ನಾಪೋಕ್ಲು, ಆ. ೧೦: ಸ್ಥಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊರ ರಾಜ್ಯದ ಕಾರ್ಮಿಕರಿಂದ ಅಪರಾಧ ಪ್ರಕರಣಗಳ ದೂರುಗಳು ಬರುತ್ತಿದ್ದು ಎಲ್ಲಾ ಸಾರ್ವಜನಿಕರು ತಮ್ಮ ತೋಟ ಗಳಲ್ಲಿ, ಹೋಂಸ್ಟೇ, ರೆಸಾರ್ಟ್ಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರ ವಿವರ ಮತ್ತು ಅವರ ದಾಖಲಾತಿಗಳೊಂದಿಗೆ ಕೂಡಲೇ ಠಾಣೆಗೆ ಕರೆದುಕೊಂಡು ಬಂದು ನೋಂದಾಯಿಸಿಕೊಳ್ಳಬೇಕೆAದು ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಸದಾಶಿವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.