ಸೋಮವಾರಪೇಟೆ, ಆ. ೧೩: ತಾಲೂಕು ಬಂಟರ ಯಾನೆ ನಾಡವರ ಸಂಘದ ಆಟಿದ ಕೂಟ ಮತ್ತು ವಾರ್ಷಿಕ ಮಹಾಸಭೆ ತಾ.೧೪ರಂದು ಬೆಳಿಗ್ಗೆ ೯ ಗಂಟೆಯಿAದ ೬ ಗಂಟೆವರೆಗೆ ಇಲ್ಲಿನ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ.ಬಿ.ಜನಾರ್ಧನಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧೦ ರಿಂದ ೧ ಗಂಟೆಯವರೆÀಗೆ ಜನಾಂಗದ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಆಟಿದ ಆಟೋಟ ಸ್ಪರ್ಧೆಗಳು ನಡೆಯಲಿವೆ. ೨ಗಂಟೆಯಿAದ ೪ರ ವರೆಗೆ ವಾರ್ಷಿಕ ಮಹಾಸಭೆ ನಡೆಯಲಿದೆ. ಸಂಜೆ ೪ಗಂಟೆಯಿAದ ೬ಗಂಟೆಯ ವರಗೆ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
೨೦೨೧-೨೨ನೇ ಸಾಲಿನ ಹತ್ತನೆ ತರಗತಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.೮೦ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಸಮಾಜದ ಸಾಧಕರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಉದ್ಯಮಿ ಐತಪ್ಪ ರೈ, ಬೆಂಗಳೂರಿನ ಉದ್ಯಮಿ ಕಾರ್ತಿಕ್ಶೆಟ್ಟಿ, ಕುಶಾಲನಗರ ಆರತಿ ಹೆಲ್ತ್ ಕೇರ್ನ ಡಾ. ಹರಿ ಎ. ಶೆಟ್ಟಿ, ಸಂಘದ ಗೌರವ ಅಧ್ಯಕ್ಷ ಕೃಷ್ಣಪ್ಪಶೆಟ್ಟಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.೯೫೩೫೬೨೮೦೦೮ ಸಂಪರ್ಕಿಸಬಹುದು.
ಗೋಷ್ಠಿಯಲ್ಲಿ ಖಜಾಂಚಿ ಮಂಜುನಾಥ ಚೌಟ, ಯುವ ಬಂಟರ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಶೆಟ್ಟಿ, ನಿರ್ದೇಶಕರುಗಳಾದ ಹಂಸರಾಜ ಶೆಟ್ಟಿ, ಉಮೇಶ್ಶೆಟ್ಟಿ ಇದ್ದರು.