ಮುಳ್ಳೂರು, ಆ. ೧೧: ಶನಿವಾರಸಂತೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಚಿನ್ನಳ್ಳಿ ಗ್ರಾಮದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು.

ರೋಟರಿ ಸಂಸ್ಥೆಯ ಜಿಲ್ಲಾ ಪದಗ್ರಹಣಾಧಿಕಾರಿ ಡಾ.ಪ್ರಶಾಂತ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಶನಿವಾರಸಂತೆ ರೋಟರಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೋಟರಿ ಕ್ಲಬ್ ಸದಸ್ಯರ ಸಮಾಜ ಸೇವೆಯ ಮನೋಭಾವನೆ, ರೋಟರಿ ಸಂಸ್ಥೆಯ ಯೋಜನೆ ಮತ್ತು ಅದನ್ನು ಕಾರ್ಯ ರೂಪಕ್ಕೆ ತರುವು ಬಗ್ಗೆ ಮಾಹಿತಿ ನೀಡಿದರು. ಪದಗ್ರಹಣ ಸಮಾರಂಭದಲ್ಲಿ ಶನಿವಾರಸಂತೆ ರೋಟರಿ ಕ್ಲಬ್‌ನ ೨೦೨೨-೨೩ನೇ ಸಾಲಿನ ಅಧ್ಯಕ್ಷರಾಗಿ ಕೆ.ಪಿ. ಜಯಕುಮಾರ್ ಮತ್ತು ಕಾರ್ಯ ದರ್ಶಿಯಾಗಿ ಎ.ಡಿ. ಮೋಹನ್ ಕುಮಾರ್ ಅವರುಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಸಮಾರಂಭ ದಲ್ಲಿ ರೋಟರಿ ಕ್ಲಬ್‌ನ ಸಹಾಯಕ ರಾಜ್ಯಪಾಲ ಸತೀಶ್ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ವಲಯ ಸೇನಾನಿ ಹೆಚ್.ವಿ. ದಿವಾಕರ್, ವಿವಿಧ ರೋಟರಿ ಕ್ಲಬ್‌ನ ಪದಾಧಿಕಾರಿಗಳು, ರೋಟರಿ ಕ್ಲಬ್‌ನ ಮಹಿಳಾ ಸದಸ್ಯರು, ರೋಟರಿ ಕ್ಲಬ್ ಸದಸ್ಯರು, ಹಿಂದಿನ ಸಾಲಿನ ಪದಾಧಿ ಕಾರಿಗಳು ಹಾಜರಿದ್ದರು. ಈ ಸಂದರ್ಭ ಹತ್ತನೆ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಮತ್ತು ಅವರ ಪೋಷಕರನ್ನು ಗೌರವಿಸಲಾಯಿತು.