಗಿದೆ.

ವಿಪರೀತ ಮಳೆಯ ಕಾರಣ ತೋಡು ತುಂಬಿ ತೋಟದೊಳಗೆ ಹರಿಯು ತ್ತಿದ್ದು, ಬರೆ ಕುಸಿದಿದೆ. ದೊಡ್ಡ ಮರಗಳು ಉರುಳಿ ಗಿಡಗಳ ಮೇಲೆ ಬಿದ್ದಿದ್ದು, ನಾಲ್ಕೆöÊದು ವರ್ಷದ ಅಡಿಕೆ ಮರಗಳು ಮುರಿದು ಬಿದ್ದಿವೆ. ಕಾಫಿ ಗಿಡಗಳು ನಾಶವಾಗಿವೆ ಎಂದು ಈರಮ್ಮ ಅಳಲು ತೋಡಿಕೊಂಡರು.

ಗೌಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶನಿವಾರಸಂತೆ ಕಂದಾಯ ಇಲಾಖೆಗೂ ಈರಮ್ಮ ಮನವಿ ಸಲ್ಲಿಸಿದ್ದಾರೆ.