ಮಡಿಕೇರಿ, ಆ. ೧೧: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಮಡಿಕೇರಿಯ ಇನ್ನರ್ ವೀರ್ ಸಂಸ್ಥೆ ವತಿಯಿಂದ ನಗರದ ಡೈರಿಫಾರಂ ಬಳಿಯ ಅಂಗನವಾಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭ ಮಾತನಾಡಿದ ಇನ್ನರ್ ವೀಲ್ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್, ಮಗುವಿಗೆ ತಾಯಿ ಹಾಲಿಗಿಂತ ಆರೋಗ್ಯಕರವಾದ ಹಾಲು ಮತ್ತೊಂದಿಲ್ಲ. ಸ್ತನ್ಯಪಾನದ ಮೂಲಕ ಬಾಲ್ಯದಲ್ಲಿಯೇ ಕಂದಮ್ಮಗಳನ್ನು ಪೌಷ್ಟಿಕಾಂಶ ಭರಿತ ಹಾಲಿನೊಂದಿಗೆ ಉತ್ತಮ ಆರೋಗ್ಯ ಲಭಿಸುವಂತೆ ಮಾಡಬಹುದು ಎಂದರಲ್ಲದೇ, ಗರ್ಭಿಣಿಯರು, ಬಾಣಂತಿಯರು ಯಾವ ರೀತಿಯಲ್ಲಿ ಆರೋಗ್ಯ ಸುರಕ್ಷತೆ ಕಾಪಾಡಿಕೊಳ್ಳಬಹುದೆಂಬ ಮಾಹಿತಿ ನೀಡಿದರು.

ಈ ಸಂದರ್ಭ ಅಂಗನವಾಡಿಯಲ್ಲಿನ ಮಹಿಳೆ ಮತ್ತು ಮಗುವಿನ ಔಷಧಿ ವೆಚ್ಚಕ್ಕಾಗಿ ೨,೫೦೦ ರೂಪಾಯಿಗಳನ್ನು ಇನ್ನರ್ ವೀಲ್ ಸಂಸ್ಥೆಯಿAದ ನೀಡಲಾಯಿತು. ಅಂತೆಯೇ ಮಹಿಳೆಯರಿಗೆ ಔಷಧಿ ಕಿಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಇನ್ನರ್ ವೀಲ್ ಕಾರ್ಯದರ್ಶಿ ಲಲಿತಾ ರಾಘವನ್, ಆಡಳಿತ ಮಂಡಳಿ ನಿರ್ದೇಶಕಿಯರಾದ ಉಮಾಗೌರಿ, ಮಲ್ಲಿಗೆ ಪೈ ಹಾಜರಿದ್ದರು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.