ಪೊನ್ನAಪೇಟೆ, ಆ. ೧೦: ಪೊನ್ನಂಪೇಟೆಯಲ್ಲಿ ಕೇರಳ ರಾಜ್ಯದ ಲಾಟರಿ ಟಿಕೇಟು ಮಾರಾಟ ಮಾಡುತ್ತಿದ್ದ ನಾಲ್ಕೇರಿ ಗ್ರಾಮದ ತೀಯರ ವೇಣು (೫೦) ಎಂಬವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಇಂದು ಸಂಜೆ ೬ ಗಂಟೆಯ ಸಮಯದಲ್ಲಿ ಇಲ್ಲಿನ ಕಾನೂರು ಜಂಕ್ಷನ್ ಬಸ್ ನಿಲ್ದಾಣದ ಬಳಿ ಲಾಟರಿ ಟಿಕೇಟು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿ ಇದ್ದ ೪೦ ರೂಪಾಯಿ ಮುಖಬೆಲೆಯ ೧೦೯ ಲಾಟರಿ ಟಿಕೇಟ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಡಿ.ಕುಮಾರ್, ಕ್ರೆöÊಂ ಸಬ್ ಇನ್ಸ್ಪೆಕ್ಟರ್ ಹೆಚ್.ಸಿ. ಸುಬ್ರಮಣಿ, ಸಿಬ್ಬಂದಿ ಎಂ.ಡಿ. ಮನು, ಎಸ್.ಬಿ. ಮಹದೇಶ್ವರ ಸ್ವಾಮಿ, ಸಂತೋಷ್ ಹಾಗೂ ಮಹೇಂದ್ರ ಪಾಲ್ಗೊಂಡಿದ್ದರು.